ಪ್ರೊ ರಾಜನಂದಾ ಘಾರ್ಗಿ ಕವಿತೆ-ಕವಲೊಡೆದ ದಾರಿ

ಕಾವ್ಯ ಸಂಗಾತಿ

ಪ್ರೊ ರಾಜನಂದಾ ಘಾರ್ಗಿ

ಕವಲೊಡೆದ ದಾರಿ

ನಡೆದಾಗಿದೆ ಟಿಸಿಲೊಡೆದ ದಾರಿಗಳಲಿ
ದೂರ ಸಾಗುತ್ತ ಬರಡಾದ ಭಾವಗಳಲಿ
ಅಳಿಸಿ ಹೋಗುತ್ತಿವೆ ಹೆಜ್ಜೆ ಗುರುತುಗಳು
ಮಾಗುತ್ತಿವೆ ಹೃದಯದ ಗಾಯಗಳು

ಭೇಟಿಯಾಗುವ ಅಮೂಲ್ಯ ಘಳಿಗೆಗಳು
ಸ್ನೇಹ ಪ್ರೀತಿ ದಾಖಲಿಸಿದ ಎದೆಬಡಿತಗಳು
ಜನ್ಮ ಜನ್ಮಾಂತರದ ಸಾಂಗತ್ಯದ ಆಶಯಗಳು
ಭರವಸೆಯ ಮಾತು ವಾಗ್ದಾನಗಳು

ಕಮರಿ ಹೋಗುತಿವೆ ಕಂಡ ಕನಸುಗಳು
ಸುಳ್ಳಾಗಿ ಸೊರಗಿವೆ ಆಣೆ ಪ್ರಮಾಣಗಳು
ಹಳೆಯ ದ್ವನಿಗಳ ಮರೆತ ಕಿವಿ ಪಟಲಗಳು
ಕರಗಿ ಕಣ್ಮರೆಯಾಗುತಿಹ ನೆನಪಿನ ಸರಣಿಗಳು

ಮಿದುಳಿನ ಪದರಲ್ಲಿ ಎಲ್ಲೋ ಎನೋ ಅಡಗಿದೆ
ನೆನಪೋ ನೋವಿನ ಎಳೆತವೊ ತಿಳಿಯದಾಗಿದೆ
ನಡೆಯುತ್ತಿರುವ ದಾರಿ ಮತ್ತೆ ಕವಲೊಡೆಯುತ್ತಿದೆ
ಹಿಂದೆಳೆವ ಹೃದಯ ಹೊತ್ತ ಕಾಲು ಮುಂದೆ ಸಾಗಿದೆ


One thought on “ಪ್ರೊ ರಾಜನಂದಾ ಘಾರ್ಗಿ ಕವಿತೆ-ಕವಲೊಡೆದ ದಾರಿ

Leave a Reply

Back To Top