ಕಾವ್ಯ ಸಂಗಾತಿ
ಪರಿಮಳ ಐವರ್ನಾಡು ಸುಳ್ಯ
ನೀನಿರಬೇಕಿತ್ತು


ಬಿಟ್ಟು ಹೋಗಬಾರದಿತ್ತು
ಮರಳಿ ಬಾರದ ಊರಿಗೆ ಹೋಗಬಾರದಿತ್ತು
ಅತ್ತಾಗ ಕಣ್ಣೊರೆಸಲು
ಸೋತಾಗ ಧೈರ್ಯ ತುಂಬಲು
ನೋವಾದಾಗ ಸಂತೈಸಲು
ಕಾಯಿಲೆ ಬಿದ್ದಾಗ ನೋಡಿಕೊಳ್ಳಲು

ಪ್ರೀತಿಯಲಿ ತಬ್ಬಿಕೊಳ್ಳಲು
ನಿನ್ನ ಮಡಿಲಲಿ ಪವಡಿಸಲು
ಭರವಸೆಯ ಜೀವ ತುಂಬಲು
ವಾತ್ಸಲ್ಯದ ಮಳೆ ಹರಿಸಲು
ಅಮ್ಮಾ… ನೀನಿರಬೇಕಿತ್ತು
ಬಿಟ್ಟು ಹೋಗಬಾರದಿತ್ತು
ಮರಳಿ ಬಾರದೂರಿಗೆ ಹೋಗಬಾರದಿತ್ತು

One thought on “ಪರಿಮಳ ಐವರ್ನಾಡು ಸುಳ್ಯ ಕವಿತೆ-ನೀನಿರಬೇಕಿತ್ತು”