ಬಾಲಪ್ರತಿಭೆ-ಕು. ಸ್ವಾತಿ ಪ್ರಕಾಶ ಗೌಡ ಕವಿತೆಗಳು

ಮಕ್ಕಳ ವಿಭಾಗ

ಬಾಲಪ್ರತಿಭೆ-

ಕು. ಸ್ವಾತಿ ಪ್ರಕಾಶ ಗೌಡ ಕವಿತೆಗಳು

ಕು. ಸ್ವಾತಿ ಪ್ರಕಾಶ ಗೌಡ.
೫ ನೇ ತರಗತಿ.
ಸರ್ಕಾರಿ ಪ್ರಾಥಮಿಕ ಶಾಲೆ. ಭಾವಿಕೊಡ್ಲ. ನಂ – ೨ .
ದುಬ್ಬನ ಶಿಸಿ.
ಕುಮಟಾ.

ತಂದೆ – ಪ್ರಕಾಶ ಗೌಡ. ತಾಯಿ – ಪ್ರತಿಮಾ. ಕೂಲಿ ಮಾಡಿ ತುಂಬಾ ಅಚ್ಚುಕಟ್ಟಾಗಿ ಜೀವನ ನಡೆಸುತ್ತಿದ್ದಾರೆ. ಇಬ್ಬರು ಹೆಣ್ಣುಮಕ್ಕಳು. ಹಿರಿಯವಳಾದ ರಕ್ಷಿತಾ ಪ್ರತಿಭಾವಂತಳಿದ್ದು ೮ ನೇ ತರಗತಿಯಲ್ಲಿ ಓದುತ್ತಿದ್ದಾಳೆ . ಸ್ವಾತಿ ಕೂಡಾ ಪ್ರತಿಭಾವಂತಳಿದ್ದು ೫ ನೇ ತರಗತಿಯಲ್ಲಿ ಓದುತ್ತಿದ್ದು ತುಂಬಾ ಕ್ರಿಯಾಶೀಲ ವಿದ್ಯಾರ್ಥಿನಿ … ಭಾಷಾ ವಿಷಯದ ಪುಸ್ತಕದಲ್ಲಿಯ ಕಥೆ , ಕವನಗಳಿಗೆ ತನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಾಳೆ . ಉತ್ತಮ ಬರೆಹಗಾರಳಾಗುವ ಎಲ್ಲಾ ಲಕ್ಷಣಗಳಿವೆ.

ಕವಿತೆಗಳು

‘ನನ್ನ ಗುರು ‘

ನನ್ನ ಗುರುವು ನನ್ನ ಗುರುವು
ಪಾಠ ಕಲಿಸುವಲ್ಲಿ ಚಂದ
ನಡತೆ ನುಡಿಯಲ್ಲೂ
ಚಂದ
ನನ್ನ ಗುರುವು ನನ್ನ ಗುರುವು II ೧ II

ನನ್ನ ಗುರುವು ಪ್ರಾಮಾಣಿಕರು
ನನ್ನ ಗುರುಗಳ ಆಸೆಗಳೆಂದರೆ
ಎಲ್ಲರೂ ಸುಖವಾಗಿರಬೇಕೆಂಬುದು
ಎಲ್ಲಾ ಮಕ್ಕಳು ಅಭ್ಯಾಸದಲ್ಲಿ ತೊಡಗಿರಬೇಕೆಂಬುದು II೨ II

ನನ್ನ ಗುರುವು ತುಂಬಾ ಬುದ್ಧಿವಂತರು
ನನ್ನ ಗುರುವು ನನಗೆ ತುಂಬಾ ಇಷ್ಟ
ನನ್ನ ಗುರುವು ನನ್ನ ಗುರುವು
ನನಗೆ ತುಂಬಾ ತುಂಬಾ ಇಷ್ಟ

****

ನನ್ನ ಪ್ರೀತಿಯ ಗುರುವು

ಜಗತ್ತಿನಲ್ಲಿರುವ ದೇವರುಗಳಲ್ಲಿ
ನನ್ನ ಗುರುವು ಒಂದು
ಜಗತ್ತಿನಲ್ಲಿರುವ ಒಳ್ಳೆಯವರಲ್ಲಿ
ನನ್ನ ಗುರುವು ಒಂದು II ೧ II

ನನ್ನ ಗುರುವು ಯಾರ ತಂಟೆಗೂ
ಹೋಗಲಾರರು
ನನ್ನ ಗುರುವು ಸ್ವಲ್ಪವೂ ಗರ್ವ
ಪಡಲಾರರು II ೨ II

ನನ್ನ ಬದುಕಿನಲ್ಲಿ ಇಷ್ಟು
ಒಳ್ಳೆಯವರನ್ನು ಕಾಣಲಾರೆನು
ನನಗೆ ಇಂತ ಗುರುವು ಸಿಗಲಾರರು
ನನ್ನ ಗುರುವು ಕಂಡರೆ ನನಗೆ ತುಂಬಾ ತುಂಬಾ ಇಷ್ಟ II ೩ II

****

ಮಲ್ಲಿಗೆ

ಮಲ್ಲಿಗೆ ಮಲ್ಲಿಗೆ ಮಧುರವಾದ ಮಲ್ಲಿಗೆ
ನಿನ್ನ ಆ ರೂಪವು ಎಷ್ಟು ಚಂದ
ನಿನ್ನ ಆ ಸುವಾಸನೆ ಎಷ್ಟು ಗಂಧ
ಮಲ್ಲಿಗೆ ಮಲ್ಲಿಗೆ ಮಧುರವಾದ ಮಲ್ಲಿಗೆ II ೧ II

ಮಲ್ಲಿಗೆಯು ಹೂಗಳ ರಾಜ
ಮಲ್ಲಿಗೆ ನಿನ್ನನ್ನು ಎಲ್ಲರೂ ಮೆಚ್ಚುವರು
ನಿನ್ನನ್ನು ಕಂಡರೆ ಪ್ರೀತಿಸುವರು
ಮಲ್ಲಿಗೆ ಮಲ್ಲಿಗೆ ಮಧುರವಾದ ಮಲ್ಲಿಗೆ. II ೨II

         ------------------------------------
ಪರಿಚಯ ಮಾಡಿಸಿದವರು:
ನಾಗರಾಜ ಹರಪನಹಳ್ಳಿ


7 thoughts on “ಬಾಲಪ್ರತಿಭೆ-ಕು. ಸ್ವಾತಿ ಪ್ರಕಾಶ ಗೌಡ ಕವಿತೆಗಳು

  1. ಮಕ್ಕಳ ಮನಸ್ಸಿನಲ್ಲಿ ಮೂಡುವ ಭಾವಗಳು ಅತ್ಯಂತ ಪ್ರಾಮಾಣಿಕವಾಗಿ ಇರುವಂತವು….ಈ ಮಗು ಎಷ್ಟು ಚೆಂದ ಹೇಳಿದೆ…. ಈಗ ಹೇಳುವುದು ಮುಖ್ಯ…. ಶುಭವಾಗಲಿ ಕೂಸೇ…ಬರೆಯುತ್ತಿರು

  2. ಮಗುವಿನ ಮುಗ್ಧ ಮನಸಿನ ಲಹರಿಯ ಚಿತ್ರಗಳು,
    ಈ ಮಗುವಿನ ಕವಿತೆಗಳು.

Leave a Reply

Back To Top