ಮಕ್ಕಳ ವಿಭಾಗ
ಆರಾಧ್ಯ ಎ ರಾವ್
ಆರಾಧ್ಯ ಎ ರಾವ್
4ನೇ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಕಿಲ್ಪಾಡಿ
ಮೂಲ್ಕಿ
ಪ್ರೀತಿ
(ಪುಟ್ಟ ಕಥೆ)
ಒಂದು ಊರಿನಲ್ಲಿ ಒಬ್ಬ ಹುಡುಗ ನಿದ್ದ. ಅವನ ಮನೆಯಲ್ಲಿ ಒಂದು ಬೆಕ್ಕು ಮತ್ತು ಒಂದು ದನವಿತ್ತು. ಹುಡುಗ ಬೆಕ್ಕನ್ನು ತುಂಬಾ ಪ್ರೀತಿಯಿಂದ ಬೆಳೆಸಿದ. ಆದರೆ ದನವನ್ನು ಸ್ವಲ್ಪ ಕೂಡ ಪ್ರೀತಿಸಲಿಲ್ಲ. ಆದರೆ ಒಂದು ದಿನ ಧನಕ್ಕೆ ತುಂಬಾ ಹುಷಾರಿಲ್ಲದಾಯಿತು. ಆ ದಿನ ಅದಕ್ಕೆ ಹಾಲು ಕೊಡಲಿಕ್ಕೆ ಆಗಲಿಲ್ಲ. ಆಗ ಅವನಿಗೂ ಕುಡಿಯಲಿಕ್ಕೆ ಹಾಲು ಇಲ್ಲದಾಯಿತು. ಅವನ ಬೆಕ್ಕಿಗೂ ಹಾಲು ಇಲ್ಲದಾಯಿತು. ಆ ದಿನ ಆ ಹುಡುಗನಿಗೆ ಅನಿಸಿತು ‘ಯಾಕೆ ನಾನು ಬೆಕ್ಕನ್ನು ಮಾತ್ರ ಪ್ರೀತಿಸುತ್ತೇನೆ? ಯಾಕೆ ದನವನ್ನು ಪ್ರೀತಿಸಲಿಲ್ಲ ಬೆಕ್ಕು ನಮ್ಮನ್ನು ಪ್ರೀತಿಸುತ್ತದೆ ಆದರೆ ಧನ ಹಾಲು ಗೊಬ್ಬರ ಎಲ್ಲ ಕೊಡುತ್ತದೆ . ಆದರೆ ನಾನು ಅದನ್ನು ಪ್ರೀತಿಸುವುದಿಲ್ಲ ಇದು ತಪ್ಪು’ ಎಂದು ಅವನಿಗೆ ಅನಿಸಿತು. ಆ ದಿನದಿಂದ ಅವನು ಬೆಕ್ಕು ಮತ್ತು ದನವನ್ನು ಪ್ರೀತಿಯಿಂದ ಬೆಳೆಸಿದ.
ನೀತಿ: ನಾವು ಎಲ್ಲಾ ಪ್ರಾಣಿಗಳ ನ್ನು ಪ್ರೀತಿಸಬೇಕು