ರೇಮಂಡ್ ಡಿಕೂನಾ ತಾಕೊಡೆ ಕವಿತೆ-ಮೊಳೆಯ ಅಳಲು

remand

ಕಾವ್ಯ ಸಂಗಾತಿ

ರೇಮಂಡ್ ಡಿಕೂನಾ ತಾಕೊಡೆ

ಮೊಳೆಯ ಅಳಲು

ನೇತು ಬಿದ್ದು ನನ್ನ ಕುತ್ತಿಗೆಗೆ
ಏನು‌ ಪೌರಷು ನಿಮಗೆ?
ಜಿವವು ಇದ್ದಾಗ ನಿಮ್ಮ ಒಳಗೆ
ಜನರನು ನೇತಾಡಿಸಿದ ನಾಚಿಕೆ ಇ‌ಲ್ಲ ನಿಮಗೆ.

ಗೋಡೆಗಳು ನೋಡಿದೊಡನೆ
ನನ್ನ ತಲೆಗೆ ಸುತ್ತಿಗೆಯ ಕೊನೆಯನು
ಬಡಿದು ಬಡಿದು ನೇತು ಬೀಳುವ ನಿಮ್ಮ ಮನೆ,
ಸುಳ್ಳು, ಅನ್ಯಾಯದ ತೂತುಗಳ ಅರಮನೆ.

ಒಂದು ಸತ್ಯ ಮತ್ತು ಇನ್ನೊಂದು ಸುಳ್ಳು
ನಿಮ್ಮ ಕೈಯಲ್ಲಿ ಸುತ್ತಿಗೆಯ ಪೆಟ್ಟುಗಳು
ನನ್ನ ತಲೆಯನು ಜಜ್ಜಿ ಅವುಗಳು
ಗೋಜಲುಗಳ ನಡುವಿನ ಅಂತರಗಳು.

ಬಿಡಲಾರೆ ಇನ್ನು ಸತ್ಯದ ತಲೆಯನು ಜಜ್ಜಲು
ತಲೆಯನು ಬಾಗುವೆ ಹೊಡೆತಕೆ ಮಗ್ಗುಲು
ನಿಮ್ಮ ಬೆರಳು ಜಜ್ಜಿಕೊಂಡು ನೋವಾಗಲು
ತಿಳಿದೀತು ಲೋಕದ ಜನರ ಅಳಲು.


Leave a Reply

Back To Top