ಅಡಿಗರ ಸಾಕ್ಷಿ ಪತ್ರಿಕೆ 37ನೇ ಸಂಚಿಕೆಯ ಮರುಓದು- ಭಾರತಿ ಅಶೋಕ್.

ವಿಶೇಷ ಲೇಖನ

ಈಚಿನ ಕನ್ನಡ ಕವಿತೆಗಳ ಕುರಿತ

ಸಾಕ್ಷಿ ೩೭ನೇ ಸಂಚಿಕೆ

(ಹೇಮಂತ)ಯ ಮರು ಓದು”

ಅಂತಿಮ ಭಾಗ-

ಕವಿಯಾದವನು ಅಥವಾ ಲೇಖಕನಿಗೆ ನೀನೇಕೆ ಬರೆಯುತ್ತೀ ಎಂದು ಕೇಳಿದರೆ,  ಆತನಿಂದ ಬರುವ ಉತ್ತರಗಳು ಹಲವಾರು. ಆದರೆ, ಅವೆಲ್ಲಾ ಸಕಾರಣಗಳೇ ಆಗಿರಲಾಗಿರದೇ ಇರಬಹುದು. ಮತ್ತು ಕೊಟ್ಟ ಕಾರಣಗಳಲ್ಲಿ ಅಲ್ಪ ಸ್ವಲ್ಪ ಸತ್ಯಾಂಶವು ಇರಬಹುದು. ಕೊಟ್ಟ ಕಾರಣಗಳಲ್ಲಿ ಕೆಲವರಿಗೆ ಬರೆಯುವುದು ಚಟವಾದರೆ, ಇನ್ನು ಕೆಲವರಿಗೆ ಭಾವ ಶುದ್ಧಿಗಾಗಿ ಇರಬಹುದು. ಎನ್ನತ್ತಾರೆ   ರಾಮಚಂದ್ರ ಶರ್ಮರವರು ತಮ್ಮ “ನಾನೇಕೆ ಕಾವ್ಯ ಬರೆಯುತ್ತೇನೆ” ಎನ್ನುವ ಲೇಖನದಲ್ಲಿ.

