ಡಾ.ಡೋ.ನಾ.ವೆಂಕಟೇಶ-ಕವಿತೆ-ಸಮತಲ

ಕಾವ್ಯ ಸಂಗಾತಿ

ಡಾ.ಡೋ.ನಾ.ವೆಂಕಟೇಶ

ಸಮತಲ

ಓರೆ ಕೋರೆ ಇಲ್ಲದ
ಹೃದಯ. ಥೇಟ್ ಬಿಳಿ ಹಾಳೆ ಬಿಳಿ
ಹಸನು ಮಾಡಿಟ್ಟ ಬೆಳೆ
ಹುಲುಸಾಗಿ ಬೆಳೆಯಿತು
ಸುಗಂಧ ರಾಜ
ಮಾರುದ್ದದಿಂದ ಮೈಲುದ್ದ
ಕೇಕೆ ಉಲ್ಲಾಸ ಉತ್ಸಾಹ

ಅಲ್ಲಲ್ಲಿ ಉದ್ಭವಿಸಿದ ಕೆಟ್ಟ
ಕಳೆ
ಪಾತಾಳ ಗರಡಿ ಹಾಕಿದರೂ
ಕೈಗೆ ಸಿಗಲಿಲ್ಲ ಘಾಟು

ಅಲ್ಲಲ್ಲಿ ಹಾವು ಚೇಳು
ಆಡ ಬೇಕಿತ್ತು
ಹಾವು ಏಣಿಯ ಆಟ!
ಈಗ
ಸಮತಲವಿಲ್ಲ ಭೂಮಿ
ಅಂಕು ಡೊಂಕಿನ ಕಾಮಿ

ಕಾಲನಿಗೊಂದು ಸಲ್ಯೂಟ್!

ಪಾತಾಳ ಗರಡಿ
ಹಾವು ಏಣಿ ,ಯಾವುದೂ
ಬೇಕಿಲ್ಲ ಈಗ
ಸಮತಲವಿಲ್ಲ
ಸಮಭಾವವಿಲ್ಲ
ಸಮಚಿತ್ತ ಉಳಿದಿಲ್ಲ

ಆದರೂ
ರವಿ ಪೂರ್ವಕ್ಕೆ ಚಂದಿರ
ಅಂದಗೊಳಿಸಲಿಕ್ಕೆ ಭುವಿ ನಭಗಳು ಎಂದೂ
ಸಮತಲಕ್ಕೆ!!


4 thoughts on “ಡಾ.ಡೋ.ನಾ.ವೆಂಕಟೇಶ-ಕವಿತೆ-ಸಮತಲ

  1. ಸುಂದರವಾದ ಪದಗಳೊಂದಿಗೆ ತುಂಬಾ ಒಳ್ಳೆಯ ಕವಿತೆ.ಓದಿ ಆನಂದಿಸಿದೆ.
    ಧನ್ಯವಾದಗಳು.

Leave a Reply

Back To Top