ಶಂಕರಾನಂದ ಹೆಬ್ಬಾಳ ಕವಿತೆ-ಅವಳ ಹುಡುಕಾಟ

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಅವಳ ಹುಡುಕಾಟ

ಒಬ್ಬನೆ ನಿಂತಿದ್ದೇನೆ,
ಬಸಸ್ಟ್ಯಾಂಡಿನಲ್ಲಿ
ಅವಳ ಬರುವಿಕೆಗಾಗಿ ಕಾಯುತ್ತ,…!
ರಿಂಗಾದ ಪೋನ ಎತ್ತಿದೆ..
ಲೇ….ಎಲ್ಲಿದ್ದಿಯೆ…?
ಅವಳು ಇನ್ನು ಹತ್ತು ನಿಮಿಷ
ಬರುತ್ತೇನೆ….!
ಎಂದಾಗ ಕೊಂಚ ನಿರುಮ್ಮಳತೆ…!

ಬಂದು ಹೋಗುವ ಒಂದೊಂದು
ಬಸ್ಸು ಇಣುಕಿ ನೋಡಿದೆ,
ಅವಳಿದ್ದಿಲ್ಲ….
ಕಾಯುವಿಕೆಯಲ್ಲಿ ಕಾತರ,
ಅಲ್ಲೊಬ್ಬ…!
ಯಾರು ಬೇಕು ಸರ್….?
ಎಂದು ಉಸುರಿದ
ಜೋರು ದನಿಯಲ್ಲಿ…
ಯಾರು…ಇಲ್ಲ…?
ಆತ್ಮೀಯರೊಬ್ಬರು ಬರಬೇಕಿತ್ತು
ಒಳಗೊಳಗೆ ಗೊಣಗಿದೆ..
ಸರಿ…!
ಮನಸು ಜೋತಾಡುತಿತ್ತು
ತಾಸಾದರೂ ಬರಲೆಯಿಲ್ಲ
ಮರಳಿ ಪೋನಾಯಿಸಿದೆ
ಪೋನ್ ಸ್ವಿಚ್ ಆಫಯಿತ್ತು…

ತಲೆತಿರುಗಿಬಿದ್ದೆ
ಗಾಬರಿಯಲ್ಲಿ ಜನಸೇರಿ
ಯಾರೋ ಒಬ್ಬ ನೀರು ಚಿಮುಕಿಸಿದ,
ಎಚ್ಚರಗೊಂಡೆ,
ಈಗ ಪಲ್ಲಂಗದಿಂದ
ಬಿದ್ದು ನಿದ್ರಾಲೋಕದಿಂದ
ಹೊರಬಂದೆ .
ಆಹಾ…! ಇದು ಕನಸೆ….
ಎಂಥ ವಿಸ್ಮಯ…!

ಈಗಲೂ ಅವಳದೆ ಯೋಚನೆ
ಪೋನ ರಿಂಗಣಿಸಲು
ನನ್ನ ಪೋನ ಸ್ವಿಚ್ ಆಫೀತ್ತು…
ಥುತ್ ದರಿದ್ರವೆ…..
ಎಂದು ಸುಮ್ಮನಾದೆ…‌!

============================

Leave a Reply

Back To Top