ಅಕ್ಕಮಹಾದೇವಿ ಜಯಂತಿ ವಿಶೇಷ

ಲಲಿತಾ ಪ್ರಭು ಅಂಗಡಿ

ವೈರಾಗ್ಯದ ತವನಿಧಿ
ಮೋಹವೆಂಬ ಮಾಯೆಯ ದಿಕ್ಕರಿಸಿ
ಹಿತಮಿತ ಆಹಾರದ ಅರಿವು ತಿಳಿಸಿ
ಜಪತಪಗಳ ಧ್ಯಾನಕೆ ತಲೆಬಾಗಿಸಿ
ಅರಿವು ಅಂತಸತ್ವಗಳ ಅನುಸರಿಸಿ
ಜ್ಞಾನದ ಚೊಕ್ಕ ಚಿನ್ನ ನೀನು
ನೀನು ನೀನಾಗಿ ಲೋಕದ ಚೇಷ್ಟೆಗೆ
ಮನದ ಕೊಳೆಯ ಶುಭ್ರಗೊಳಿಸಿ
ವೈರಾಗ್ಯ ಶಿಖರದ ಮೆಟ್ಟಿಲೇರಿ
ಆಧ್ಯಾತ್ಮ ಕಳಸಕೆ ಸ್ತ್ರೀ ರತ್ನ
ಮಿಕ್ಕ ಹೋಹನ ಬೆಂಬತ್ತಿ
ಕೈ ಹಿಡಿದ ಕಾಂತೆ
ಕಂಕಣ ಕೈಗೆಕಟ್ಟಿ ಸ್ಥಿರಸೇಸೆನಿಟ್ಟು
ಮಲ್ಲಿಕಾರ್ಜುನನ ಮನದೊಡತಿ ನೀ
ಅಸನದಿಂದ ವ್ಯಸನದಿಂದ
ಅತಿಅಸೆಯಿಂದ ಬಳಲಿದ
ಹುಟ್ಟು ಸಾವಿನ ಗಂಡರಿಂದ ದೂರಾಗಿ
ಸಾವು ಕೇಡಿಲ್ಲದ ಚೆಲುವನ ಚೆಲುವೆ
ಅಳಿ ಸಂಕುಲ ಮಾಮರ
ಕೋಗಿಲೆಗಳ ಒಡನಾಡಿ
ಚೆನ್ನನ ಸುಳಿವು ಕೇಳಿದ ಚೆನ್ನಿ ನೀ
ಕಾಮ ಕ್ರೋಧ ಮೋಹಕೆ ತೆರೆ ಎಳೆದು
ಸೀರೆಯ ಸೆರಗು ತೊರೆದು ದಿಗಂಬರೆಯಾಗಿ
ಕೇಶಾಂಬರವ ಹೊದ್ದು ಅನುಭವ ಮಂಟಪದಲಿ
ಯೌವ್ವನದ ಸತಿಗೆ ಪತಿಯ ಕರುಹು
ಕೇಳಿದ ಅಲ್ಲಮನಿಗೆ
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ
ಚೆನ್ನನ ಸಂಗಾತಿಳೆಂದ ನೀ
ಬಸವಣ್ಣನ ಮಗಳಾಗಿ
ಚೆನ್ನಬಸವಣ್ಣನ ಜ್ಞಾನಕೆ ಶರಣಾಗಿ
ಕದಳಿಯ ವನ ಹೊಕ್ಕು ಕರ್ಪೂರ
ಬೆಳಗಿದ ವೈರಾಗ್ಯದ ತವನಿಧಿ ನೀ.


Leave a Reply

Back To Top