ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಹೋಗಬೇಡ ಎಂದಳುತ್ತಿದೆ

ಈ ಕಾಲ್ಗೆಜ್ಜೆ ನಾದವೂ ಕೂಡಾ..

ಬನ್ ಕೆ ಪತ್ಥರ್ ಹಮ್ ಪಡೆ ಥೆ
ಸೂನಿ ಸೂನಿ‌ ರಾಹ್ ಮೆ
ಜೀ ಉಠೆ ಹಮ್ ಜಬ್ ಸೆ ತೇರಿ
ಬಾಹ್ ಆಯಿ ಬಾಹ್ ಮೆ

ಈ ಬರಡು ಬಾಳದಾರಿಯಲ್ಲಿ ನಾನೊಂದು ಬರಿಯ ಕಲ್ಲಾಗಿ ಬಿದ್ದಿದ್ದೆನಲ್ಲ. ನಿನ್ನ ತೋಳಿನಾಸರೆ ಸಿಕ್ಕ ಮೇಲೇ ಅಲ್ಲವೆ ನನ್ನಲ್ಲೂ ಜೀವ ಭಾವವರಳಿದ್ದು. ನಾನೂ ಬಾಳುವಾಸೆ ಅಂಕುರಿಸಿದ್ದು. ಆದರೀಗ ನಿನಗೇನಾಗಿದೆ?
ಕಣ್ಣಿನ ಕಾಡಿಗೆಯನ್ನೂ, ನನ್ನನ್ನೂ ಅಳಿಸಿ ಹೀಗೆ ದೂರ ಹೋಗುತ್ತಿರುವೆಯಲ್ಲ. ದಯವಿಟ್ಟು ಬೇಡ.
ಛೀನ್ ಕರ್ ನೈನೋ ಸೆ ಕಾಜಲ್
ನಾ ಜಾರೆ ನಾ ಜಾ..

ಮೇಘ ಸರಿದಾಗ ದಾರಿ ಹೊಳೆದಾಗ
ಚಂದ್ರ ಮರೆಯಾದ ನನ್ನ ತೊರೆದ

ನನ್ನೆಲ್ಲ ಭಯ ಶಂಕೆಗಳ ತೊರೆದು, ಮನಸ್ಸಿಗೆ ಕವಿದ ಮೋಡಗಳೆಲ್ಲ ಚದುರಿ ಸ್ವಚ್ಛ ದಾರಿ ಕಾಣುತ್ತಿರುವಾಗಲೇ ನನ್ನ ಚಂದಿರ ನೀನು ದೂರವಾಗುತ್ತಿರುವೆಯಲ್ಲ. ಈಗ ನಾನು ಮಾಡುವುದಾದರೂ ಏನು? ನೀನು ನನ್ನ ಓಲೈಸುತ್ತಿದ್ದರೂ ಅದನ್ನೆಲ್ಲ ನಾನು ಅರಿತೇ ಇರಲಿಲ್ಲ. ನಿನ್ನ ಆಸೆಗಳನ್ನೆಲ್ಲ ಅರಿಯುವ ಶಕ್ತಿಯೂ ನನಗಿರಲಿಲ್ಲ. ಎಲ್ಲವನ್ನೂ ಹಗುರಾಗಿ ತೆಗೆದುಕೊಂಡೆನಾ? ಗೊತ್ತಿಲ್ಲ. ಈಗ ಇದೆಲ್ಲ ಅರಿವಾಗುತ್ತಿದೆಯಾದರೂ ನೀನು ಕೈಬಿಟ್ಟು ಹೋಗೇಬಿಡುತ್ತಿರುವೆಯಲ್ಲ..
ಹೂವಿನ ಹಾಸಿಗೆ ನೀ ಹಾಸಿ
ಮೋಹದಿ ನನ್ನ ಸೆಳೆದಾಗ
ಸವಿ ಇರುಳ ಹೊಂಗನಸ
ಮುರಿದೆನು ನಾ..

ಚಾಂದ್ ಭಿ ಹೋಗಾ ತಾರೆ ಭಿ ಹೋಂಗಿ
ಫೂಲ್ ಚಮನ್ ಮೆ ಪ್ಯಾರೆ ಭಿ ಹೋಂಗೆ
ಲೇಕಿನ್ ಹಮಾರಾ ದಿಲ್ ನಾ ಲಗೇಗಾ..


ಅದೇ ಚಂದ್ರ ಅದೇ ತಾರೆಗಳಿದ್ದರೇನು? ಹೂದೋಟದ ತುಂಬಾ ಸುಂದರ ಸುಮಗಳಿದ್ದರೇನು? ನೀನಿಲ್ಲದ ಈ ಲೋಕದಲ್ಲಿ ಯಾವುದರಲ್ಲೂ ಮನಸ್ಸಾಗುವುದೇ ಇಲ್ಲ. ಹೃದಯ ದ್ರವಿಸುವ ರಾತ್ರಿಗಳಿದ್ದರೂ, ಎಲ್ಲ ಋತುಗಳೂ ವಿರಹದುರಿಯಲ್ಲಿ ಕನಲುತ್ತಿರುವಾಗ ಬದುಕುವುದಾದರೂ ಹೇಗೆ ನೀನೇ ಹೇಳು. ಹೃದಯದರಸನೇ, ಅದು ಹೇಗೆ ತಾನೇ ಈ ಹೃದಯವನ್ನೇ ತಿರಸ್ಕರಿಸಿ ಹೋಗುತ್ತಿದ್ದೀಯೋ ತಿಳಿಯುತ್ತಿಲ್ಲವಲ್ಲ..
ದಿಲ್ ಕೆ ಮಾರೋ ಓ ದಿಲ್ ಕೆ ಮಾಲಿಕ್
ಠೋಕರ್ ಲಗಾ ಕೆ ಚಲ್ ದಿಯೆ..

ಯಾದ್ ಕರ್ ತೂನೆ ಕಹಾ ಥಾ
ಪ್ಯಾರ್ ಸೆ ಸಂಸಾರ್ ಹೆ
ಹಮ್ ಜೋ ಹಾರೆ ದಿಲ್ ಕಿ ಬಾಝಿ
ಯೆ ತೇರಿ ಹೀ ಹಾರ್ ಹೆ

ಪ್ರೀತಿಯಿಲ್ಲದೆ ಲೋಕವೇ ಇಲ್ಲ ಎಂದು ಹೇಳಿದ್ದೆಯಲ್ಲ! ನೆನಪಿಲ್ಲವಾ ನಿನಗೆ ನೀನೇ ಆಡಿದ ಮಾತು? ಈ ಪ್ರೇಮದ ಆಟದಲ್ಲಿ ನಾನೀಗ ಸೋತು ಹೋಗುತ್ತಿರುವೆ. ಆದರೆ ನಿನಗೆ ಗೊತ್ತಾ ಇದು ನನ್ನ ಸೋಲಲ್ಲ, ನಿನ್ನದೇ ಸೋಲು ಎಂದು?! ಈಗಾದರೂ ಕೇಳು ನನ್ನ ಕಾಲ್ಗೆಜ್ಜೆಯ ನಾದ ಏನು ಬೇಡುತ್ತಿದೆಯೆಂದು. ನನ್ನ ಬಿಟ್ಟು ಹೋಗಬೇಡ ಎಂದು ಅದು ಭೋರಿಡುತ್ತಿದೆ. ಯಾರಾದರೂ ಅವನನ್ನು ಹಿಡಿದು ನಿಲ್ಲಿಸಿ ಎಂದು ಬೇಡುತ್ತಿದೆ.
ಸುನ್ ಲೆ ಕ್ಯಾ ಕೆಹೆತೀ ಹೆ ಪಾಯಲ್
ನಾ ಜಾ ರೆ ನಾ ಜಾ ರೋಕೋ ಕೋಯಿ…

ರೂಠೆ ರಹೇಂಗಿ ಆಪ್ ಜೋ ಹಮ್ ಸೆ
ಮರ್ ಜಾಯೇಂಗೆ ಹಮ್ ಭೀ ಕಸಂ ಸೆ
ಸುನ್ ಲೆ ಹಾಥ್ ಛುಡಾನೆ ಸೆ ಪೆಹೆಲೆ

ನೀನು ಮುನಿಸಿಕೊಂಡು ಹೋಗುತ್ತಿದ್ದೀಯ. ನಿನಗೆ ಗೊತ್ತಾ ನಿನ್ನಾಣೆಗೂ ನಾನು ನಿನ್ನ ಬಿಟ್ಟು ಬದುಕಿರಲಾರೆ ಎಂದು? ನೀ ಹೀಗೆ ನನ್ನ ಕೈತಪ್ಪಿ ಹೋಗುವ ಮೊದಲು ನನ್ನೆದೆಯ ಮಾತನ್ನು ಒಮ್ಮೆ ಆಲಿಸು. ಹೃದಯದ ಆಸೆಗಳನ್ನೆಲ್ಲಾ ಹೀಗೆ ಕೊಂದು ಹೋದರೆ, ಒಂದಲ್ಲ ಒಂದು ದಿನ ನಿನ್ನ ಹೆಸರು ಹೇಳುತ್ತಲೇ ಈ ಜೀವ ಇಲ್ಲವಾಗುತ್ತದೆ ನನ್ನ ಜೀವವೇ, ಸ್ವಲ್ಪವಾದರೂ ನನ್ನ ಬಗ್ಗೆ ಯೋಚಿಸಿ ನೋಡು.
ಜಾನ್ ಹಮಾರಿ ನಾಮ್ ಪೆ ತೇರಿ
ಜಾಯೇಗಿ ಎಕ್ ದಿನ್ ದಿಲ್ಬರ್ ಮೇರಿ
ಯೂ ಅಗರ್ ತುಮ್ ದಿಲ್ ಕಿ ತಮನ್ನಾ
ಕೋ ಮಿಟಾಕೆ ಚಲ್ ದಿಯೆ..

ಇನ್ನೂ ಆಡಬೇಕಾದ ಮಾತು ಸಾವಿರವಿತ್ತು. ಪೂರೈಸಬೇಕಾದ ವಾಗ್ದಾನ ನೂರಾರಿತ್ತು. ಕೇಳಬೇಕಾದ ಪ್ರೀತಿ ಮತ್ತೆಷ್ಟೋ ಬಾಕಿ. ಎಲ್ಲ ಬಿಟ್ಟು ನೀ ದೂರಾಗುತ್ತಿರುವೆಯಲ್ಲ. ಇದು ನನ್ನ ಹಣೆಬರಹವಲ್ಲದೆ ಮತ್ತೇನೂ ಅಲ್ಲ. ನಿನ್ನ ಹಾಡಿಗೆ ನಾ ಶೃತಿಯಾಗಲಿಲ್ಲ. ನಿನ್ನ ರಾಗಕ್ಕೆ ನಾ ಅನುರಾಗವಾಗಲಿಲ್ಲ ಅಷ್ಟೇ..
ಹೋದೆಯ ದೂರ ಓ ಜೊತೆಗಾರ
ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ
ನಾ ಸಂದೇಶವ ತಂದಾಗ..


ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

Leave a Reply

Back To Top