ಯಶೋದ.ಗಾಣೀಗ ಕವಿತೆ–ದುಂಬಿ ನೀ ದೂರವಿರು!

ಕಾವ್ಯ ಸಂಗಾತಿ

ಯಶೋದ.ಗಾಣೀಗ

ದುಂಬಿ ನೀ ದೂರವಿರು!

ಕೆಂಪಾದ ಗುಲಾಬಿ ಹೂವು ಅರಳಿದೆ
ದುಂಬಿಯೊಂದು ಬಂದು ರಸ ಹೀರಿದೆ/
ಹೂವಿನ ಮಧುವ ಹೀರದಿರು ದುಂಬಿ
ಎಲ್ಲೆಲ್ಲೂ ಹರಡಿದೆ ಹೂವ ರಾಶಿ ತುಂಬಿ.//

ಹಸಿರಿನ ವನಸಿರಿಯ ಹೂ ನಡುವಿನಲ್ಲಿ
ಹೂವಿನ ಮಕರಂದವ ಹೀರುತ್ತವಲ್ಲಿ/
ನಿಸರ್ಗವೇ ನಾಚಿ ನೀರಾಗಿಯಿತು ಮನ
ಸುವಾಸನೆ ಭರಿತ ತಂಪೆರೆಯುವ ಗಮನ.//

ಎಲ್ಲೆಲ್ಲೂ ಹರಡಿದೆ ಗುಲಾಬಿ ಕೆಂಪಾಗಿ
ನೋಡಲು‌ ಬಹಳ ಸುಂದರವಾಗಿ/
ಹಸಿರು ಕಾನನದ ನಡುವೆ ಸುಂದರ
ಕಣ್ಣಲ್ಲಿ ನಿನ್ನ ನೋಡುವುದೆ ಅಲಂಕಾರ.//

ಜೋಡಿಯಾಗುವ ಪ್ರೇಮದ ಕಾಣಿಕೆ
ಕೊಡುವರು ನಿನ್ನನೇ ಹೂವಿನ ಚಂದಕೆ/
ಕೆಂಪಾಗಿ ನಾಚುವಳು ನನ್ನಯ ನಲ್ಲೆಯು
ನಡುವರು ಹೆಂಗೆಳೆಯರು ತೋಟದಲ್ಲಿಯು.//


ಯಶೋದ.ಗಾಣೀಗ

Leave a Reply

Back To Top