ಕಾವ್ಯ ಸಂಗಾತಿ
ಈರಪ್ಪ ಬಿಜಲಿ
ಜೀವನಾಡಿ..
ದಣಿದು ಬರುವ ದಾರಿ ಹೋಕರ
ದಾಹ ತೀರಿಸು ನಮ್ಮಮ್ಮ
ಮಣಿಯಬೇಕು ಸರ್ವಜೀವಿ
ನಿನ್ನ ಮುಂದೆ ಕೇಳಮ್ಮ ||೧||
ಮನದ ದಂಗೆ ನೀಗು ಗಂಗೆ
ಕರವ ಮುಗಿವೆ ತಾಯಿಯೇ
ದಾಹ ತಣಿಸಿ ಮನಸ ಕುಣಿಸು
ಪಾದ ಕಮಲಕೆರಗುವೇ ||೨||
ನೀಲಿ ಗಗನ ಪ್ರತಿಫಲನ
ಕಿರಣ ನಿನ್ನಲಿ ಸಮ್ಮಿಲನ
ಗಾಳಿಗಲೆಯು ತೇಲಿ ಬರಲು
ಶುದ್ಧ ಜಲದ ಸಂಕಲನ ||೩||
ಭೂಮಿಪುತ್ರನೊಲಕೆ ಹರಿದು
ಜಗದ ಹಸಿವು ದೂಡಮ್ಮ
ಕಾಮಿ ಮನುಜನೆದೆಯ ಕೊಳೆಯ
ತೊಳೆದು ಹರಸು ದೊಡ್ಡಮ್ಮ ||೪||
ಪಾಪ ಕರ್ಮ ಕಳೆಯೊ ಗಂಗೆ
ಪಾನಯೋಗ್ಯ ತುಂಗೆಯೇ
ಶಕ್ತಿ ನೀನೇ ಮುಕ್ತಿ ನೀನೇ
ಕಾವೇರಿ ಜೀವನಾಡಿಯೇ ||೫||
————————-
ಈರಪ್ಪ ಬಿಜಲಿ ಕೊಪ್ಪಳ