      ಅವನಲ್ಲಿ(ಲೇಖಕನಲ್ಲಿ) ಆಂತರ್ಯದ ತುಡಿತ ಹೆಚ್ಚಾದಂತೆ ಅದರ ಅಭಿವ್ಯಕ್ತಿಗಾಗಿ ಹಲವಾರು ಮಾರ್ಗಗಳನ್ನು ಕಂಡುಕೊಳ್ಳುತ್ತಾನೆ.  ಅದರಲ್ಲಿ ಮುಖ್ಯವಾಗಿ ಬರವಣಿಗೆ. ಇದು ಬೇಡ ಬೇಡವೆಂದರು ಅಂಟಿಕೊಳ್ಳುವ ಗೀಳಾಗಿಬಡುತ್ತದೆ. ಒಮ್ಮೆ ಆತನೇ ತನ್ನ  ಆಲಕ್ಕೆ ಇಳಿದು ನೋಡಿಕೊಂಡರೆ, ಅದು ಬರೀ ಚಟ ಅಥವಾ ಗೀಳಾಗಿರದೇ, ತನ್ನಿಂದ, ತನ್ನ ಕಾವ್ಯದಿಂದ  ಆಗಬೇಕಾದ ಕೆಲಸ ಬೇರೇನೋ ಇದೆ ಅದಕ್ಕಾಗಿ ತಾನು  ಬರೆಯುತ್ತೇನೆ. ಆ ಮೂಲಕ ಆ ಕಾರ್ಯ ಸಾದನೆಯಾಗುತ್ತದೆ ಎಂದು ಅರಿಯುತ್ತಾನೆ. ಇದು ಕೇವಲ ಒಬ್ಬ ಕವಿ ಅಥವಾ ಲೇಖಕನ  ಮಾತಾಗಿರದೇ ಪ್ರತಿಯುಬ್ಬ ಬರಹಗಾರನಿಗೂ ಅನ್ವಯಿಸುತ್ತದೆ. ಎಂದರೆ  ಅದು ಅವನ ಅಹಂಕಾರವೂ ಆಗಿರಬಹುದು. ಆದರೆ ಮನುಷ್ಯನ ಬದುಕು ಮಾಗಿದಷ್ಟು ಅವನು ಸಾವಿಗೆ ಹತ್ತಿರವಾಗುತ್ತಾನೆ. ಬರವಣಿಗೆಯು ಹದಗೊಳ್ಳುತ್ತದೆ. ಅವನು ಮಾಗಿದಷ್ಟು ಹೊರಗಿನ ಪ್ರಪಂಚ ಸಂಕುಚಿತಗೊಡು ಅನುಭವದ ವೈಶಾಲ್ಯ ಹೆಚ್ಚಾಗಿ  ಆಂತರ್ಯದಲ್ಲಿ ವಿಕಾಸಗೊಳ್ಳುತ್ತದೆ. ಹಾಗೆ ಆಂತರ್ಯದ ಭಾವಶುದ್ಧಿ ಆತನನ್ನು ಬರೆಯಲು ಪ್ರೇರೇಪಿಸುತ್ತದೆ. ಆತನ ಹೊರಗು ಸಂಕುಚಿತಗೊಂಡಿದೆ ಎಂದರೆ, “ಆತನಿಗೆ  ಹೊರಗಿನ ಆಗುಹೋಗುಗಳಿಗೆ ಆಸಕ್ತಿ ಇಲ್ಲ ಎಂದಲ್ಲ. ಆತನ ಕಾವ್ಯದ ಶಕ್ತಿ ಹೊರಗಿಲ್ಲ ಎಂದರ್ಥ”  ಆತನ ಜೀವನಾನುಭವ ಆತನನ್ನು  ಹೊರಗಿನಿಂದ ವಿಮುಖಗೊಳಿಸಿದೆ. ಅದು ಸಹ ಕಾವ್ಯ ರಚನೆಗೆ,  ಆದರೆ ಆತ ಬಾಹ್ಯ ಚೇತನಶಕ್ತಿಯಾಗಿರುತ್ತಾನೆ.  ಹೊರಗಿನ ಪ್ರಪಂಚದಿAದ ಒಳಪ್ರಪಂಚಕ್ಕೆ ಸ್ಥಳಾಂತರಗೊಂಡಿದೆ.

        ಒಂದುವೇಳೆ ಹೊರಗಿನ ಘಟನೆಗಳು ಕಾವ್ಯದ ವಸ್ತುವಾದರೂ  ಅದು ಅವನ ಅನುಭಾವ ಪರಿಧಿಯಿಂದ ಸಂಸ್ಕಾರಗೊಂಡೆ ಅಭಿವ್ಯಕ್ತಿಗೊಂಡಿರುತ್ತದೆ. ಕಾರಣಾಂತರದಿಂದ ನಾನು ದೇಶಬಿಟ್ಟೆ ಎನ್ನುವ ಲೇಖಕ(ರಾಮಚಂದ್ರ ಶವið)ರು “ಕಾವ್ಯದ ವಸ್ತು ನಾನೆ” ಎಂದಾಗ ಅಲ್ಲಿಗೆ ಯಾವ ಬದಲಾವಣೆಯೂ ಇಲ್ಲ.  ಏಕೆಂದರೆ, ಅವರ ಅನುಭವ ಏನಿದ್ದರೂ ಆಂತರ್ಯದ್ದು.  ಅದು ಈಗಾಗಲೇ ಅಂತರ್ಮುಖಿಯಾಗಿದೆ. ಇಲ್ಲಿದ್ದರೂ, ಎಲ್ಲಿದ್ದರೂ  ಅದು ಹೇಗೆ ಹೊರಹೊಮ್ಮಬೇಕೋ.. ಹಾಗೆ ಹೊರಹೊಮ್ಮುತ್ತದೆ.

       ನಾನು ಎನ್ನುವುದು ಒಮ್ಮೆ ಆಹಮಿಕೆಯಾರೂ ಅಲ್ಲಿ ಅಗಾಧವಾದ ಅನುಭವ ಚೇತನ, ತನ್ನತನದ ಸಂಸ್ಕಾರ ಎಲ್ಲಿದ್ದರೂ ಕಾವ್ಯಾಭಿವ್ಯಕ್ತಿಯ ಸಂಸ್ಕಾರವೊಂದೇ. ಅದೇ ಕಾವ್ಯದ ವಸ್ತು, ಆಕರ ಎಲ್ಲವೂ ಆಗಿರುವಾಗ ಎನ್ನುವುದು ಮೂರ್ತದ ಹೇಳಿಕೆಯಾದರೂ, ಅಮೂರ್ತದಲ್ಲಿ ನಾನು ಹೊರಗಿದ್ದೆ ಎನ್ನುವುದು, ಬಾಹ್ಯ  ಪ್ರಪಂಚದಿದ ಹೊರಗಿದ್ದೆ ಎನ್ನುವುದೇ ಆಗಿದೆ. ಕಾವ್ಯ ವಸ್ತು, ಆಕರ ಎಲ್ಲವೂ ನಾನೇ(ಲೇಖಕ) ಆಗಿರುವಾಗ ಅಂತರ್ಮುಖಿಯಾಗಿದ್ದು, ಬಾಹ್ಯದಿಂದ ದೂರ ಉಳಿದು, ಹೊರಗಿದ್ದೆ ಎಂದರೆ, ಅಂತರ್ಮುಖಿಯಾಗಿದ್ದೆ ಎಂದು ಹೇಳುವ ಧ್ವನಿ  ಪ್ರತಿಧ್ವನಿಸುತ್ತದೆ. ಆವತ್ತಿನಿಂದ ಈವೊತ್ತಿನವರೆಗೂ ನಾನೇ ಕಾವ್ಯದ  ವಸ್ತುವಾಗಿದ್ದೇನೆ ಎನ್ನುವಲ್ಲಿ ಅಗಾದವಾದ ಆತ್ಮಾಭಿಮಾನ  ಕಾವ್ಯಶಕ್ತಿ, ಅಂತಃಶಕ್ತಿ ಎಲ್ಲವೂ ಒಡಮೂಡುತ್ತದೆ.

         “ಬದುಕಿನ ಪ್ರತಿಯೊಂದು ಸಮಸ್ಯೆಗೂ ಸಾವೇ ಪರಿಹಾರವಲ್ಲ” ಹಾಗೊಂದು ವೇಳೆ ಸಾವು ಪರಿಹಾರವಾಗಿದ್ದಿದ್ದರೆ, ಮಹಾನ್ ಸಾಧಕರೆಲ್ಲರೂ ಏನನ್ನು ಸಾಧಿಸದೇ ಸಾವಿಗೆ ಶರಣಾಗುತ್ತಿದ್ದರು. ಏಕೆಂದರೆ, ಪ್ರತಿಯೊಬ್ಬ ಸಾಧಕರು  ಅಸಹನೀಯವಾದಂತಹ ಎಷ್ಟೋ ಸಮಸ್ಯೆಗಳ, ನೋವು, ಸಂಕಷ್ಟಗಳ ಮೊನೆಯಂದಲೇ ಬಂದವರಾಗಿರುತ್ತಾರೆ. ತಮ್ಮೊಳಗಿನ ಆತ್ಮವಿಶ್ವಾಸ ಬದುಕನ್ನು  ಸವಾಲಾಗಿ ಸ್ವೀಕರಿಸಿದಾಗ ತಮ್ಮೊಳಗಿನ ಸಾಯುವ ದುರ್ಬಲತೆಯನ್ನು ಕೊಂದುಕೊಂಡಾಗ “ಸಾಯುವ ಹಟ ತೊಟ್ಟು ಬದುಕಿದ್ದ ನಿನ್ನೊಳಗಿನ ಕೂಸು ಸತ್ತಾಗ” ಎಂತಹ ಸಾಧನೆಗೂ ತಮ್ಮನ್ನು ಸಜ್ಜಾಗಿಸುತ್ತದೆ. ಅವನು ಇತರರಿಗೆ ಮಾದರಿಯಾಗುತ್ತಾನೆ.

