‘ಜಲದಗ್ನಿ’ ಪೌರಾಣಿಕ ಕಾದಂಬರಿರಚನೆ :ಯ ರು ಪಾಟೀಲ.

ಕಾವ್ಯ ಸಂಗಾತಿ

ಯ ರು ಪಾಟೀಲ ವಿರಚಿತ ಕಾದಂಬರಿ

‘ಜಲದಗ್ನಿ’

ಪರಿಚಯ ಡಾ. ಪ್ರಿಯಂವದಾ ಮ ಹುಲಗಬಾಳಿ.

ನಾವೆಲ್ಲ ತಿಳಿದ ಹಾಗೆ ಜಲ ಮತ್ತು ಅಗ್ನಿ ಎರಡೂ ಪರಸ್ಪರ ವಿರುದ್ಧ ಕ್ರಿಯೆಗಳನ್ನು ಸೂಚಿಸುವ ಪದಗಳು. ಈ ಎರಡೂ ಪದಗಳು ಸೇರಿ ಒಂದು ಹೆಸರಾಗುತ್ತದೆ ಅದು ರೇಣುಕಾದೇವಿಯ ಪತಿ,ಪರುಶುರಾಮನ ತಂದೆ ‘ಜಮದಗ್ನಿ’ಯ ಮೊದಲಿನ ಅಥವಾ ಮೂಲಹೆಸರು ಎಂಬುದು ಈ ಕಾದಂಬರಿಯಿಂದಲೇ ತಿಳಿದು ಬರುತ್ತದೆ.
     ಕನ್ನಡ ಸಾಹಿತ್ಯಲೋಕಕ್ಕೆ ಯ ರು ಪಾಟೀಲ್ ಸರ್ ಅವರ ಕೊಡುಗೆ ಅಪಾರ. ಐತಿಹಾಸಿಕ, ಪೌರಾಣಿಕ, ಸಂಶೋಧನಾತ್ಮಕ ಕೃತಿಗಳ ಮೂಲಕ ನಾಡಿನಲ್ಲಿ ಹೆಸರು ಮಾಡಿದ ಶ್ರೇಷ್ಠ ಸಾಹಿತಿಗಳು.
  ‘ಕರೋನಾ ‘ದ ಕರಾಳ ದಿನಗಳನ್ನು ಧಾರಾಳವಾಗಿ ಬಳಸಿಕೊಂಡು ಸಾಹಿತ್ಯ ರಚನೆಯಂತಹ ಒಳ್ಳೆಯ ಕಾರ್ಯ ಮಾಡಿದ್ದಾರೆ. ವೃತ್ತಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಾಗಿ ಅದರಲ್ಲೂ ತಹಶಿಲ್ದಾರ ಆಗಿ ನಿವೃತ್ತಿ ಹೊಂದಿದವರು.ಪ್ರವೃತ್ತಿಯಿಂದ ಸಾಹಿತಿಗಳಾಗಿ ಓದುಗರ ಜನಮಾನಸದಲ್ಲಿ  ಪ್ರಸಿದ್ಧಿ ಪಡೆದವರು.
    ‘ಜಲದಗ್ನಿ’ ಬಗ್ಗೆ ಹೇಳುವುದಾದರೆ’೪೮೩’ ಪುಟಗಳ ಕಥಾನಕ ಹೊಂದಿರುವ ೫೪೦ ಪುಟಗಳ ಬೃಹತ್ ಕಾದಂಬರಿ. ಭೂಮಿಕೆಯ ಮೂಲಕ ಕಾದಂಬರಿ ಆರಂಭವಾಗುತ್ತದೆ. ಪ್ರವಾಸಿಗರಾಗಿ ಬಂದ ಯುವಕರ ಮನದಲ್ಲಿ ಹುಟ್ಟುವ ಕುತೂಹಲ ಕಾದಂಬರಿಯ ಭೂಮಿಕೆ. ಇಂದಿನ ಯುವ ಜನಾಂಗ ಮನಸ್ಸು ಮಾಡಿದರೆ ನಮ್ಮ ಪೌರಾಣಿಕ ಪಾತ್ರಗಳು ಜೀವ ತಳೆದು ನಿಲ್ಲಬಲ್ಲವು ಎಂಬ ಆಶಯದಿಂದ ಲೇಖಕರು ಈ ಸನ್ನಿವೇಶ ಸೃಷ್ಟಿಸಿರುವರು ಎಂಬ ಊಹೆ ನನ್ನದು.
