ಪರಿಮಳ ಎನ್ ಎಂ ಐವರ್ನಾಡು ಕವಿತೆ-ಅಸೆ

ಕಾವ್ಯ ಸಂಗಾತಿ

ಪರಿಮಳ ಎನ್ ಎಂ ಐವರ್ನಾಡು

ಅಸೆ

ಆಸೆಗಳ ಆಮಿಷಕೆ
ಬಲಿಯಾಗದಿರು ಮನುಜ
ಬಲಿಯಾದರೆ ನಿನ್ನವಶೇಷವೂ
ಸಿಗಲಾರದು ಮನುಜ

ಆಸೆಗಳ ಸೆರೆಮನೆಯಲಿ
ಖೈದಿಯಾಗದಿರು ಮನುಜ
ಖೈದಿಯಾದರೆ ನಿನ್ನವರಾರು
ನಿನಗಿಲ್ಲ ಮನುಜ

ಆಸೆಗಳ ಮೋಹಪಾಶಕೆ
ಬೀಳದಿರು ಮನುಜ
ಬಿದ್ದರೆ ಏಳಲಾಗದು
ಕೇಳು ನೀ ಮನುಜ

ಆಸೆಗಳ ಅನಂತತೆಯ
ಹುಡುಕದಿರು ಮನುಜ
ಹುಡುಕಿದರೆ ಕಳೆದುಕೊಳ್ಳುವೆ
ನಿನ್ನ ನೀನು ಮನುಜ

ಆಸೆಗಳಿಗೆ ಮಿತಿಯಿರಲಿ
ಅತ್ಯಾಸೆ ನಿಗ್ರಹಿಸು ಮನುಜ
ಅತ್ಯಾಸೆಯಿಂದ ಬೀಳುವೆ
ಪಾಪಗಳ ಕೂಪಕೆ ಮನುಜ

ಆಸಗಳ ಬಲೆಯಿಂದ
ಹೊರಗೆ ಬಾರೋ ಮನುಜ
ಹೊರಬಂದರೆ ಸುಖಜೀವನ
ನಿನಗುಂಟು ಮನುಜ


3 thoughts on “ಪರಿಮಳ ಎನ್ ಎಂ ಐವರ್ನಾಡು ಕವಿತೆ-ಅಸೆ

    1. ಹಾ ಹಾ ಅದ್ಭುತವಾಗಿದೆ.. ಸಾಮಾನ್ಯ ವ್ಯಕ್ತಿಗೂ ಅರ್ಥ ವಾಗುವ ರೀತಿಯಲ್ಲಿ ಬರೆದಿದ್ದಾರೆ.. ಸಹೋದರಿಗೆ ಅಭಿನಂದನೆಗಳು

Leave a Reply

Back To Top