ಅಕ್ಕಮಹಾದೇವಿ ಜಯಂತಿ ವಿಶೇಷ
ಪುಷ್ಪ ಮುರಗೋಡ
ವಿರಾಗಿಣಿ ಅಕ್ಕಮಹಾದೇವಿ
ವೀರ ವಿರಕ್ತ ಶಿವಯೋಗಿಣಿ
ಉಡುತಡಿಯ ಅಕ್ಕ ವಿರಾಗಿಣಿ
ವಚನ ಸಾಹಿತ್ಯ ತರಂಗಿಣಿ
ಶರಣಯರಲಿ ತತ್ವ ಶಿಖಾಮಣಿ
ಅಕ್ಕಮಹಾದೇವಿ.
ಮಲ್ಲಿಕಾರ್ಜುನನೇ ಎನಗೆ ಗಂಡನೆಂದು
ಲೌಕಿಕದ ಮನೆ ತೊರೆದು
ಅಲೌಕಿಕದ ಮನೆ ಸೇರಿದ
ಅನುಭಾವದ ಆತ್ಮಜ್ಯೋತಿ
ಅಕ್ಕಮಹಾದೇವಿ.
ಪ್ರಜಾ ರಕ್ಷಕನೇ ಭಕ್ಷಕನಾಗಲು
ಕಾಮಿಸಲು ಬಂದ ಕೌಶಿಕನ ತೊರೆದು
ಅನಿತ್ಯ ಕಾಮದ ಮೋಹನಳಿಸಿ
ದಿಗಂಬರವನ್ನೇ ದಿವ್ಯಾಂಬರವಾಗಿಸಿ
ಹರೆನೊಲುಮಿಗೆ ಹಾತೊರೆದು
ಹೋದವಳು ಅಕ್ಕಮಹಾದೇವಿ.
ಲೋಕದ ಗಂಡರ ಗೊಡವೆ
ಎನಗಿಲ್ಲ ಎನ್ನುತ
ಸಾವು ಕೇಡಿಲ್ಲದ
ಸೀಮೆ ನಿಸ್ಸೀಮೆ ಇಲ್ಲದ
ಭಯವಿಲ್ಲದ ಅಭವ
ಚೆನ್ನಮಲ್ಲಿಕಾರ್ಜುನನೇ
ಗಂಡನೆಂದು ಕಲ್ಯಾಣದತ್ತ
ಸಾಗಿದವಳು ಅಕ್ಕಮಹಾದೇವಿ.
ಹಸಿವೆಗೆ ಭಿಕ್ಷಾನ್ನಗಳುಂಟು
ತೃಷೆಗೆ ಕೆರೆಬಾವಿಗಳುಂಟು
ಶಯನಕ್ಕೆ ನಿರ್ಜನ ತಾಣ
ಪಾಳು ದೇಗುಲ ವಿಡಿದು
ಆತ್ಮಸಂಗಾತಕೆ ಚನ್ನಮಲ್ಲಿಕಾರ್ಜುನನ
ನೆನೆದು ಧ್ಯಾನಸ್ಥಳಾದಳು
ವೈರಾಗ್ಯ ನಿಧಿ ಅಕ್ಕಮಹಾದೇವಿ.
ಪುಷ್ಪ ಮುರಗೋಡ
ತುಂಬ ಅರ್ಥ ಪೂರ್ಣವಾಗಿ ಮೂಡಿಬಂದಿದೆ…ಮೇಡಂ