ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾವ್ಯ ಸಂಗಾತಿ

ಅರ್ಚನಾ ಯಳಬೇರು

ಜುಲ್ ಕಾಫಿಯ ಗಜಲ್

ಅಂತರಂಗದ ತುಮುಲಗಳಿಗೆ ತವರಾದ ಭಾವನೆಗಳೇ ಬಡವಾಗದಿರಿ
ಬತ್ತಿದೆದೆಯಲ್ಲಿ ಅರಳಲು ಹವಣಿಸುವ ತೋಯಜಗಳೇ ಮುದುಡದಿರಿ

ಆದೀತೇ ಸುಖ ಪ್ರಸವವು ಭೃಮೆಯೊಳು ಬಸಿರಾದ ಭವ್ಯ ಕನಸುಗಳಿಗೆ
ವ್ಯಥೆಯ ಬಲೆಯೊಳು ಸಿಲುಕಿ ಸೆಣಸುತಿಹ ನಲಿವುಗಳೇ ನರಳಾಡದಿರಿ

ನಿತ್ಯ ಕಾಯುತಿದೆ ಹೃದಯದವನಿಯು ಹಚ್ಚ ಹಸಿರಾಗಿ ಕಂಗೊಳಿಸಲು
ಪ್ರೀತಿ ಭಿಕ್ಷೆಯ ಬೇಡುತಲಿ ಬಸವಳಿದ ನಿಟ್ಟುಸಿರುಗಳೇ ಅಸುನೀಗದಿರಿ

ಮರೆಯಲ್ಲೆ ನಗುತಿದೆ ನಗ್ನ ಸತ್ಯವು ತಿರುಳಿಲ್ಲದ ಸಲ್ಲಾಪಗಳ ನಡುವಲಿ
ಒಲವ ಮುಂಜಾನೆಯಲಿ ಉಲಿವ ಪ್ರೇಮ ವಿಹಗಗಳೇ ವಿರಮಿಸದಿರಿ

ನೇಪಥ್ಯಕ್ಕೆ ಸರಿದ ನಲ್ನುಡಿಗಳು ಅರಸದಿರಲಿ ಆಪ್ತತೆಯನು ಅರ್ಚನಾ
ಕಬ್ಬಿನ ಜಲ್ಲೆಯಂತಾದ ಬದುಕಲಿ ಜನಿಸುವ ಭರವಸೆಗಳೇ ಕ್ಷೀಣಿಸದಿರಿ


About The Author

1 thought on “ಅರ್ಚನಾ ಯಳಬೇರು ಜುಲ್ ಕಾಫಿಯ ಗಜಲ್”

Leave a Reply

You cannot copy content of this page

Scroll to Top