ಸುರೇಶ ತಂಗೋಡ ಕವಿತೆ ಎಚ್ಚರಿಕೆ!

ಕಾವ್ಯ ಸಂಗಾತಿ

ಸುರೇಶ ತಂಗೋಡ

ಎಚ್ಚರಿಕೆ!

ನಮ್ಮ ನಡುವೆಯೇ ಇದ್ದು
ನಂಬಿಸಿ ಮೋಸ ಮಾಡುವ ಜನರಿದ್ದಾರೆ
ಈ ಜಗದಲಿ
ಎಚ್ಚರಿಕೆ!…

ಹಾಲಿನಲ್ಲಿ ಹಾಲಾಹಲ ಬೆರೆಸಿ
ದುಡ್ಡು ಮಾಡುವ ದೊಡ್ಡ ದಂಡೆ
ಇದೆಯಿಲ್ಲಿ ಸ್ವಲ್ಪ
ಎಚ್ಚರಿಕೆ!.

ಎದುರಿಗೆ ಹೊಗಳಿ
ಬೆನ್ನ ಹಿಂದೆ ಆಡಿಕೊಳ್ಳುವ
ಸ್ವಾರ್ಥಿಗಳ ಸಮಾಜವಿದು
ಎಚ್ಚರಿಕೆ!….

ಆಸ್ತಿ -ಅಂತಸ್ತಿಗಾಗಿ
ಕೊಲೆ-ಸುಲಿಗೆಗಳನ್ನು
ಮಾಡುತ್ತಾರಿಲ್ಲಿ ಚೂರು
ಎಚ್ಚರಿಕೆ!….

ಗುಣ,ಒಳ್ಳೆಯತನಕ್ಕೆ ಬೆಲೆಯಿಲ್ಲ
ಆಡಂಬರ ,ಒಣ ಪ್ರತಿಷ್ಠೆಯದವರೆಲ್ಲ
ಮುಖವಾಡದ ಜನರಿರುವರು
ಎಚ್ಚರಿಕೆ!….

ಅನ್ನ ಹಾಕಿದ ಮನೆಯ
ಜಂತಿ ಎಣಿಸುವ
ವಿಶ್ವಾಸಘಾತಕರಿರುವರು
ಎಚ್ಚರಿಕೆ!….

ಎಲ್ಲರೂ ನಮ್ಮವರೆ
ಆದರೆ ಯಾರೂ ನಮ್ಮವರಲ್ಲ
ಎಲ್ಲ ಸಮಯಸಾಧಕರು
ಎಚ್ಚರಿಕೆ!…..

ಬದುಕಿದು ಮೂರು ದಿನ
ನಿನ್ನ ಪರಿಮಿತಿಯೊಳಗೆ
ಜೀವಿಸಿ ನಡೆ ,ಈ ಜನ್ಮ ಕಡೆ
ಇರಲಿ ಮುನ್ನೆಚ್ಚರಿಕೆ!…..


Leave a Reply

Back To Top