      “ಆತ್ಮಸಾಕ್ಷಿಯ ಮುಂದೆ ಯಾವ ಸಾಕ್ಷಿಯ ಅಗತ್ಯವಿಲ್ಲ” ಒಮ್ಮೆ ದ್ರೋಹಕ್ಕೆ ಒಳಗಾಗಿ, ಮತ್ತೊಮ್ಮೆ ದ್ರೋಹಿಯಾಗಿ ಅವೆರಡಕ್ಕೂ ಮನಸ್ಸೇ ಸಾಕ್ಷಿಯಾಗಿ, ಕ್ಷಮಿಸಿ, ಕ್ಷಮೆ ಬೇಡುವಂತೆ., “ನಮ್ಮ ಜನಕ್ಕೆ ಅವರೇನು ಮಡುತ್ತ್ತಿರುವರೆಂಬ ಅರಿವಿಲ್ಲದೇ ಮಾಡುವ ಕೆಲಸಕ್ಕೆ  ಕ್ಷಮಿಸಿಬಿಡು ಭಗವಂತ” ಎಂದು  ತನ್ನನ್ನು ಶಿಕ್ಷಿಸಿದವರ ಪರ ಪ್ರಾರ್ಥಿಸಿದ ಯೇಸು ಕೊನೆಗೂ, ಮೂರು ದಿನ ಇಹಪರದ ಹಂಗು ತೊರೆದು ಮತ್ತೆ  ಸಕಲ ಜೀವರಾಶಿಗೆ ಮಮತೆಯ ಅಮೃತ ಉಣಬಡಿಸಿದ ಯೇಸುವಿನಂತೆ ಜೀವನ ಸಾಗಬೇಕು.

         “ ಬದುಕು ಎಲ್ಲಾ ಕೊರತೆ ಜಂಜಾಟಗಳ ನಡುವೆಯೂ ನಿರಂತರವಾಗಿ ಸಾಗುವಂತದು”  ಬದುಕಿಗೆ ತನ್ನಿರುವನ್ನು ತಾನೇ ತೋರಿಸಿ, ಬದುಕಿಗಾಗಿ ಹೋರಾಟ ನಡೆಸಿ ಕೊನೆಗೂ ಇಹವನ್ನು ತ್ಯಜಿಸುವಂತೆ. ಯಾರದೋ ತಪ್ಪಿಗೆ ಇನ್ನಾರೋ ತಲೆ ಕೊಡುವಂತೆ, ಅಷ್ಟಾದರೂ ಲೋಕದ ನಿಂದೆಗೆ ಗುರಿಯಾಗುವುದು ಸಹಜವಾಗಿ  ತೋರುತ್ತದೆ. ಆದರೆ, ಒಮ್ಮೆ ಗೋರಿ ಸೇರಿದ  ಮೇಲೆ ಇದಾವುದರ ಹಂಗು ಇರುವುದಿಲ್ಲ. ಮಾನವನ ಜೀವನ ಬರುವಾಗ, ಹೋಗುವಾಗ ಒಂಟಿಯಾಗಿಯೇ ಸಾಗುತ್ತದೆ ಅವೆರಡರ ನಡುವೆ ಬಾಳಿನ ಜಂಜಾಟ. ಬಾಳಿನ ಈ ದಾರಿಯಲ್ಲಿ ಸಹ ಪ್ರಯಾಣಿಕರು ತಂತಮ್ಮ ತಾಣಗಳಿಗೆ ಇಳಿದು ಸಾಗುವಂತೆ ಕೊನೆಗೆ ಉಳಿಯುವುದು ಒಂಟಿಯಾಗಿ ಇದಕ್ಕೆಲ್ಲ ಮೂಖ ಸಾಕ್ಷಿಯಾಗಿ ನಿಂತವುದು ಅವನ ಆತ್ಮಸಾಕ್ಷಿ ಒಂದೇ.