  ತಾಯಿ ರೇಣುಕೆಯ ದರ್ಶನಕ್ಕೆ ಬಂದವರೆಲ್ಲರೂ ‘ಜಮದಗ್ನಿ’  ದರುಶನಕೆ ‘ಅಡ್ರಾಸಿ,’ ಬರುವುದಿಲ್ಲ ಎಂಬ ಸಂಶಯ ಪರಿಹರಿಸಲು ‘ಜಮದಗ್ನಿ’ ಮಹರ್ಷಿಗಳ ಮೂಲ ನಾಮಧೇಯ ‘ ಜಲದಗ್ನಿ’ ಎನ್ನುವುದು ಓದುಗರಿಗೆ ತಿಳಿಸಿಕೊಡುವ ಪರಿ ಮೆಚ್ಚಿಗೆ ಎನಿಸುತ್ತದೆ. ಅಶೋಕ ಕಪ್ಪಣ್ಣವರ ಅವರಿಗೆ ಗದಿಗೆಪ್ಪ ಮೇಟಿ ಅವರು ಉತ್ತರಿಸಿದ ರೀತಿ, ೩೯ಅಧ್ಯಾಯಗಳುದ್ದಕ್ಕೂ ಸುದೀರ್ಘವಾಗಿ ಕಥೆ ಹಬ್ಬಿದೆ.
  ಮಲಪಹಾರಿ ಹೊಳೆಯ ದಡದ ಸಿದ್ಧಾಚಲ ಪರ್ವತದ ತಮ್ಮ ಕುಟೀರದಲ್ಲಿ ಒಬ್ಬಳೇ ಇದ್ದಾಗ ರೇಣುಕಾ ದೇವಿಗೆ ತನ್ನ ಮದುವೆಯ ನೆನಪಿನ ಸುರುಳಿ ಮನಃಪಟಲದಲ್ಲಿ ತೇಲಿ ಬರುತ್ತದೆ ರೇಣುಕರಾಜ ಭೋಗಾವತಿ ರಾಣಿಯ ಕುಮಾರಿಯೇ ರಾಜಕುಮಾರಿ ರೇಣುಕಾದೇವಿ . ಸ್ವಯಂವರ ಏರ್ಪಡಿಸಿ ಅವಳ ವಿವಾಹ ಮಾಡಬೇಕೆಂಬ ತಂದೆಯ ವಿಚಾರವನ್ನು ತಾಯಿ ಹೇಳಿದಾಗ, ಮುನಿಪುಂಗವರು ಸ್ವಯಂವರದಲ್ಲಿ ಭಾಗವಹಿಸುವ ವಿಷಯ ರಾಜಕುಮಾರಿಗೆ ಆಶ್ಚರ್ಯ ಉಂಟುಮಾಡುತ್ತದೆ. ಹಿಂದೆ ರಾಜಮನೆತನಗಳು ಮುನಿಪುಂಗವರ ಮಧ್ಯ ಆದ ವೈವಾಹಿಕ ಸಂಬಂಧಗಳ ಉದಾಹರಣೆಗಳನ್ನು ಭೋಗಾವತಿದೇವಿ ಮಗಳ ಮುಂದೆ ಹೇಳುತ್ತಾರೆ. ಈಗ ಅಂತ ಋಷಿಗಳು ಯಾರಿದ್ದಾರೆ ಎಂಬ ಪ್ರಶ್ನೆ ಬಂದಾಗ ‘ಜಲದಗ್ನಿ’ ಹೆಸರು ಪ್ರಸ್ತಾಪವಾಗುತ್ತದೆ. ‘ಜಲದಗ್ನಿ’ ಮಹರ್ಷಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ರೇಣುಕಾದೇವಿಯಲ್ಲಿ. ರೇಣುಕ ರಾಜನಿಗೆ ಅಗಸ್ತ್ಯಮುನಿ ಗಳೆಂದರೆ ಅಪಾರ ಗೌರವ ಅರಮನೆಯಲ್ಲಿ ಏನೇ ವಿಶೇಷ ನಡೆದರು ಅಲ್ಲಿ ಅಗಸ್ತ್ಯರ ಉಪಸ್ಥಿತಿ ಅವಶ್ಯವಾಗಿ ಹೀಗೆ ಅಗಸ್ತ್ಯರು ಆಗಮಿಸಿದ ಸಂದರ್ಭದಲ್ಲಿ ರಾಣಿ ಮಗಳ ಕುತೂಹಲದ ವಿಷಯ ಪ್ರಸ್ತಾಪಿಸಿ ಜನದನಿ ಮಹರ್ಷಿಯ ಪೂರ್ವಜರ ಕುರಿತು ಕೇಳಲು ಉತ್ಸುಕರಾಗಿದ್ದಾರೆ ಎಂದಾಗ ಅಗಸ್ತ್ಯ ಮಹರ್ಷಿಗಳು ಜಲದಗ್ನಿ ಮಹರ್ಷಿಯ ಪೂರ್ವಜರ ಕುರಿತು ಹೇಳಲು ಪ್ರಾರಂಭಿಸುತ್ತಾರೆ. ಜಲದಗ್ನಿ ಕೂಡ ಅಷ್ಟಾಂಗ್ ಯೋಗಗಳಲ್ಲಿ ಪರಿಣಿತರು ಎಂದು ತಿಳಿಸಿದಾಗ ಅಲ್ಲಿ ಯೋಗದ ಮಹತ್ವ ಮತ್ತು ವಿವಿಧ ಪ್ರಕಾರದ ಯೋಗಗಳ ಕುರಿತು ವಿವರಿಸಿದ್ದಾರೆ. ಇದು ಕಾದಂಬರಿಕಾರರ ಜಾಣ್ಮೆಗೆ ಸಾಕ್ಷಿಯಾಗಿದೆ. ಪೌರಾಣಿಕ ಕಾದಂಬರಿ ಯಾಗಿದ್ದರು ಪ್ರಸ್ತುತ ಪರಿಸ್ಥಿತಿಗೆ ಅವಶ್ಯಕ ಎನ್ನುವ ಅಂಶಗಳನ್ನು ಕಾದಂಬರಿಗಳಲ್ಲಿ ಪರಿಚಯಿಸಿದ್ದಾರೆ ಅನಿವಾರ್ಯತೆ ಇಂದಿನ ಜನಾಂಗಕ್ಕೆ ಅವಶ್ಯಕ ಎಂಬುದನ್ನು ಕಾದಂಬರಿಕಾರರು ಸವಿಸ್ತಾರವಾಗಿ ಹೇಳಿದ್ದಾರೆ ಜನದನಿ ಕೃಷಿಯ ಪೂರ್ವಜರು ಭೃಗು ಋಷಿ ಅವರು ಐದನೆಯ ಮನ್ವಂತರದ ಸಪ್ತರ್ಷಿಗಳು ಒಬ್ಬರು ಮನ್ವಂತರ ಎಂದರೇನು ಎಂಬ ಭೋಗವತಿ ರಾಣಿಯ ಪ್ರಶ್ನೆಗೆ ಬ್ರಹ್ಮ ವರ್ಷದ ಕಾಲಾವಧಿಯ ಬಗ್ಗೆ ವಿವರವಾದ ವಿಷಯಗಳನ್ನು ವಿವರಿಸಿದ್ದಾರೆ. ಇಂದ್ರಿಯ ಸಯಂಮ, ಪ್ರಾಣಾಯಾಮ ಮುಂತಾದ ಸಾಧಕ ವಿದ್ಯೆಗಳ ವಿವರಣೆ ಇದರಲ್ಲಿ ಆಸಕ್ತಿ ಹುಟ್ಟಿಸುತ್ತದೆ.
