ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಕುರುಡು ಕಾಂಚಾಣ
ಝಣ ಝಣ ಕಾಂಚಾಣ ಮೆರುಗಿಗೆ
ಮಾನವನಾಗಿಹ ಕುರುಡು
ನೋಟುಗಳು ಕುಣಿವ ಹೆಜ್ಜೆಗೆ
ಸಂಬಂಧಗಳೆಲ್ಲ ಬರಡು…
ಬೇಡವಾಯ್ತು ಹೆತ್ತ ತಾಯಿಯು
ದೂರವಾಯ್ತು ಬಂಧು ಬಳಗವು
ವೈರವಾಯ್ತು ಸ್ನೇಹ ಬಂಧವು
ಗುಲಾಮರಾಗಿ ಕಾಂಚಾಣಕೆ…
ದ್ವೇಷ ಅಸೂಯೆಗಳಾದವಿಲ್ಲಿ
ನಲ್ಮೆಯ ಮಾತುಗಳೆಲ್ಲ..
ಕ್ರೌರ್ಯದ ಕಿಚ್ಚು ಹೊತ್ತಿತಿಲ್ಲಿ
ಭಾವನೆಗಳ ಒಡಲಲ್ಲಿ…
ನಗುತಿದೆ ಕುರುಡು ಕಾಂಚಾಣ
ಕಂಡು ಮನುಜನ ಧೂರ್ತ ಗುಣ
ಆಡಿಸುತಿದೆ ಬೆರಳಲಿ ಜಗವ
ಬೀಸುತ ಆಸೆಯ ಬಲೆಯ…!
ವಾಸ್ತವದ ಅನಾವರಣ, ಕುರುಡು ಕಾಂಚಾಣ ಮಾರ್ಮಿಕವಾಗಿ ಮೂಡಿಬಂದಿದೆ.
ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ ತಮಗೆ ಧನ್ಯವಾದಗಳು.