ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಬೆಟ್ಟದಾಚೆಯೊಂದು ಪುಟ್ಟ ಲೋಕದಲ್ಲಿ..

ದೂರಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು
ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು
ತಂಗಾಳಿ ಜೋಗುಳವ ಹಾಡಲಿ ಬೇಕು
..
ಎಲ್ಲರ ಕನಸಿನ ಮನೆ ಹೀಗೇ ಇರುತ್ತದಲ್ಲ! ಯಾವುದೋ ಬೆಟ್ಟದ ತುದಿಯಲ್ಲಿ, ನಿಸರ್ಗದ ಮಡಿಲಲ್ಲಿ, ಪುಟ್ಟ ಮನೆಯಲ್ಲಿ, ಪುಟ್ಟ ಸುಖೀ ಸಂಸಾರದ ಕನಸು. ಅಲ್ಲಿ ಯಾವ ಕಷ್ಟಗಳೂ ಇರಲಾರದು. ಪ್ರೀತಿ ತುಂಬಿ ತುಳುಕಾಡುವುದು. ಹಸಿರು, ಬಣ್ಣಬಣ್ಣದ ಹೂಗಳು, ಜುಳುಜುಳು ಹರಿವ ನದಿ, ಪುಟ್ಟ ಸೇತುವೆ, ಸ್ವಚ್ಛ ತಂಗಾಳಿ, ತೆರೆದ ಆಗಸ, ಸುಂದರ ಸೂರ್ಯೋದಯ..

ದೇಖೋ ಮೇನೆ ದೇಖಾ ಹೆ ಯೆ ಎಕ್ ಸಪ್ನಾ
ಫೂಲೋಂಕೆ ಶೆಹೆರ್ ಮೆ ಹೆ ಘರ್ ಅಪ್ನಾ..

ಈ ಕನಸಿಗೆ ಜೊತೆ ಕೊಡಲು ಒಬ್ಬ ಸಾಥಿ ಸಿಕ್ಕ ಮೇಲಂತೂ ಕನಸಿಗೆ ಸಾವಿರ ರೆಕ್ಕೆಗಳು. ಚಿಕ್ಕಂದಿನಲ್ಲಿ ಆಡಿದ ಮನೆಯಾಟದಂತೆ ಮತ್ತೆ ಕನಸಿನಲ್ಲೇ ಮನೆ ಕಟ್ಟುವ ಆಟ. ಇಬ್ಬರೂ ಸೇರಿಯೇ ಮಾತಲ್ಲೇ ಮನೆ ಕಟ್ಟುವ ಆಸೆ..

ಯಹಾ ತೇರಾ ಮೇರಾ ನಾಮ್ ಲಿಖಾ ಹೆ
ಯೆ ಹೆ ದರ್ವಾಝಾ ಜಹಾ ತೂ ಖಡೀಹೆ
ಯಹಾ ಸೆ ನಝಾರಾ ದೇಖೋ ಪರ್ಬತೋಂಕಾ
ಝಾಕೂ ಮೆ ಕಹಾಸೆ ಕಹಾ ಹೆ ಝರೋಕಾ..


ಮನೆಯ ಮುಂದೆ ತಮ್ಮಿಬ್ಬರ ಹೆಸರಿರಬೇಕು. ಇಲ್ಲಿ ಹೀಗೆ ಗೋಡೆಯಿರಬೇಕು, ಹಾಗೆ ಬಾಗಿಲಿರಬೇಕು. ಇಲ್ಲಿ ಹೀಗೆ ನಿಂತು ನೋಡಿದರೆ ಏನೆಲ್ಲಾ ಪ್ರಕೃತಿ ಸೌಂದರ್ಯ ಕಾಣಬೇಕು. ಕಿಟಕಿ ಎಲ್ಲಿರಬೇಕು, ಎಲ್ಲಿಂದ ಇಣುಕಿ ಹೊರ ಪ್ರಪಂಚ ನೋಡಬೇಕು ಎಂದೆಲ್ಲಾ ಲೆಕ್ಕಾಚಾರಗಳು. ಹಾಂ, ನೀರಿನ ವ್ಯವಸ್ಥೆ ಇದೆಯಾ ಎಂದು ಹುಡುಗಿಯ ಚಿಂತೆ. ಅವಳ ಹಣೆಯ ಬಿಂದಿಯಲ್ಲೇ ಬೆಳದಿಂಗಳನ್ನು ಕಾಣುವ ಆಸೆ ಹುಡುಗನದು. ಹುಡುಗಾಟವೆಲ್ಲ ಬಿಟ್ಟು ಮನೆಗೆ ಬೇಕಾದ್ದನ್ನು ತಾ ಎಂದು ಹುಡುಗಿಯ ತಕರಾರು. ಎಲ್ಲಾ ಬರಿಯ ಹುಚ್ಚು ಕನಸುಗಳು. ಅಡಿಗೆ ಕೋಣೆ ಚಂದ. ಮಲಗುವ ಕೋಣೆ ಮತ್ತೂ ಅಂದ. ಖುಷಿಯಾಗಿ ಮಾತಾಡಲು ಜಾಗವಿದೆ, ಆದರೆ ಮುನಿಸಿಕೊಳ್ಳಲು ಒಂದು ಕೋಣೆಯೇ ಇಲ್ಲ ಎಂಬ ತಗಾದೆ ಅವಳದು. ಜಗಳಕ್ಕೆ ಜಾಗವೇ ಇಲ್ಲ ಎನ್ನುವ ಜಾಣತನ ಅವನದು.
ಇಸ್ ಕಮರೆ ಮೆ ಹೋಗಿ ಮೀಠಿ ಬಾತೆ
ಉಸ್ ಕಮರೆ ಮೆ ಗುಝರೇಗಿ ರಾತೆ
ಯೆ ತೋ ಬೋಲೋ ಹೋಗಿ ಕಹಾಪೆ ಲಡಾಯಿ
ಮೆನೆ ವೋ ಜಗಹ್ ಹೀ ನಹೀ ಬನಾಯಿ..