  ಬೃಗು-ಪುಲೋಮೆ ಋಷಿ ದಂಪತಿಗಳ ಪುತ್ರ ಚ್ಯವನ ಮಹರ್ಷಿ‌.ಚ್ಯವನರ ಪುತ್ರ ಔರ್ವ‌.ಅವರ ಪುತ್ರ ಋಚಿಕ.ಋಚಿಕ ಸತ್ಯವತಿಯರ ಮಗ ನಮ್ಮ ಕಥಾನಾಯಕ ‘ಜಲದಗ್ನಿ’ ಮಹರ್ಷಿ. ತಾಯಿ ಪುಲೋಮೆಯನ್ನು ಪುಲೋಮನೆಂಬ ರಾಕ್ಷಸನಿಂದ ರಕ್ಷಿಸಲೆಂದೇ ಜನಿಸಿದವರು ಚ್ಯವನರು. ಈ ಕಥೆ ತುಂಬಾ ರೋಚಕವಾಗಿ ಮೂಡಿ ಬಂದಿದೆ. ಪುಲೋಮ ನೆಂಬ ರಾಕ್ಷಸ ಭೃಗು ಮಹರ್ಷಿಗಳ ಪತ್ನಿ ಪುಲೋಮೆಯನ್ನು ಅಪಹರಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ತಾಯಿಯ ಗರ್ಭದಿಂದ ಸೂರ್ಯನಂತಹ ತೇಜಸ್ಸನ್ನು ಹೊಂದಿದ ಮಗು ಹೊರಬಂದು ಕಣ್ಣುಗಳಿಂದ ಅಗ್ನಿಯನ್ನು ಸುರಿಸಿ ರಕ್ಷಿಸುತ್ತದೆ. ಆ ಮಗುವೇ ಚ್ಯವನ ಮಹರ್ಷಿಗಳು. ಅದೇ ಕಥೆಯಲ್ಲಿ ಅಗ್ನಿದೇವನ ಪ್ರಸಂಗದ ವಿವರಣೆಯು ಕೂಡ ಮೂಡಿಬಂದಿದೆ. ವೆಂಕಟೇಶ ಮಾಹತ್ಮೆಯಲ್ಲಿ ಬಂದ ಭೃಗು ಮುನಿಗಳ ಉಲ್ಲೇಖವನ್ನು ಹೇಳಿ ಭೃಗು ಸಂಹಿತೆ ಕೃತಿಯ ಬಗ್ಗೆ ತಿಳಿಸಿದ್ದಾರೆ ಯೌವನ ಮಹರ್ಷಿಗಳು ಸುಕನ್ಯ ವಿವಾಹವಾದ ಸಂಧರ್ಭ ಮನಕಲಕುವಂತಿದೆ ಕಾಡಿನಲ್ಲಿ ತಪಸ್ಸಿಗೆ ಕುಳಿತಾಗ ಮೈಮೇಲೆ ಹುತ್ತ ಬೆಳೆದು ಬಳ್ಳಿ ಸುತ್ತಿಕೊಂಡು ಅಲುಗಾಡದೆ ಇದ್ದಾಗ ಅಲ್ಲಿಗೆ ಬಂದ ಸುಖನೆ ಬರೀ ಕಣ್ಣುಗಳು ಮಾತ್ರ ಚಲಿಸುತ್ತಿರುವ ಈ ಪ್ರಾಣಿ ಯಾವುದು ಎಂದು ಹುಡುಕಾಟದಿಂದ ತೆಗೆದುಕೊಂಡು ಎರಡು ಕಣ್ಣುಗಳಿಗೆ ಚುಚ್ಚಿ ಬಿಡುತ್ತಾಳೆ ಆಗ ಋಷಿಯ ಆರ್ತನಾದ ಇಡೀ ಕಾಡನ್ನು ಅಲುಗಾಡಿಸಿ ಬಿಡುತ್ತದೆ ರಾಜ ಪರಿವಾರದವರು ಅದು ಯಾವ ಪ್ರಾಣಿಯಲ್ಲ ಮಹರ್ಷಿಗಳು ಎಂದು ಅರಿತಾಗ ಅವರ ಕಾಲಿಗೆ ಬಿದ್ದು ಈ ತಪ್ಪಿಗೆ ಪ್ರಯಶ್ಚಿತ್ತ ವಾಗಿ ತಾವು ಏನು ಹೇಳಿದರು ಮಾಡಲು ಸಿದ್ಧರಿದ್ದೇವೆ ಎಂದು ಸುಕನ್ಯ ತಂದೆ ಹೇಳಿದಾಗ ಮಹರ್ಷಿಗಳು ಕಣ್ಣುಗಳನ್ನು ಕಳೆದುಕೊಂಡು ಅಂಧನಾದ ನನಗೆ ಸೇವೆಮಾಡಲು ನಿನ್ನ ಮಗಳನ್ನು ಮದುವೆ ಮಾಡಿಕೊಡು ಎನ್ನುತ್ತಾನೆ. ರಾಜನಿಗೆ ಗಾಬರಿಯಾಗುತ್ತದೆ ಆದರೆ ಮಗಳು ಋಷಿಯ ಮಾತಿಗೆ ಒಪ್ಪಿಕೊಳ್ಳುತ್ತಾಳೆ. ಹೀಗೆ ಚ್ಯವನ ಮಹರ್ಷಿಗಳ ಸುಕನ್ಯೆಯ ವಿವಾಹ ಜರಗುತ್ತದೆ. ಅವರು ಕಾಡಿನಲ್ಲಿ ಜೀವನ ಸಾಗಿಸುತ್ತಿರುವಾಗ ಸೂರ್ಯ ತೇಜ ಚಂದ್ರ ತೇಜ ಇವರಿಂದ ಸುಕನ್ಯ ಚ್ಯವನರ ಯೌವನ ಮತ್ತು ಕಣ್ಣುಗಳನ್ನು ಮರಳಿ ದೊರಕುವಂತೆ ಮಾಡುತ್ತಾಳೆ ಉಪಕಾರ ಮಾಡಿದವರಿಗೆ ಯಜ್ಞಯಾಗಾದಿಗಳಲ್ಲಿ ಸುರಪಾನ ಮಾಡಿಸುವ ಮಾತು ಕೊಡುತ್ತಾರೆ ಆದರೆ ಇಂದ್ರ ಇದಕ್ಕೆ ಒಪ್ಪುವುದಿಲ್ಲ ಅದೆಲ್ಲವನ್ನೂ ಸವಿಸ್ತಾರವಾಗಿ ಹೆಣೆದಿದ್ದಾರೆ ಇಲ್ಲಿ ಕಾದಂಬರಿಕಾರರು ಅಗಸ್ತ್ಯರಿಂದ ಜಲದಗ್ನಿಯ ಪೂರ್ವಜರ ಕಥೆಯನ್ನು ಮಾತ್ರ ಕೇಳಿಸುವುದಿಲ್ಲ ,ಅದರೊಂದಿಗೆ ಭೋಗವತಿ ಮಧ್ಯಮಧ್ಯ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುವ ರೀತಿಯು ಆಕರ್ಷಕವಾಗಿದೆ.
ರುಚಿಕ ಸತ್ಯವತಿಯ ರ ವಿವಾಹದ ಪ್ರಸಂಗವನ್ನು ರೋಚಕವಾಗಿ ಚಿತ್ರಿಸಿದ್ದಾರೆ. ಸಾವಿರ ಬಿಳಿ ಕುದುರೆಗಳು ಅದರಲ್ಲಿಯೂ ಎಡಗಡೆಯ ಒಂದೇ ಕಿವಿಯು ಕಪ್ಪಾಗಿರಬೇಕು ಅಂತಹ ಕುದುರೆಗಳನ್ನು ತರಬೇಕು ಎಂಬ ಕರಾರನ್ನು ಹಾಕಿ ಮಹಾರಾಜ ಋಚಿಕರಿಗೆ ಮಗಳನ್ನು ಕೊಡುವ ಮಾತು ಮಾಡುತ್ತಾನೆ. ಆದರೆ ಋಚಿಕ ಮಹರ್ಷಿ ಅಷ್ಟೇ ಶೂರನೂ ಆಗಿರುತ್ತಾನೆ ,ಹೀಗಾಗಿ ಕರಾರಿನಲ್ಲಿ ಗೆದ್ದು ಸತ್ಯವತಿಯನ್ನು ಮದುವೆಯಾಗುತ್ತಾನೆ. ಇಲ್ಲಿ ಮಂತ್ರಿ ಆದಿತ್ಯ ಅಮಾತ್ಯ ಆತನ ಮಗ ವಿಶ್ವ ತೇಜ ಈ ಪಾತ್ರಗಳು ಬರುತ್ತವೆ. ವಿಶ್ವ ತೇಜ ನಿಗೆ ಸತ್ಯವತಿಯ ಬಗ್ಗೆ ಅಷ್ಟೇ ಅಲ್ಲ ಲೌಕಿಕ ಬದುಕಿನ ಬಗ್ಗೆಯೂ ಯಾವ ಆಸಕ್ತಿಯೂ ಇಲ್ಲ. ಸತ್ಯವತಿಯ ತಾಯಿ ಪುತ್ರ ಸಂತಾನ ಗೋಸ್ಕರ ಮಗಳಿಗೆ ನೆನಪಿಸುವ ಸಂದರ್ಭ. ಚರುದ್ರವ್ಯ ಅದಲು ಬದಲಾದದ್ದು ಅದರಿಂದ ವಿಶ್ವಾಮಿತ್ರ ಮತ್ತುವೈಮನಸ್ಸು ಯರ ಜನನದ ರಹಸ್ಯ ಓದುಗರ ಮುಂದೆ ತೆರೆದಿಟ್ಟಿದ್ದಾರೆ ಮುಂದೆ ಸಾಧನೆ ವಿಶ್ವಾಮಿತ್ರರ ಹಠ ವರಿಷ್ಠರೊಂದಿಗೆ ವೈಮನಸ್ಸು,ಜಲದಗ್ನಿಯಿಂದ ಸಿದ್ದಿಗೆ ಮಾರ್ಗದರ್ಶನ, ಸೋದರಳಿಯಿಂದ ತಪೋವಿದ್ಯೆಯ ಸಾಧಿಸಿದ ವಿಶ್ವತೇಜ ಇಂತಹ ಹಲವಾರು ರೋಚಕ ಸಂಗತಿಗಳಿಂದ ಕಾದಂಬರಿ ಓದಿಸಿಕೊಂಡು ಹೋಗುತ್ತದೆ.
ಜಲದ ಗ್ನಿ ರೇಣುಕೆಯ ವಿವಾಹ ಸನ್ನಿವೇಶ ರೇಣುಕರಾಜನ ಕುವರಿ ಕಾಡಿನಲ್ಲಿ ಕುಟೀರದಲ್ಲಿ ರುಚಿಕ ಸತ್ಯವತಿಯ ಪೋಷಣೆಯಲ್ಲಿ ಅರಮನೆಯನ್ನು ಸಂತೋಷದಿಂದ ಕಾಲ ಕಳೆಯುತ್ತಾಳೆ ಕ್ರೋಧ ದೇವಿಯನ್ನು ಒಲಿಸಿಕೊಳ್ಳುವ ಜಲತಜ್ಞ ಬೇರೆಯ ಕಾರಣಕ್ಕಾಗಿ ದೇವಿಯನ್ನು ಬಳಸಿಕೊಂಡು ಪರಶುರಾಮ ತಾಯಿಯ ರುಂಡ ಕತ್ತರಿಸುವ ಜನಪ್ರಿಯ ಕಥೆಯ ಸನ್ನಿವೇಶವು ಇಲ್ಲಿ ಕಣ್ಣಿಗೆ ಕಟ್ಟುವ ರೀತಿಯಲ್ಲಿ ತಂದಿದ್ದಾರೆ. ಜಲದಗ್ನಿ ಕ್ರೋಧ ದೇವತೆಯನ್ನು ಒಲಿಸಿಕೊಂಡಾಗ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿಗಳ ಕುರಿತು ವಿಶ್ವರಥ ನಿಂದ ಹೇಳಿಸಿದ ಮಾತುಗಳು ಇಂದಿನ ದಿನಮಾನಗಳಲ್ಲಿ ಪ್ರಶಸ್ತಿಗಳು ಮೌಲ್ಯ ಹೇಗಿದೆ ಎನ್ನುವುದನ್ನು ಹೇಳಿದಂತಿದೆ. ವ್ಯಕ್ತಿಯ ವ್ಯಕ್ತಿತ್ವದ ಕುರಿತು ಅನೇಕ ಮಾತುಗಳು ಇಲ್ಲಿ ಬಂದಿವೆ.
ಔದುಂಬರ ಹಾಗೂ ಅಶ್ವತ ಮರದ ಕುರಿತು ಕೆಲ ನಂಬಿಕೆ ಮತ್ತು ವೈಜ್ಞಾನಿಕ ಸತ್ಯಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಎಂಟು ಸಿದ್ಧಿಗಳನ್ನು ಪರಿಚಯಿಸುತ್ತಾರೆ ಪರಿಚಯ ಇಲ್ಲಿದೆ.
