ಕಾವ್ಯ ಸಂಗಾತಿ
ಬಿ.ಟಿ.ನಾಯಕ್
ತಲೆ ಎತ್ತಿ ನಿಲ್ಲು
ನಿಲ್ಲು, ನೀ ತಲೆ ಎತ್ತಿ ನಿಲ್ಲು,
ಮಾನವನೆ ಇರು ಮಾನಿನಿಯೆ ಇರು,
ನಿಲ್ಲು, ನೀ ತಲೆ ಎತ್ತಿ ನಿಲ್ಲು !
ಜ್ಯಾತಿ ವಿಜಾತಿ ಗೊಡವೆ ಬೇಡ,
ಬಡಾಯಿ ಬದುಕೆಂದೂ ಬೇಡ,
ಆದರದರಿವಿನ ಬದುಕು ಇರಲಿ ,
ನಿಲ್ಲು, ನೀ ತಲೆ ಎತ್ತಿ ನಿಲ್ಲು !
ಜೇನಿನ ಬದುಕು ಇರಲಿ,
ಕುಂಜರನ ನಡೆ ಇರಲಿ,
ಕಾರುಣ್ಯ ಉಕ್ಕಿ ಬರಲಿ,
ನಿಲ್ಲು, ನೀ ತಲೆ ಎತ್ತಿ ನಿಲ್ಲು !
ಲೋಲಕ ಜೀವನ ಬೇಡ,
ಲೋಲುಪ್ತಿ ಬಯಸ ಬೇಡ,
ಮುನ್ನುಗ್ಗು ಜಯವನರಸಿ,
ನಿಲ್ಲು, ನೀ ತಲೆ ಎತ್ತಿ ನಿಲ್ಲು !
ಬುದ್ಧ ಬಸವರ ದಿವ್ಯ ದೀಪ್ತಿರಲಿ,
ಅರ್ಧ ದಾರಿ ಕ್ರಮಿಸಿ ಭ್ರಮೆ ಬೇಡ,
ಆತಂಕದೆದುರು ಪಲಾಯನ ಬೇಡ,
ನಿಲ್ಲು, ನೀ ತಲೆ ಎತ್ತಿ ನಿಲ್ಲು.
ಒಳ್ಳೆಯ ಹಿತವಚನದ ಕವನ
ಧನ್ಯವಾದಗಳು ಸರ್.
ಸ್ಪೂರ್ತಿದಾಯಕ ಕವಿತೆ.
ಧನ್ಯವಾದಗಳು.