ದೋ ದಿವಾನೆ ಶೆಹೆರ್ ಮೆ
ರಾತ್ ಮೆ ಯಾ ದೋಪೆಹೆರ್ ಮೆ
ಆಬ್ ಓ ದಾನಾ ಢೂಂಡ್ತೆ ಹೆ
ಎಕ್ ಆಶಿಯಾನಾ ಢೂಂಡ್ತೇ ಹೆ..

ಕನಸೇನೋ ಚಂದ. ವಾಸ್ತವ? ನಗರ ಜೀವನದಲ್ಲಿ ತಮ್ಮದೇ ಒಂದು ಮನೆ ಕಟ್ಟುವುದೇನು ಸುಲಭವಾ?
ಹಗಲು, ರಾತ್ರಿಗಳಲ್ಲಿ ಆ ಜೋಡಿ ಅನ್ನ, ನೀರೆಂಬ ಅವಶ್ಯಕತೆಗಾಗಿ ಮತ್ತು‌ ಅಸ್ತಿತ್ವವೆಂಬ ಗೂಡಿಗಾಗಿ ಹುಡುಕುತ್ತಲೇ ಹೋಗುತ್ತಾರೆ. ಚಕ್ರವ್ಯೂಹದಂಥ ತಲೆ ತಿರುಗಿಸುವ ಬೀದಿಗಳಲ್ಲಿ ತಮ್ಮದೇ ಒಂದು ಮನೆಗಾಗಿ ಹಂಬಲಿಸುತ್ತಾರೆ. ಆಕಾಶವನ್ನೆಲ್ಲ ತೋರುವ ಕಿಟಕಿಯೊಂದು ಇರಬಹುದಾದ ಮನೆಗಾಗಿ ಕಾಯುತ್ತಾರೆ. ಆಕಾಶದಷ್ಟು ಅವಕಾಶ ತೆರೆದುಕೊಳ್ಳಬಹುದೆಂದು ನಿರೀಕ್ಷಿಸುತ್ತಾರೆ. ವರ್ಣಿಸಲಾಗದ ಕಲಸುಮೇಲೋಗರ ಬಣ್ಣಗಳ ಕಣ್ಣುಗಳಲ್ಲೂ ಹೇಗಾದರೂ ನೆಲೆಯನ್ನು ಕಂಡುಕೊಳ್ಳಲು ನೆಪವೊಂದನ್ನು ಹುಡುಕುತ್ತಾರೆ.
ಅಂಬರ್ ಪೆ ಖುಲೇಗಿ ಖಿಡಕೀಯಾ
ಖಿಡಕೀ ಪೆ ಖುಲಾ ಅಂಬರ್ ಹೋಗಾ
ಅಸ್ಮಾನೀ ರಂಗ್ ಕಿ ಆಖೋಮೆ
ಬಸ್ನೆ ಕಾ ಬಹಾನಾ ಢೂಂಡ್ತೇ ಹೆ..

ಮೋಡದ ಮರೆಯ ಹುಣ್ಣಿಮೆ ತೆರೆಯ
ಚಿನ್ನದ ಮನೆಯ ಅಂಗಳದಲ್ಲಿ
ಒಂದಾಗಿ‌ ಓಲಾಡಿ ಪ್ರಿಯತಮ ನಾನು
ಮೈಮರೆತಿಹೆನು ಆನಂದದಿ..

Brahminy Starling


ಹುಡುಗಾಟ, ಹುಡುಕಾಟ, ಹೋರಾಟವೆಲ್ಲ ಮುಗಿದು ಕನಸುಗಳೆಲ್ಲ ವಾಸ್ತವವಾದರೆ ಇನ್ನೇನು? ಕಾಲು ನೆಲದಲ್ಲಿರದೇ ಹಾರಾಡದಿದ್ದೀತೇ? ತಮ್ಮದಾದ ಮನೆಯು ಬಂಗಾರದ್ದೇ ಎಂಬ ಭ್ರಮೆ. ಆ ಮೋಡ, ಆ ಹುಣ್ಣಿಮೆ, ಆ ಗಾಳಿ ಎಲ್ಲವೂ ತಮ್ಮದೇ. ಹಗಲು ಇರುಳುಗಳ ಹಂಗಿಲ್ಲದೆ ಹಾಡಿ ಕುಣಿಯುವುದೇ. ಪ್ರಣಯ ಪಕ್ಷಿಗಳಾಗಿ ಹಾರುವುದೇ. ಒಂದಾಗಿ ಮೈಮರೆಯುವುದೇ. ಪ್ರೇಮದ ಮಳೆಯಲ್ಲಿ ಕೊಚ್ಚಿ ಹೋಗುವುದೇ. ಈ ಪ್ರಪಂಚದಿಂದ ದೂರವಾಗಿ ತಮ್ಮದೊಂದು ಪ್ರೇಮಲೋಕ ಕಟ್ಟುವುದೇ..
ಹಗಲಿಲ್ಲ ಇರುಳಿಲ್ಲ ಸವಿಮಲ ಪ್ರೇಮ
ಮಳೆಗರೆದಿಹುದು ಯಾವಾಗಲೂ
ನನ್ನ ಪುಟ್ಟ ಸಂಸಾರ
ಲೋಕದಿಂದ ಬಹುದೂರ
ಪ್ರಯತಮನ ಪ್ರೇಮಗಂಗಾ
ತುಂಬಿ ಹರಿವ ಮಂದಿರಾ..


ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

Leave a Reply

Back To Top