ಯಲ್ಲಮ್ಮ ರೇಣುಕೆಯರ ವಿಷಯದಲ್ಲಿ ಭಿನ್ನಾಭಿಪ್ರಾಯ ಇರುವ ಸಂಗತಿಗಳನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ಪರಶುರಾಮನಿಂದ ಮತ್ತೆ ತಾಯಿಗೆ ಜೀವ ಬಂದದ್ದು ,ಉಳಿದ ಸಹೋದರರು ಹುಟ್ಟಿಬಂದದ್ದು, ತಂದೆಯ ಕ್ರೋಧ ದೂರವಾದದ್ದು ಎಲ್ಲ ಕಥೆಗಳು ಬಹು ಸೊಗಸಾಗಿ ನಿರೂಪಿತಗೊಂಡಿದೆ. ಅನೇಕ ಕೃತಿಗಳನ್ನು ಅವಲೋಕಿಸಿ ಕಾದಂಬರಿಯನ್ನು ರಚಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಶಕ್ತಿದೇವತೆಯಾದ ಸವದತ್ತಿಯ ಎಲ್ಲಮ್ಮ- ರೇಣುಕಾದೇವಿ ಇಬ್ಬರೂ ಒಂದೇ ಎಂದು ಹೇಳುವ ಕೆಲ ಸಂಗತಿಗಳನ್ನು ಹೇಳುತ್ತ, ಬೇರೆಬೇರೆ ಎಂದು ಹೇಳುವ ಜಾನಪದ ಕಥೆಗಳನ್ನು ಹೇಳಿದ್ದಾರೆ.
ಕರೋನಾ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಯ ರು ಪಾಟೀಲ್ ಅವರು ಒಳ್ಳೆಯ ಕಾದಂಬರಿಯನ್ನು ಪೌರಾಣಿಕ ಸಾಹಿತ್ಯಲೋಕಕ್ಕೆ ನೀಡಿದ್ದಾರೆ. ಸವದತ್ತಿಯ ನೆಲದವರಾದ ಕಾದಂಬರಿಕಾರರು ಇಂತಹ ಅನೇಕ ಕಾದಂಬರಿಗಳನ್ನು ಸಂಶೋಧನಾತ್ಮಕ ದೃಷ್ಟಿಕೋನದಿಂದ ಬರೆದು ತಮ್ಮ ತಾಯಿ ನೆಲದ ಋಣ ತೀರಿಸಿದ್ದಾರೆ ಎಂದರೆ ತಪ್ಪಾಗಲಾರದು. ಇಂತಹ ಒಳ್ಳೆಯ ಕೃತಿಯನ್ನು ಪರಿಚಯಿಸಲು ಹೆಮ್ಮೆ ಎನಿಸುತ್ತದೆ. ಈ ಸದವಕಾಶ ಒದಗಿಸಿಕೊಟ್ಟ ಕಾದಂಬರಿಕಾರರಿಗೆ ಧನ್ಯವಾದಗಳು.


ಡಾ. ಪ್ರಿಯಂವದಾ ಮ ಹುಲಗಬಾಳಿ.

3 thoughts on “‘ಜಲದಗ್ನಿ’ ಪೌರಾಣಿಕ ಕಾದಂಬರಿರಚನೆ :ಯ ರು ಪಾಟೀಲ.

  1. ಪತ್ರಿಕಾ ಬಳಗಕ್ಕೆ ಧನ್ಯವಾದಗಳು

  2. ಬಹಳ ಚೆನ್ನಾಗಿ ಮೂಡಿ ಬಂದಿದೆ ಪ್ರಿಯಾ.ಸಾಹಿತ್ಯ ಕ್ಷೇತ್ರಕ್ಕೆ ಯ ರು ಪಾಟೀಲ ಸರ್ ಕೊಡುಗೆ ಅಪಾರ.

  3. ಶುಭವಾಗಲಿ ಸಕಲ ಮಾನ್ಯತೆ ಪಡೆಯಲಿ.

Leave a Reply

Back To Top