ಮಾಜಾನ್ ಮಸ್ಕಿ-ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್

ಮಾತು ಬಿಡುವುದಾದರೆ ಬಿಟ್ಟುಬಿಡು
ನೋವು ಆಗುವುದಾದರೆ ಮೌನವಾಗಿಬಿಡು

ಅದೆಂಥದೋ ಬಯಕೆಯ ಮಿಂಚು
ಮರೆತು ಇರುವುದಾದರೆ ಇದ್ದುಬಿಡು

ಹಗಲುರಾತ್ರಿ ಭಾವತರಂಗಗಳ ಕೊರೆತ
ಸ್ಫೂರ್ತಿ ಕಳೆಯುವುದಾದರೆ ಕಳೆದುಬಿಡು

ಆತ್ಮೀಯ ಸುಗಂಧ ಎಲ್ಲೆಡೆ ಹಬ್ಬಿದೆ
ಅಸಹನೆ ಆಗುವುದಾದರೆ ಮುಚ್ಚಿಬಿಡು

ತಂಬೆಲರಿಗೆ ತಾವರೆ ಬಾಡುವುದೇ “ಮಾಜಾ”
ಒಲುಮೆ ತೊರೆಯುವುದಾದರೆ ತೊರೆದುಬಿಡು


Leave a Reply

Back To Top