ಮಹಾದೇವಿ ಪಾಟೀಲ್ ಕವಿತೆ-ಪ್ರೀತಿ ಎಂದರೆ

ಕಾವ್ಯ ಸಂಗಾತಿ

ಮಹಾದೇವಿ ಪಾಟೀಲ್

ಪ್ರೀತಿ ಎಂದರೆ

ಪ್ರೀತಿಎಂದರೆ ಪಡ್ಕೊಳೋದಲ್ಲ ಕೊಡುವುದು
ಪ್ರೀತಿ ಎಂದರೆ ಕೇವಲ ಹಕ್ಕಲ್ಲ ಕರ್ತವ್ಯ
ಪ್ರೀತಿ ಎಂದರೆ ಮೌನವಲ್ಲ ಒಲವ ಧ್ಯಾನ ಪ್ರೀತಿ ಎಂದರೆ ಅನುಮಾನವಲ್ಲ ಅಭಿಮಾನ|

ಪ್ರೀತಿ ಎಂದರೆ ಭೋಗವಲ್ಲ ನಿತ್ಯ ತ್ಯಾಗ
ಪ್ರೀತಿ ಎಂದರೆ ಅನುಕಂಪವಲ್ಲ ಅನುಭವ
ಪ್ರೀತಿ ಎಂದರೆ ಸೌಂದರ್ಯವಲ್ಲ ಆಂತರ್ಯ
ಪ್ರೀತಿ ಎಂದರೆ ಆಕರ್ಷಣೆಯಲ್ಲ ಆತ್ಮ ಬಂಧನ

ಪ್ರೀತಿ‌ ಎಂದರೆ ಉಡುಗೊರೆಯಲ್ಲ ಸಡಗರ
ಪ್ರೀತಿ ಎಂದರೆ ಬಾಂಧವ್ಯವಲ್ಲ ದಿವ್ಯ ಬಂಧನ
ಪ್ರೀತಿ ಎಂದರೆ ಬರಿ ಭಾವವಲ್ಲ ಮಧುರ ಭಾವ ಪ್ರೀತಿ ಎಂದರೆ ಭ್ರಾಂತಿಯಲ್ಲ ಮನಶ್ಯಾಂತಿ||

ಪ್ರೀತಿಎಂದರೆ ಬರಿ ಮೋಹವಲ್ಲ ನಿತ್ಯ ಸ್ಪೂರ್ತಿ
ಪ್ರೀತಿ ಎಂದರೆ ಬರಿ ಕಾಮವಲ್ಲ ಶುದ್ಧಭಕ್ತಿ ಪ್ರೀತಿಎಂದರೆ ನೋವಲ್ಲ ಸುಂದರ ಸವಿಭಾವ ಪ್ರೀತಿ ಎಂದರೆ ವಿದಾಯವಲ್ಲ ನಿತ್ಯ ಸಂಧಾನ||

ಪ್ರೀತಿಎಂದರೆ ಮತ್ಸರವಲ್ಲ ನಿತ್ಯೋತ್ಸವ ಪ್ರೀತಿಎಂದರೆ ಭಯವಲ್ಲ ಅಗೋಚರ ಧೈರ್ಯ
ಪ್ರೀತಿ ಎಂದರೆ ಕೇವಲ ಪ್ರಣಯವಲ್ಲ ಆತ್ಮಸಮರ್ಪಣೆ
ಪ್ರೀತಿಎಂದರೆ ಬದುಕುವ ಜ್ಞಾನದ ನೈಜ್ಯ ಅನುಭವವಲ್ಲದೆ ಮತ್ತೇನೂ ಇಲ್ಲ ||


Leave a Reply

Back To Top