ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಗಜಲ್
ಸುರಿವ ಮಳೆಯು ತಂಪು ನೀಡಲು
ಬಳಿಗೆ ಕರೆದೆಯಾ ನೀನು
ಹರಿವ ಜಲಧಾರೆಯ ಜುಳುಜುಳು
ನಿನಾದದಲಿ ಬೆರೆದೆಯಾ ನೀನು
ಮಬ್ಬು ಆವರಿಸಿದಂತೆ ಕಂಬನಿಯ
ಬಿಂದುಗಳು ಮಡುಗಟ್ಟಿವೆ
ತಬ್ಬಿದ ನೂರಾರು ತೊಡಕುಗಳ ಸರಿಸಿ
ಪ್ರೇಮದ ಮಳೆಗರೆದೆಯಾ ನೀನು
ನಿರೀಕ್ಷೆಗಳೆಲ್ಲಾ ಹುಸಿಯಾಗಿ ಕನಸುಗಳು
ನೆಲಕಚ್ಚಿ ಜೀವ ಹಪಹಪಿಸುತಿತ್ತು
ಪರೀಕ್ಷೆಗಳಲಿ ಬೆಂದುಬಸವಳಿದಾಗ ದೈವತ್ವದಂತೆ
ಬಂದೆನ್ನ ಪೊರೆದೆಯಾ ನೀನು
ಬಾಳಿನಲಿ ಇರಬೇಕಿದೆ ಸವಿನೆನಪುಗಳ
ಹೂರಣ ಎಂದು ಬಗೆದಿದ್ದೆ
ನಾಳಿನ ದಿನಗಳ ಸಾರ್ಥಕತೆಗೆ ಪ್ರಭೆಯ
ಕದವ ತೆರೆದೆಯಾ ನೀನು
ಎಲ್ಲ ಅತಿಗಳಿಗೂ ಅಂತ್ಯವಿದೆ ಎಂದು
ಮಾಲಳಿಗೆ ಅರ್ಥೈಸಿರುವೆ
ಬಲ್ಲ ಆಂತರ್ಯದ ಅಭಿಲಾಷೆಗಳಿಗೆ
ಒತ್ತಾಸೆಯಾಗಿ ಮೆರೆಸಿದೆಯಾ ನೀನು.
ಮಾಲಾ ಚೆಲುವನಹಳ್ಳಿ