ಸ್ನೇಹ ಚಿಗುರು-_ಇಂದಿರಾ ಮೋಟೆಬೆನ್ನೂರ

ಇಂದಿರಾ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಸ್ನೇಹ ಚಿಗುರು

ನೋವ ನೀಡಿ
ಹೂವ ಕಳಿಸುವ
ನಿನ್ನ ರೀತಿಗೆ
ಈ ಪರಿಯ ಪ್ರೀತಿಗೆ
ಏನೆನ್ನಲಿ?..

ಬೇವ ನೀಡಿ
ಬೆಲ್ಲ ಸವರುವ
ನಿನ್ನ ಸ್ನೇಹಕೆ
ಈ ಪರಿಯ ರೀತಿಗೆ
ಏನೆನ್ನಲಿ..?

ನಗುವ ಕಸಿದು
ಮಗು ಮನವ
ನೋಯಿಸಿ ನಡೆದ
ನಿನ್ನ ನಡೆಗೆ
ಈ ಪರಿಯ ನೀತಿಗೆ
ಏನೆನ್ನಲಿ..?

ನನ್ನ ನೋವು
ನಿನ್ನೆದೆಗೆ ತಂಪೆರೆದರೆ
ನನ್ನ ಬೇಗೆ
ನಿನ್ನ ದಾರಿಗೆ
ತಣ್ಣೆಳಲಾದರೆ
ನನಗಷ್ಟೇ ಸಾಕು..,.

ನನ್ನ ನೋವು
ನಿನಗೆ ನೆಮ್ಮದಿ
ಕಹಿ ನೀಡುತ್ತ
ಸಿಹಿ ಹಂಚುವ
ಭಾವ ಬಿತ್ತನೆಗೆ
ಏನೆನ್ನಲಿ?…..


Leave a Reply

Back To Top