    ಹುಟ್ಟು ಸಾವಿನ ನಡುವಿನ  ಬದುಕಿನ ಹೋರಾಟದಲ್ಲಿ ಮನುಷ್ಯ ಮಾಡಬೇಕಾದ, ಮಾಡಿದ ಕೆಲಸಗಳ ದಾಖಲೆ ಅವನು ಬರೆಯದೇ ಬಿಟ್ಟ ಕವಿತೆಯ ಸಾಲುಗಳನ್ನು ಬರೆಯುವ ಎದೆಗಾರಿಕೆ ಇದ್ದವರು ಬರೆಯಿರಿ ಇಲ್ಲದಿರೆ ಇದರಿಂದ ಯಾರಿಗೂ ನಷ್ಟವಿಲ್ಲವೆಂದು ಬಿಟ್ಟರೆ  ಅದು ಸತ್ತವನು ತೀರಿಸದೇ ಬಿಟ್ಟ ಸಾಲವೆಂದು  ಕವಿ” ರಾಮಚಂದ್ರ ಶರ್ಮ”ರವರು ತಮ್ಮ “ರಾಬರ್ಟ್ ಲವೆಲ್” ಎನ್ನುವ ಕವಿತೆಯಲ್ಲಿ  ಆಂಗ್ಲ ಕವಿ ರಾಬರ್ಟ್ ಲವೆಲ್ ರವರ ಬದುಕನ್ನು ಅವರ ಜೀವನದಲ್ಲಿ ನಡೆದ ಹತ್ತಾರು ನೈಜ ಘಟನೆಗಳ ಮೂಲಕ ವ್ಯಕ್ತಿತ್ವ ಚಿತ್ರಣವನ್ನು ಲಾವಣಿಯ ತರಹ  ಕಾವ್ಯದ ಮೂಲಕ ಶ್ರೀ ರಾಮಚಂದ್ರ ಶರ್ಮ ರವರು ಜೀವನದ ನಿರಂತರತೆಯನ್ನು ಹೆಣೆದಿದ್ದಾರೆ.

