ಸಿದ್ದಲಿಂಗಪ್ಪ ಬೀಳಗಿ.ಹಾಯ್ಕುಗಳು

ಕಾವ್ಯ ಸಂಗಾತಿ

ಸಿದ್ದಲಿಂಗಪ್ಪ ಬೀಳಗಿ

ಹಾಯ್ಕುಗಳು


ಸುಖದ ಅರ್ಥ
ಕೇಳಿದೆ; ಮರೆಯಲಿ
ಭ್ರಮೆಯ ನಗು

ನೂರು ನೋವೆಲ್ಲ
ದೂರವಾಗಲು; ನಿನ್ನ
ನಗೆ ಔಷಧಿ

ಸಾವಿನ ಮನೆ
ಅಂಗಳಕೂ ಶೃಂಗಾರ
ಸಮಾಧಿಸ್ಥಳ

ಅವಳು ಝರಿ
ಹಳ್ಳ ನದಿ ಸಮುದ್ರ
ನಾನೊಂದು ಮೀನು



ಕುತೂಹಲದ
ಕಣಜವದು; ಹೊಸ
ಜೀವದ ಸೃಷ್ಟಿ

ಕೋಪದಿಂದೇನೂ
ಸುಖವಿಲ್ಲ; ಶಾಂತಿಯೇ
ನೆಮ್ಮದಿ ಮೂಲ

ಅವಳಿಲ್ಲದ
ರಾತ್ರಿಯಲಿ; ಚಂದ್ರನೂ
ಕಣ್ಮರೆಯಾದ

ಅವಳ ತುಟಿ
ಸೋಕಿ; ಕೆನ್ನೆ ತುಂಬೆಲ್ಲ
ರಂಗಿನೋಕುಳಿ

ಪ್ರಭೇದ ಒಂದೇ
ನೋಣ-ಜೇನ್ನೊಣ; ಗುಣ
ಬಲು ವ್ಯತ್ಯಾಸ
೧೦
ಎಳೆ ಬಿಸಿಲು
ತಾಗಿ; ಮೂರ್ಚೆ ಹೋದಾಕೆ
ಮುತ್ತಿಗೆಚ್ಚರ


2 thoughts on “ಸಿದ್ದಲಿಂಗಪ್ಪ ಬೀಳಗಿ.ಹಾಯ್ಕುಗಳು

    1. ಅರ್ಥಗರ್ಭಿತವಾದವುಗಳಾದರೂ ಅರ್ಥವುಳ್ಳವು. ಅಭಿನಂದನೆಗಳು.

Leave a Reply

Back To Top