ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಬೇಕಾಗಿದ್ದಾರೆ

ದ್ವೇಷದಾ ಬೇಗುದಿಯಲಿ
ಮೇಲು ಕೀಳಿನ ಕಚ್ಚಾಟದಲಿ
ನಿತ್ಯ ನಡೆವ ನಾಟಕದಲಿ
ಮೆರೆವ ಜನರ ಮಧ್ಯದಲಿ
ಎಲ್ಲವನೂ ತೊರೆದು ಬುದ್ಧ ಬಸವರ
ಹುದ್ದೆಗೆ ಯೋಗ್ಯ ಅಭ್ಯರ್ಥಿಗಳು ಬೇಕಾಗಿದ್ದಾರೆ
ಜನಮಾನಸರ ಭಾವನೆಗೆ
ಸ್ಪಂದಿಸುವ ಯೋಗ್ಯ ಅಬ್ಯರ್ಥಿಗಳು
ಬೇಕಾಗಿದ್ದಾರೆ
ಶತಶತಮಾನಗಳೆ ಕಳೆದವು ಆಜಾಗ
ಖಾಲಿ ಉಳಿದು
ಸಕಲರಿಗೆ ಲೇಸನೆ ಬಯಸುವ
ಎನಗಿಂತ ಕಿರಿಯರಿಲ್ಲ ಎನ್ನುವ
ತನ್ನಂತೆ ಪರರೆಂದು ತಿಳಿದ ಯೋಗ್ಯ
ಬಾಂಧವ್ಯದ ಭಾವನಾ ಅಬ್ಯರ್ಥಿ
ಅರ್ಜಿ ಹಾಕಿಕೊಳ್ಳಬಹುದು
ಕಾಲದೇವನೆ ನೇಮಕಾತಿ ಅಧಿಕಾರಿ
ಹಣದ ಹೆಂಡದ ವಸೀಲಿಯಂತೂ
ಮೊದಲೆ ಇಲ್ಲ
ಬೇಕಾದುದು ಕೇವಲ ಮಾನವರ
ಭಾವನೆಗೆ ಸ್ಪಂದಿಸುವವರು
ಮನುಜ ಮತದ ಬಾಂಧವ್ಯ ಕಾಪಾಡಲು
ವಿಶ್ವ ಶಾಂತಿಯ ಬಯಸುವ
ಬುದ್ಧ ಬಸವರ ಹುದ್ದೆಗೆ
ಯೋಗ್ಯ ಅಬ್ಯರ್ಥಿಗಳು ಬೇಕಾಗಿದ್ದಾರೆ
ತುಂಬಾ ಚೆನ್ನಾಗಿದೆ