ಕಾವ್ಯ ಸಂಗಾತಿ
ಪ್ರಭಾ ಬೋರಗಾಂವಕರ
ಅಳಿಯಲಿ ಕೋಮುವಾದ
ರಾಮ – ರಹೀಂ ಒಬ್ಬನೇ ಅಲ್ಲವೇ
ಎಲ್ಲರ ದೇವರು ಅವನೇ ತಾನೇ
ಹಿಂದೂ – ಮುಸ್ಲಿಂ ಭಾಯಿ ಭಾಯಿ
ಸೂಫಿ – ಸಂತರು ಜನಿಸಿದ ಈ ನಾಡಲಿ
ಮಂದಿರ -ಮಸೀದಿ ಭಕ್ತಿಯ ತಾಣ
ಮಂದಿರದಲ್ಲಿ ದೇವರ ನಾಮಸ್ಮರಣೆ
ಮಸೀದಿಯಲ್ಲಿ ಅಲ್ಹಾ ನ ನಮಾಜು
ಅಲ್ಲಾಹು ಅಕ್ಬರ್ ಅವರ ಅಜಾನು
ಓಂ ನಮಃ ಶಿವಾಯ ನಮ್ಮ ಸುಪ್ರಭಾತ
ಉದಯಕಾಲಕೆ ಪ್ರಕೃತಿಯಲಿ ಜೀವ ಸಂಚಲನ
ಹಬ್ಬ – ಹರಿದಿನಗಳಲ್ಲಿ ವಿವಿಧ ಸಹಿ ಫಳಾರು
ರಂಜಾನ್ ಬಕ್ರೀದ್ ಗೆ ಬಿರಿಯಾನಿ ಘಮಲು
ಹಂಚಿ ತಿನ್ನುವುದೇ ಸೌಹಾರ್ದತೆಯ ಪ್ರತೀಕ
ಸತ್ತವರನ್ನು ಅವರು ಹೂಳಿದರೆ ಕಬರಸ್ಥಾನ
ಶವಗಳನ್ನು ನಾವು ದಹಿಸಲು ಅದೇ ಸ್ಮಶಾನ
ಧರ್ಮ ಬೇರೆಯಾದರೂ ನೆಲ ಮಾತ್ರ ಒಂದೇ
ಅವರಾಡುವ ಭಾಷೆ ಉರ್ದು ಆದರೇನಂತೆ
ನಾವಾಡುವ ನುಡಿಯು ಅಚ್ಚ ಸಿಹಿ ಕನ್ನಡವಂತೆ
ನಮ್ಮ ಸಂವಹನಕ್ಕೆ ಇಷ್ಟು ಸಾಕಲ್ಲವೇ
ಭಾಷೆ ಧರ್ಮ ಸಂಸ್ಕೃತಿ ವಿಧ ವಿಧವಾದರೇನು
ಉಡುಗೆ-ತೊಡುಗೆ ಆಹಾರ ಆಚಾರ ಬೇರೆಯಾದರೇನು
ಏಕತೆಯನ್ನು ಸಾರುವ ನಾವು ಭಾರತೀಯರಲ್ಲವೇ
ದ್ವೇಷಾಸೂಯೆಯ ಕೋಮುದಳ್ಳುರಿ ಅಳಿಯಲಿ
ಅಜ್ಞಾನ ಅಂಧಕಾರದ ಪರದೆ ಸರಿಯಲಿ
ವೈಚಾರಿಕತೆಯ ಸಾಮರಸ್ಯದ ಜ್ಯೋತಿ ಬೆಳಗಲಿ….
ಪ್ರಭಾ ಬೋರಗಾಂವಕರ
ನನ್ನ ಕವನ ಸ್ವೀಕರಿಸಿ ಪ್ರಕಟಣೆ ಮಾಡಿದ ತಮಗೆ ಧನ್ಯವಾದಗಳು ಸರ್
ಕವನ ಅತ್ಯುತ್ತಮವಾಗಿದೆ.ಓದಿ ಖುಷಿಯಾಯಿತು.ಅಭಿನಂನೆಗಳು.
ಕ್ಷಮಿಸಿ ಅಭಿನಂದನೆಗಳು
ಧನ್ಯವಾದಗಳು ಸರ್
ಧನ್ಯವಾದಗಳು ಮೇಡಂ ನಿಮ್ಮ ಪ್ರೋತ್ಸಾಹದ ನುಡಿಗಳಿಗೆ
ವಾಸ್ತವದ ಚಿತ್ರಣ.. ಅಭಿನಂದನೆಗಳು ಪ್ರಭಾ.
ಹಮೀದಾ ಬೇಗಂ ದೇಸಾಯಿ ಸಂಕೇಶ್ವರ.