ಅಮೃತ ಎಂ ಡಿ ರವರ ಕವಿತೆ-ಸಂಯಮ

ಕಾವ್ಯ ಸಂಗಾತಿ

ಅಮೃತ ಎಂ ಡಿ

ಸಂಯಮ

ಸಮಯ ಕಳೆದಂತೆ ಕಷ್ಟವೂ ಕಳೆಯುವುದು..
ನಗು-ನಗು ಮಗುವಾಗಿ
ನೋವು ಕೂಡ ಅಂಜುವುದು..

ಬದುಕು ಎಂದಮೇಲೆ ನೂರು
ಕಷ್ಟ ಬರುವುದು
ಸಂಬಂಧ ಎಂದ ಮೇಲೆ ನೂರು
ಮಾತು ಬರುವುದು.

ಎಲ್ಲವನ್ನೂ ಸ್ವೀಕರಿಸು
ನಾಳೆ ಕಾದಿದೆ ಹೊಸ ಬದುಕು
ನಿನಗಾಗಿ ತರುವುದು ನವೋಲ್ಲಾಸ

ಏಳು ಬೀಳು ಬಂದೆ ಬರುವುದು
ಬಿದ್ದರೆ ಅಲ್ಲವೇ ಮೇಲೆ ಏಳುವ ಛಲ ದಕ್ಕುವುದು
ಕಾಲಿಗೆ ಮುಳ್ಳು ತಾಗಿದರೆ ಅಲ್ಲವೇ
ಆ ಮುಳ್ಳ ಸರಿಸುವ ಗುಣ ಬರುವುದು.
ಹೂವ ಮೇಲೆ ನಡೆಯುವ ಶಕ್ತಿ ಬರುವುದು

ನಕ್ಕರೆ ಅಲ್ಲವೇ ನೋವಿನ ಆಳ ತಿಳಿಯುವುದು.
ಬೆಂದರೆ ಅಲ್ಲವೇ ಬದುಕು ಬಣ್ಣ ಕಟ್ಟುವುದು
ಇಂದು ಇದ್ದಂತೆ ನಾಳೆ ಇರುವುದಿಲ್ಲ
ಇಂದು ಇರುವ ದುಃಖ ನಾಳೆ ಜೊತೆಗೆ ಬರುವುದಿಲ್ಲ .

ಹಾವು ಏಣಿ ಆಟ ಈ ಬದುಕು
ಏಣಿ ಸಿಕ್ಕರೆ ಬಲು ಸಂತಸ
ಹಾವು ಸಿಕ್ಕರೆ ಹೊಸ ಜೀವನ ಪಾಠ..
ಅರಿಯಲೆ ಬೇಕು ಬದುಕಿನ ಏರಿಳಿತವ
ಅರಿತು ಬೆರೆತರೆ ಜೀವನ ಅದ್ಬುತ ಅಲ್ಲವೇ..

ಬೇಸರ ಬೇಗ ಕಳಿಯುವುದು
ಮೊಗದ ನಗು ದುಪ್ಪಟ್ಟು ಆಗುವುದು.
ನಡೆದ ಹಾದಿ ಇಂದಿಗಿಂತ ಕಷ್ಟ ಏನಲ್ಲ .
ನೂರು ಕಷ್ಟ ದಾಟಿದ ಮೇಲೆ
ನೂರು ನೋವು ದಾಟಿ ಬಂದ ಮೇಲೆ
ಈ ಒಂದು ಕಷ್ಟ ನೋವಿಗೆ ಯಾಕೆ ಅಂಜಬೇಕು…

ಸಮಯ ಕಳೆದಂತೆ ಎಲ್ಲವೂ ಮರೆಯಾಗುವುದು
ಧೈರ್ಯ ಆತ್ಮ ಸ್ಥೈರ್ಯ ಒಂದು ಜೊತೆಗಿರಲಿ..
ಸುಂದರ ಬದುಕು ಹಣತೆ ಆಗಿ ನಿಂತಿದೆ ಕಣ್ಣ ಮುಂದೆ.
ಸಂಯಮ ಜೀವನ ತಬ್ಬಿ ಹಿಡಿಯಲು ಕೈ ಚಾಚಿದೆ.


One thought on “ಅಮೃತ ಎಂ ಡಿ ರವರ ಕವಿತೆ-ಸಂಯಮ

Leave a Reply

Back To Top