         ಒಬ್ಬ ಸಾಮಾನ್ಯನಾದ ಕವಿಗಿಂತ ವಿಶಿಷ್ಟವಾದ ಕವಿಯೂ ವಿಶೇಷವಾದ ಮನೋಧರ್ಮವನ್ನು  ಹೊದಿರುತ್ತಾನೆ .ಈತನ  ಅಂತರಾಳದಲ್ಲಿ ಸಾಮಾಜಿಕ ಪ್ರಜ್ಞೆ ಬಲವಾಗಿದ್ದು, ಮೂಲಭೂತ ಸಾಮಾಜಿ ಪ್ರಶ್ನೆಯೂ ಬಲವಾಗಿ ಕಾಡುತ್ತಿರುತ್ತದೆ. ಆ ಪ್ರಶ್ನೆಗೆ ಸದಾ ಉತ್ತರವನ್ನು ಹುಡುಕುತ್ತಾ ಇರುತ್ತಾನೆ. ಆದರೆ, ಸಾಮಾನ್ಯ ಕವಿಗೆ ಈ ತುಡಿತ ಇರುವುದಿಲ್ಲ. ಇದ್ದರೂ ಆ ಕಡೆ ವಿಶೇಷ ಹೋರಾಟಕ್ಕೆ ನಿಲ್ಲುವುದಿಲ್ಲ. ಆತನ ಸ್ವೀಕೃತ ಭಾಷೆಯ ಅನುಭವ ಪರಿಧಿಯಲ್ಲಿಯೇ ಕೃಷಿ ಮಾಡುತ್ತ ತೃಪ್ತನಾಗಿತ್ತಾನೆ. ಅಂದರೆ, ತನ್ನ ಅನಿಸಿಕೆಗಳನ್ನು ಸಿದ್ಧ ಅಚ್ಚಿನಲ್ಲಿ ಎರಕ ಹೊಯ್ಯುತ್ತಾನೆ. ಆತನ ಅನುಭವ ತುಡಿತವನ್ನು ಮೀರಿ ಹೋಗುವುದಿಲ್ಲ. ಆದರೆ,  ಪ್ರತಿಭಾವಂತನಾದ ಕವಿಯು ತನ್ನ ವಿಷೇಶ ಅನುಭವಗಳ ಅಭಿವ್ಯಕ್ತಿಗೆ ಹಳೇಯ ಕಾವ್ಯ ರೀತಿ, ಭಾಷೆ ಅಡ್ಡಿ ಎನಿಸಿದರೆ ಹೊಸ ಶೋಧನೆಗೆ  ಮುಂದಾಗುತ್ತಾನೆ. ಪರಂಪರೆಯಿಂದ ಕಲಿತ ಅನುಭವವನ್ನು ಹೊಸ ಶೋಧನೆಗೆ ಬಳಸಿಕೊಂಡು ಬದುಕನ್ನು ಅರ್ಥೈಸಲು ತೊಡಗುತ್ತಾನೆ. ಇಂಥ ವಿಶೇಷತೆಯನ್ನು, ಮನೋಧರ್ಮವನ್ನು ಅಡಿಗರಲ್ಲಿ ಕಾಣುವುದರಿಂದ ಅವರು ಮಹತ್ವದ ಕವಿಯಾಗಿ ಕಾಣುತ್ತಾರೆ ಎನ್ನುತ್ತಾರೆ, ಲೇಖಕರಾದ ಮಲ್ಲಿಕಾರ್ಜುನ ಹಿರೇಮಠ ಅವರು ತಮ್ಮ “ಅಡಿಗರ ಮನೋಧರ್ಮ” ಎನ್ನುವ ಲೇಖನದಲ್ಲಿ.

