“ಭಾವರಹಿತ ಬುದ್ದಿವಂತ” ಮಹಾದೇವಿ ಪಾಟೀಲ್ ಲೇಖನ

ಲೇಖನ

ಮಹಾದೇವಿ ಪಾಟೀಲ್

ಭಾವರಹಿತ ಬುದ್ದಿವಂತ

ಮನುಷ್ಯ ಭಾವನಾಜೀವಿ ಭಾವನೆಗಳಿಗೆ ಸ್ಪಂದಿಸದ ಮನುಷ್ಯ ಮನುಷ್ಯನೇ ಅಲ್ಲ…ಭಾವನೆಗಳು ಮನಸ್ಸು ಮತ್ತು ಹೃದಯವನ್ನು ಒಂದುಗೂಡಿಸಿ ನಮಗೆ ಅದ್ಭುತ ಜೀವನವನ್ನು ಕೊಡಬಲ್ಲವು..ಹಾಗೆಯೇ ಭಾವನೆಗಳಿಗೆ ಪೆಟ್ಟು ಬಿದ್ದಾಗ ಅದ್ಭುತ ಜೀವನವೇ ಅಸಹನೀಯವೂ ಆಗಬಹುದು..
ಒಬ್ಬ ವ್ಯಕ್ತಿ ಯ ಬಗ್ಗೆ ನಿಮಗೆ ತುಂಬಾ ಒಳ್ಳೆಯವರು ಎಂಬ ಭಾವನೆಯಿದೆ ಅಂತಾದರೆ ಅಕಸ್ಮಾತ್ ಆ ವ್ಯಕ್ತಿ ಏನಾದರೂ ಯಾವುದೋ ಪರಿ ಸ್ಥಿತಿಗೆ ಸಿಕ್ಕಿಕೊಂಡು ನಿಮಗೆ ಇಷ್ಟವಿಲ್ಲದ ಯಾವುದಾದರೊಂದು ಸಣ್ಣ ತಪ್ಪು ಕೆಲಸ ಮಾಡಿದರೂ ಮುಗೀತು ಅವರ ಕುರಿತಾಗಿ ಎಷ್ಟೋ ವರ್ಷಗಳಿಂದ ಇದ್ದ ಅದ್ಭುತ ಭಾವನೆ ದೂರವಾಗಿ ಆ ವ್ಯಕ್ತಿ ಅಸಹನೀಯ ವ್ಯಕ್ತಿ ಎನಿಸಿಬಿಡುತ್ತಾರೆ..
ಭಾವನೆಗಳಿಗೆ ತಮ್ಮದೇ ಆದ ಸೌಂದರ್ಯ ಇದೆ..ಹಾಗೆ ಅವುಗಳು ಎಷ್ಟು ಸಂತೋಷ ತರಬಲ್ಲವೋ ಅಷ್ಟೇ ದುಃಖವನ್ನು ಕೊಡಬಲ್ಲವು..ಕೆಲವೊಮ್ಮೆ ಭಾವನೆಗಳ ಬೆನ್ನು ಬಿದ್ದು ನಮ್ಮನ್ನು ನಾವೇ ಕಳೆದುಕೊಳ್ಳುವವರೆಗೂ ಭ್ರಾಂತಿ ತರಬಹುದು…
“ಭಾವರಹಿತ ಬುದ್ದಿವಂತ” ಎನ್ನುವಂತೆ ಭಾವನೆಗಳು ನಮ್ಮನ್ನು ನಿಯಂತ್ರಿಸಿದರೆ ನಾವು ಹುಚ್ಚರಾಗುವುದು ಖಂಡಿತ ..ಹಾಗೇ ನಮ್ಮ‌ಭಾವನೆಗಳ ಮೇಲೆ ನಮಗೆ ನಿಯಂತ್ರಣ ಇದ್ದರೆ ನಾವು ಎಲ್ಲವನ್ನೂ ಮೀರಿ ಬೆಳೆಯುವ ಅದ್ಭುತ ಶಕ್ತಿ ಪಡೆದು ಬುದ್ದಿವಂತರಾಗಬಹುದು.ಆಯ್ಕೆ ನಮಗೆ ಬಿಟ್ಟಿದ್ದು…


ಸ್ನೇಹಿತರೇ !!ಭಾವನೆಗಳಿಗೆ ಅತಿಯಾಗಿ ಜೋತುಬಿದ್ದು ಹುಚ್ಚರಾಗದಿರಿ.ಭಾವನೆಗಳು ಹಿಡಿತದಲ್ಲಿರಲಿ ಮಾರಾಟವಾಗುವುದು ಬೇಡ. ಇಲ್ಲವಾದರೆ ಎಲ್ಲರ ಮುಂದೆ ತುಂಬ ಕೀಳಾಗಿ ಕಾಣಿಸಿಕೊಳ್ಳುತ್ತೀರಿ.ನಿಮ್ಮ ಭಾವನೆಗಳಿಗೆ ಬೆಲೆ ಕೊಡದವರನ್ನು ಯಾವತ್ತೂ ಅಂಗಲಾಚಬೇಡಿ.ಸಮಯವೇ ಅವರಿಗೆ ತಿಳಿಸಲಿ ಬಿಟ್ಟುಬಿಡಿ. “ಕಾಲಾಯ ತಸ್ಮೈ ನಮಃ”ಶಾಂತಭಾವ ತಾಳಿ ಎಲ್ಲರ ಭಾವನೆಗಳನ್ನು ಗೌರವಿಸಿ.. ಶರಣು ಶರಣಾರ್ಥಿ.,

—————————————–


. ಮಹಾದೇವಿ ಪಾಟೀಲ್.

Leave a Reply

Back To Top