ಕಾವ್ಯ ಸಂಗಾತಿ
ನಾಗರತ್ನ ಎಚ್ ಗಂಗಾವತಿ
ಮೌನದ ಪಯಣ
ನಿನ್ನ ನೆನೆದು ನನ್ನ ಮನವು ಕಂಬನಿಯ ಹಾಕಿದೆ.
ಆಡಿ ಕೂಡಿ ಬೆಳೆದನಂಟು ಮರೆಯಾಗಿದೆ.
ಕಣ್ಣ ಮುಂದೆ ಬಂದಹಾಗೆ ನಿನ್ನ ಬಿಂಬ ಕಂಡಿದೆ.
ಮೌನ ಮುರಿದು ಮಾತನಾಡೊಮ್ಮೆ
ಎಂದು ನನ್ನ ಮನವು ಕೊರಗಿದೆ.
ನೀನು ನಕ್ಕರೆ ಅದುವೇ ನನಗೆ ಸಿಹಿ ಸಕ್ಕರೆ.
ನಿನ್ನ ಮನದ ಕದವನೊಮ್ಮೆ ತೆರೆಯ ಬಾರದೆ.
ಈಗಲಾದರೂ ಬಂದುಬಿಡು ನನ್ನ ಮನವ ಮರುಭೂಮಿ ಮಾಡದೆ.
ಎನ್ನ ಮನದ ಗುಡಿಯಲ್ಲಿ
ಸವಿನೆನಪಾಗಿ ನೀನು ಉಳಿದರೆ.
ಅದುವೇ ನನಗೆ ಜಾತರೇ ಬಂದು ಸೇರು ಒಮ್ಮೆ ನನ್ನನ್ನು ಕಾಡದೇ.
Excellent lyrics
ಓಹ್ ! ಸೂಪರ್ ಮನದ ಬಯಕೆಯ ಪೂರೈಕೆಗಾಗಿ ಹಂಬಲಿಸುವ ಪರಿ ಮನಮೋಹಕ. ನಾನಾಗಿದ್ದರೆ ಕೂಡಲೆ ಬಂದುಬಿಡುವೆ. ಸೂಪರ್ ಕವಿತೆ
Thank you