ಅರುಣಾ ನರೇಂದ್ರ-ನಾನು ನಿನ್ನ ಹಾಗೆ ಹುಚ್ಚು ಹಿಡಿಸಿಕೊಂಡಿದ್ದೇನೆ

ಕಾವ್ಯ ಸಂಗಾತಿ

ಅರುಣಾ ನರೇಂದ್ರ

ನಾನು ನಿನ್ನ ಹಾಗೆ ಹುಚ್ಚು ಹಿಡಿಸಿಕೊಂಡಿದ್ದೇನೆ

ಅಕ್ಕ ನಾನು ನಿನ್ನ ಹಾಗೆ ಹುಚ್ಚು ಹಿಡಿಸಿಕೊಂಡಿದ್ದೇನೆ
ನನ್ನ ಚೆನ್ನಮಲ್ಲಿಕಾರ್ಜುನನಿಗಾಗಿ
ಕಾಡುವ ಬೇಡುವ ತೊಗಲ ತೀಟೆಯ
ಗಂಡುಗಳನೊಯ್ದು ಗುಂಡು ಹಾಕವ್ವಎಂದು
ಅವನಿಗಾಗಿಯೇ ಕೊರಗುತ್ತೇನೆ ಕರಗುತ್ತೇನೆ || ಅಕ್ಕ||

ಹುಡುಕುತ್ತೇನೆ ಗುಡಿ ಗುಂಡಾರಗಳಲಿ
ಬಾರಿನ ಅಂಗಡಿ ಉದ್ಯಾನ ಮಹಲುಗಳಲಿ
ಗಂಗೆ ನಿಂಗಿಯರ ಗುಡಿಸಲು ಗಳಲಿ

ಕೇಳುತ್ತೇನೆ ನವಿಲು ಗಿಳಿ ಕೋಗಿಲೆ ಕಬ್ಬಕ್ಕಿಗಳ
ನೀವು ಕಂಡೀರೆ ನೀವು ಕಂಡೀರೆ
ಅರಿಸುತ್ತೇನೆ ಬೆಳ್ಳಕ್ಕಿ ಗೊರವಂಕಗಳ ಹಿಂಡಿ ನೊಳಗೆ || ಅಕ್ಕ||

ಹಸಿವು ನೀರಡಿಕೆಗಳ ಸಹಿಸಿಕೊಂಡ ನನಗೆ
ಅವ ಕುಡಿಸಿದ್ದಾನೆ ಬಹುಕರಣೆ ಯಿಂದ
ಏಳು ಕೆರೆಯ ನೀರ !
ಹೇಗೆ ಮರೆಯಲಿ ಅಕ್ಕ ?|| ಅಕ್ಕ||

ಕೈಹಿಡಿದು ಕಾಣದಾದ ಮಾಯಕಾರನ
ಗುರುತು ಹೇಳಲೇನೇ ಅಕ್ಕ
ಗುಂಗುರು ಕೂದಲ ಗೊರವ
ಸ್ಮಶಾನವಾಸಿ
ಅಲ್ಲಲ್ಲ ..ಶಾಂತಿ ನಿವಾಸಿ !||ಅಕ್ಕ||

ಅಕ್ಕ ನೀನು ಲೌಕಿಕ ಗಂಡನ ಧಿಕ್ಕರಿಸಿ
ತೊಟ್ಟ ಅರವಿಯ ಹಂಗ ಹರಿದೊಗೆದಿ
ಗಿರಿಯ ತುದಿ ತಲುಪಿದಿ
ನಾನು… ಪತಿಯೆ ಪರ ದೈವವೆಂಬ
ಹುಚ್ಚು ಭ್ರಮೆಯಲ್ಲಿ
ತೊಟ್ಟುಕೊಂಡಿದ್ದೇನೆ ಬಂಧನದ ಬಳೆಗಳನ್ನು ||ಅಕ್ಕ||

ಒಳಗೊಳಗೆ ಕುದಿ ಕುದಿದು ಹಲಬು ಗೆಟ್ಟು ಹುಡುಕುತ್ತಿದ್ದೇನೆ
ಹುಬ್ಬುಗಂಟಿಕ್ಕಿದ
ಕೆಂಗಣ್ಣ ಕಾಲ ರುದ್ರನಿಗಾಗಿ


4 thoughts on “ಅರುಣಾ ನರೇಂದ್ರ-ನಾನು ನಿನ್ನ ಹಾಗೆ ಹುಚ್ಚು ಹಿಡಿಸಿಕೊಂಡಿದ್ದೇನೆ

  1. ಭಾವನಾತ್ಮಕ ಕವಿತೆ..

  2. ಚೆಂದ ಸಂವೇದನೆ ಕವಿತೆ..ಅಕ್ಕನ ಅರ್ಥ ದ್ವಿಗುಣವಾಯಿತು.

  3. ಭಾವಪೂರ್ಣ ಕವಿತೆ, ಮನಸ್ಸು ತುಂಬಿ ಬಂತು ಮೇಡಂ….. ಬಾಲನಾಗಮ್ಮ

Leave a Reply

Back To Top