          ಅಡಿಗರು ಬದುಕಿನ ಬಗೆಗೆ ಆಳವಾದ ಚಿಂತನೆ ನಡೆಸುತ್ತಾರೆ. ಬದುಕಿನ ದ್ವಂದ್ವವನ್ನು ಪರಿಭಾವಿಸಲು ರೋಮ್ಯಾಂಟಿಕ್ ಅಭಿವ್ಯಕ್ತಿಯ ಅನುಭವಗಳೊಡನೆ ಸೆಣಸಾಡುವ ತಮ್ಮ ಪ್ರವೃತ್ತಿಗೆ ಆತಂಕವೆಂಬುದನ್ನು ಕಂಡುಕೊಂಡರು. ಸ್ವಾತಂತ್ರತ್ತರ ಕಾಲದ ಬದಲಾದ  ಪರಿಸರ, ಅಂತರಗದಲ್ಲಿ ಒಂದು ಬಗೆಯ ಕ್ರಾಂತಿಯನ್ನು ಹೊರ ಜಗತ್ತಿನ ಕಾವ್ಯಧ್ಯಯನ ಇವುಗಳ ಫಲವಾಗಿ ಅವರ  ಮನೋಧರ್ಮದಲ್ಲಿ ವಿಕಾಸ ಪಡೆಯುತ್ತದೆ. ಅವರ ಕಾವ್ಯದ ಹುಟ್ಟಿನಿಂದಲೇ ಸಮಕಾಲಿನ ಕವಿಗಳೆಲ್ಲ ಸಾಮಾನ್ಯ ಮನೋಭಾವಕ್ಕಿಂತ ಕೆಲವೊಂದುರೀತಿಯಲ್ಲಿ ಭಿನ್ನವಾದ ಮನೋಭಾವವನ್ನು ಕಾಣುತ್ತೇವೆ. ಆರಂಭದಲ್ಲಿ  ಸಮಕಾಲಿನ ರೋಮ್ಯಾಂಟಿಕ್ ಮನೋಭಾವ ತಾಳಿದರೂ ಸ್ವಪಜ್ಞತೆ, ಸ್ವಕೀಯ ಅಭಿವ್ಯಕ್ತಿಯ ಹಂಬಲಗಳಿಂದಾಗಿ ಅವರ ವ್ಯಕ್ತಿ ವಿಶೇಷತೆಯನ್ನು ಕಾಣುತ್ತೇವೆ.  ಸ್ವಕೀಯ ಅಭಿವ್ಯಕ್ತಿಯ ಸಾಧನೆಗೆ ಭಾಷೆಯ ಪುನರ್ ನಿರ್ಮಾಣ ಮಾಡಬೆಕೆನ್ನುವ ಧೋರಣೆ ತಾಳುತ್ತಾರೆ.  ಇದನ್ನು ಅವರ ಕವಿತೆಗಳಿಂದ ಲೇಖಕರು ಗ್ರಹಿಸಿದ್ದಾರೆ.

         ಆರಂಭದಿಂದಲೂ ಅಡಿಗರು ಹೋರಾಟದಪ್ರವೃತ್ತಿಯವರು. ಲೌಖಿಕ-ಅಲೌಖಿಕತೆಯ ಸಂಘರ್ಷ ನಡೆಯುತ್ತದೆ.  ಕವಿ ಅಂತರಂಗದ ಅನ್ವೇಷಣೆಗೆ ತೊಡಗಿದಂತೆ ಬಾಳಿನ ಶೋಧನೆಗೂ ಶುರುಮಾಡುತ್ತಾರೆ. ಅತೀ ಆದರ್ಶಪರತೆ, ಭೋಧಕತೆ, ಅತೀ ಕನಸುಗಾರಿಕೆ ಇವು ಅವರ ಆರಂಭಿಕ  ಮನೋಧೋರಣೆಗಳು. ಅದಕ್ಕೆ ತಕ್ಕ ಹಾಗೆ ಕಾವ್ಯದ ನಡಿಗೆ, ಭಾವಗೀತೆಯ ಗೇಯತೆ ಅನುಭವದ  ಸರಳ ನಿರೂಪಣೆ ಮಾರ್ಗ ತಿಳಿಯುತ್ತದೆ. ಪ್ರಾರಂಭದಲ್ಲಿ ಸ್ವಾತಂತ್ರ್ಯ ಪ್ರೇಮ, ದುಃಖ, ಬಡತನ, ದೇಶ ಪ್ರೇಮ ಹೋರಾಟ ಪ್ರಾರಂಭದಲ್ಲಿ ಇವುಗಳನ್ನು ಅಭಿವ್ಯಕ್ತಿಸುವ ರೀತಿ ರೋಮ್ಯಾಂಟಿಕ್ ರೀತಿಯಲ್ಲೇ. ಆದರೂ ಅವುಗಳ ಹಿಂದಿನ ಕನಸು ಭಾವತೀವ್ರತೆ ಹಾಗೆ ಇರುತ್ತದೆ.

