ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಕವಿತೆ-ನಾವೆಲ್ಲರಿಲ್ಲಿ ಬಾಧಿಸಿದವರೆ..!

ಕಾವ್ಯ ಸಂಗಾತಿ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ನಾವೆಲ್ಲರಿಲ್ಲಿ ಬಾಧಿಸಿದವರೆ..!

ನಾವೆಲ್ಲರೂ-
ಇಲ್ಲಿ ವಿಷಮ
ಹಮ್ಮಿನವರೆ,
ಎದುರಿಗಿದ್ದವರ
ಚಹರೆಯ ಎಳಸು ಕನಸುಗಳ
ಎತ್ತಿ ಕಟ್ಟಿದವರೆ.

ನಾವೆಲ್ಲರೂ-
ಇಲ್ಲಿ ಸ್ಪುರದ್ರುಪಿಗಳೆ,
ಚೆಲುವಿದ್ದೂ-
ಮೆರೆದ ಕುರೂಪಿಗಳೆ,
ನಮ್ಮೊಳಗೆ ನಾವು
ನಲಿಯದೆ
ಇಲ್ಲದ್ದು ಇದೆಯೆಂದು
ತಮದ ಚಿತ್ರ ಬರೆದವರೆ

ನಾವೆಲ್ಲರೂ
ಇಲ್ಲಿ ಬೆಳೆದ
ಅಮಾಯಕರೆ,
ಗಾಯ ಮಾಯಿಸಿಕೊಳ್ಳದೆ
ಇಹದ ನಾಲಿಗೆ ಮೇಲೆ
ಮಚ್ಛೆಯಿರಿಸಿಕೊಂಡ
ಮಾಯಾ ರೂಪಿಗಳೆ

ನಾವೆಲ್ಲರೂ-
ಇಲ್ಲಿ ಮಿಡಿದ
ವ್ಯಾಘ್ರನ ಕಥೆ ಕೇಳಿದವರೆ,
ಗದ್ಗದಗೊಂಡರೂ
ಕತ್ತಲನು ಹೊಗಳಿ,
ಹಣತೆಯನು
ಗೇಲಿ ಮಾಡಿದವರೆ

ನಾವೆಲ್ಲರೂ-
ಇಲ್ಲಿ ಇಳಿದ
ಅವಕಾಶವಾದಿಗಳೆ
ನೂರಾರು ತಪ್ಪನು ನೀನು
ಸಾವಿರಾರು ತಪ್ಪನು ನಾನು
ದಕ್ಕಿಸಿ ಹೆಪ್ಪಿಟ್ಟವರೆ

ನಾವೆಲ್ಲರೂ-
ಇಲ್ಲಿ ಸುರಿದ
ಉಪ್ಪಿನಗೊಂಬೆಯೆ….!
ಉರಿದುರಿದು ಬಾಧಿಸಿದ
ಪಾಪಿಷ್ಟರೆ,
ಎಲ್ಲವನು ಪಡೆದರೂ
ಕೂಪವನೊರೆಸಲು
ದೇವರ ಮೊರೆ ಹೋದವರೆ


2 thoughts on “ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಕವಿತೆ-ನಾವೆಲ್ಲರಿಲ್ಲಿ ಬಾಧಿಸಿದವರೆ..!

Leave a Reply

Back To Top