ಡಾ ಡೋ.ನಾ.ವೆಂಕಟೇಶ ಕವಿತೆ-ಮೃಗತೃಷ್ಣಾ

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ಮೃಗತೃಷ್ಣಾ

ಮಧ್ಯಾಹ್ನ ಬಂತು
ಪ್ರಾಚೀನ ಸ್ನೇಹಿತನ ಕರೆ!
ಆಗಿ ಹೋಗಿದ್ದ ಸ್ನೇಹಿತ
ಮರೆತು ಹೋಗಿದ್ದ ಚಡ್ಡಿ
ಗೆಳೆಯ
ಹೇಗಿದ್ದೀಯೋ ವೆಂಕ
ಹಾಗೇ ಇದ್ದೀಯ ಅಥವಾ
ಈಗೀಗ ಮಂಕ

ಪುರಾಣ ಪುರುಷನ ಪ್ರತಾಪ ಬರೆ ಬರೇ ಸಿಂಬಳ ಬುರಕ
ಹಿಂದಿನ ಸಾಲಿನ ಪಕ್ಕಾ
ಬೆಳೆಯುತ್ತ ಬೆಳೆಯುತ್ತ
ಕಚ್ಚೇ ಹರುಕ

ಎಲ್ಲೋ ಓಡಿ ಹೋಗಿದ್ದನಂತೆ
ಕಂಡು ಕೇಳರಿಯದ ದೇಶಕ್ಕೆ
ಆ ವಿದೇಶದ ಸಂಖ್ಯೆ ಬೆಳೆಸಿದ್ದೆ
ಇವನಂತೆ!

ಮತ್ತೆ ಈಗೇನು ಇಲ್ಲಿ
ಜನಜಾಸ್ತಿ ಜಾಗದಲ್ಲಿ?

ಹಾಗೇ ಕಣೋ,ನಾ ಹೋಗುವ
ದಿನ ಬಂತು
ಸ್ಸ್ವಾತಂತ್ರ್ಯ ಇಲ್ಲಿಂದಲೋ
ಅಥವ ಎಲ್ಲಿಂದಲೋ

ಸಂತಾಪ ಸೂಚಕ ಸಂದೇಶ
ನಿನ್ನಂದಲೇ ಮೊದಲು

ಎಲಾ ಇವನ ನೀ ಮೊದಲೋ
ಅಥವ ನಾನೋ,
ಯಾರೋ
ಕರ್ಛೀಪು ಹಾಕಿರುವರು

ನಾನಾಗಲೇ ಇಲ್ಲಿಲ್ಲ
ಹೇಳಿದ ಪುರಾಣ ಪುರುಷ
ಆಗಿ ಆಧುನಿಕ

ಗಡಬಡಿಸಿ ಎದ್ದು
ನಿದ್ದೆಯಿಂದೆದ್ದು ಮತ್ತೆ
ನಿದ್ದೆಗೆ ಕಾಯುತ್ತಿದ್ದೆ
ಬೇಸಿಗೆಯ ಕಡು ಬಿಸಿಲಲ್ಲಿ

ಮರೀಚಿಕೆ
ಮೃಗತೃಷ್ಣಾ
ಬಿಸಿಲ್ಗುದುರೆ !


19 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಮೃಗತೃಷ್ಣಾ

  1. ಇಂತಹ ಒಂದು ಕವನ ಓದಿದರೆ, ದಿನವೆಲ್ಲಾ ಪ್ರಫುಲ್ಲ. ಇದಲ್ಲವೇ ಬದುಕನ್ನು ಆನಂದಿಸುವ ಪರಿ.

    1. ಥ್ಯಾಂಕ್ಸ್ ರಾಧಿಕರವರೆ!

      -ಡೋಯಿಜೋಡೆ ನಾ.ವೆಂಕಟೇಶ

  2. ಬೇಸಿಗೆಯ ಬಿಸಿಲಲ್ಲಿ ಮದ್ಯಾಹ್ನ ನಿದ್ರೆ ಮಾಡಿದರೆ ಕಾಣುವ ಭೂತ, ಭವಿಷ್ಯದ ನಿಜ ಕನಸು….. ಕೆಲವರಿಗೆ ಎಚ್ಚರಿಕೆಯ ಗಂಟೆ ಕೂಡಾ.. ಚೆನ್ನಾಗಿದೆ ಕವನ.

    1. ಮಂಜಣ್ಣ ಥ್ಯಾಂಕ್ಸ್!
      ಅಲ್ಲಿ ನೀವಿರುವ ಜಾಗದಲ್ಲಿ ಈ ಥರಾ ಬಿಸಿಲೇ ಇಲ್ಲ ,ಹಗಲುಗನಸು ಕವನಿಸುವ ಅವಕಾಶ ಇಲ್ಲ.(ತಮಾಷೆಗೆ)

Leave a Reply

Back To Top