ಗಾಯಿತ್ರಿ ಬಡಿಗೇರ,ಕವಿತೆ-ಮರಣದ ಪಯಣ

ಕಾವ್ಯ ಸಂಗಾತಿ

ಗಾಯಿತ್ರಿ ಬಡಿಗೇರ

ಮರಣದ ಪಯಣ

ಪ್ರೀತಿಗೆ ಪಾತ್ರರಾದ ಅಚ್ಚುಮೆಚ್ಚಿನ ಜೀವಕೆ
ಬಿಟ್ಟು ಹೋಗುವ ಸಂಪತ್ತಿನ ಗಳಿಕೆ
ಮುಗಿಲು ಮುಟ್ಟುವ ಅಕ್ರಂದ ಶೋಕಕೆ
ತೀರಿದ ಮರುದಿನವೇ ಚಟ್ಟವೇರಿ ಹೊಗುವ ಮಸಣಕೆ

ತಿಂದು ಉಂಡು ಹೋಗುವ ಹಂಗಿನಮನೆ
ಬಾಳಿ ಬದುಕಿದ ರಂಗಿನಮನೆ
ಸಂಸಾರ ತುಂಬಿದ ಸಾಗರದ ಅರಮನೆ
ನನಗೆ ಶಾಶ್ವತವಲ್ಲ ಈ ಬಾಳಿನಮನೆ

ಬಂಧು ಬಳಗದ ತನುಮನವಿಲ್ಲ
ಉಸಿರಿಲ್ಲದೆ ಮಲಗಿರುವಾಗ ನೋವು ಕೋಪ ತಾಪತಾಪಗಳಿಲ್ಲ
ಶೋಕಿಸುವ ಜೀವಕೆ ಸಾಂತ್ವಿಸಲು ಮನಸ್ಸಿನಲ್ಲಿ ಭಾವವಿಲ್ಲ
ಮೌನವಾಗಿ ಚಟ್ಟವೇರಿ ಮರೆಯಾದಿಯಲ್ಲ

ಊರ ಹೊರಗಿನ ರುಧ್ರಭೂಮಿಯಲ್ಲಿ
ಕಟ್ಟಿಗೆ ಅಡಿ ಎತ್ತರದದಲ್ಲಿ
ಹೂ ಮಾಲೆಯ
ಶೃಂಗಾರದಲ್ಲಿಗ
ಧಗಧಗಿಸುವ ಉರಿಯುವ ಜ್ವಾಲೆಯಲ್ಲಿ
‌ಕಂಡು ಕಾಣದೆ ದೂರಾದೆಯಲ್ಲ

…………………….
ಗಾಯಿತ್ರಿ ಬಡಿಗೇರ .ಯಡಹಳ್ಳಿ

One thought on “ಗಾಯಿತ್ರಿ ಬಡಿಗೇರ,ಕವಿತೆ-ಮರಣದ ಪಯಣ

Leave a Reply

Back To Top