ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬುದ್ದ ಪೂರ್ಣಿಮಾ ವಿಶೇಷ

ಕರುಣಾ ಸಾಗರ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

Buddha with Bath Oil Hot Stones and Orchid

ಶಾಂತಿ ಪ್ರೀತಿ ನೀತಿಯ ಜ್ಯೋತಿ
ಬೆಳ್ಳಂಬೆಳಕು ಹರಡಿದ ರೀತಿ
ಆನಂದಿಸಿ ನಮಿಸೋಣ ಬನ್ನಿ

ಸಿದ್ಧರ ಸಿದ್ಧಪುರುಷ ಸಿದ್ಧಾರ್ಥ
ದಯೆ ಕರುಣೆಗಳೇ ನಿನ್ನ ಸಿದ್ಧಾಂತ
ಅದನರಿತ ಮನುಜ ಕೃತಾರ್ಥ

ನಿನ್ನ ಮನವೇ ನಿನಗೆ ಶತೃ ಮಿತ್ರ ಅದನರಿವ ಜಾಣ್ಮೆನಿನ್ನ ಕೈಲಿಮಾತ್ರ
ಬೋಧಿಸಿದೆ ನೀನು ಸರ್ವತ್ರ

ನಿಮ್ಮ ನಡೆ ನುಡಿ ಶಾಂತಿ ಮಂತ್ರ
ಸಾರಿದೆ ನೆಮ್ಮದಿನಂಬಿಕೆಯ ತಂತ್ರ ದುಃಖದಮೂಲ ಆಸೆಯೇಕುತಂತ್ರ

ಪಂಚಭೂತಗಳ ನಶ್ವರ ಶರೀರಕೆ
ಪಂಚಶೀಲತತ್ವಗಳನು ಅರುಹಿದೆ
ಪ್ರಬುದ್ಧ ಬುದ್ಧನಾಗಿ ಬೆಳಗಿದೆ

ಜಾತಿಭೇದ ಲಿಂಗಭೇದ ತೊಡೆದೆ
ಅಹಂಕಾರಮಮಕಾರಬೇಡವೆಂದೆ
ಧ್ಯಾನಯೋಗಿ ಜ್ಞಾನನಿಧಿ ನೀನಾದೆ

ತಿಂಗಳನ ಬೆಳದಿಂಗಳಿನಂತೆ
ತಂಪು ಕಂಪಿನ ಮಲ್ಲಿಗೆಯಂತೆ
ಮುಗ್ಧ ಮಗುವಿನ ನಗೆಯಂತೆ
ಕರುಣಾಸಾಗರ ನಿನಗೆ ನಮಸ್ಕಾರ


ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ ಪುಣೆ

About The Author

Leave a Reply

You cannot copy content of this page

Scroll to Top