     ಮಲೆನಾಡ ಹಿನ್ನಲೆಯಿಂದ ನಿರ್ಮಿತವಾಗಿರುವ ಕವಿತೆ ಭೂಮಿಗೀತ ಕವಿತೆ ಪುರಾಣ, ಪ್ರತಿಮೆ, ಪ್ರತೀಕಗಳನ್ನು ಬಳಸಿಕೊಂಡು  ಮನುಕುಲದ ಸ್ಥಿತಿಯ ಬಗೆಗೆ ಚಿಂತನೆ ನಡೆಯುತ್ತದೆ.ಕವಿ ಮನುಷ್ಯನ ಅಸ್ತಿತ್ವದ ಬಗೆಗೆ, ಬದುಕಿನ ಬಗೆಗೆ ಗಾಡ ಚಿಂತನೆ ಮಾಡುತ್ತಾರೆ. ಈ ಚಿಂತನೆ ಅನುಭವದಾಳದಲ್ಲಿಳಿ ಇಳಿದು ನಮ್ಮನ್ನು ತೀವ್ರವಾಗಿ ತಟ್ಟುತ್ತದೆ.

   ಅಡಿಗರಿಗೆ  ಕಾವ್ಯ ಮತ್ತು ಜೀವನ ಬೇರೆ ಬೇರೆ ಅಲ್ಲ  ಅವರ ಜೀವನ ಧೋರಣೆ ಮತ್ತು ಕಾವ್ಯ ಧೋರಣೆ ಒಂದೇ ತೊರೆಯಿಂದ ಬಂದಂತಹವು.  ಈ ದೃಷ್ಟಯಿಂದ  ಅವರ “ಪ್ರಾರ್ಥನೆ” ಕವಿತೆ ಮಹತ್ವದ್ದು. ಅವರು ದಾಸ್ಯ ಮತ್ತು ದಮನವನ್ನು  ಪ್ರತಿಭಟಿಸಿ,  ವ್ಯಕ್ತಿ ಸ್ವಾತಂತ್ರ್ಯದ ಮೌಲ್ಯವನ್ನು ಎತ್ತಿ ಹಿಡಿದರು. ತಮ್ಮನ್ನಾಗಲಿ, ಕಾವ್ಯವನ್ನಾಗಲಿ ದಾಸ್ಯಕ್ಕೀಡುಮಾಡಿಕೊಳ್ಳದ ಛಲದಿಂದ ಪ್ರಾರ್ಥನೆ ಕವಿತೆ ಪ್ರಾರಂಭವಾಗುತ್ತದೆ. ಆಸೆ, ಆಮಿಷಗಳಿಗಾಗಿ ಪರಾಕು ಪಂಪು ಹಾಕುವುದಾಗಲಿ, ಬಾಲ ಅಲ್ಲಡಿಸುವುದಾಗಲಿ  ಖಂಡಿತ ಇಲ್ಲ ಎಂದು ಹೇಳುತ್ತದೆ.

      ಅಡಿಗರು ಸಮಕಾಲಿನ ರಾಜಕೀಯ ವಾತಾವರಣದ ಬಗೆಗೆ ನಿಷ್ಟುರವಾಗಿ ವಿಮರ್ಶಿಸುತ್ತಾರೆ. ಅದರ ಹಿಂದೆ ಸಾತ್ವಿಕ ಅನತಾಪ ಇದ್ದೇ ಇರುತ್ತದೆ. ಭಾವತರಂಗದ ಕವಿಯ ಮನೋಧರ್ಮ,  ಭೂಮಿಗೀತ ವರ್ಧಮಾನ ಕವಿಯ ಮನೋಧರ್ಮ ಹೇಗೆ ಬೆಳವಣಿಗೆ ಹೊಂದಿತು ಫಲಪ್ರದವಾಯಿತು ಎಂಬುದನ್ನು ಕೆಲವು ಮಹತ್ವದ ಕವಿತೆಗಳು ಅರ್ಥವಂತಿಕೆ ಮೂಲಕ  ಸ್ವಲ್ಪಮಟ್ಟಿಗೆ ಅರಿಯು ಯತ್ನವಷ್ಟೆ. ಭಾವತರಂಗದಲ್ಲಿ ಬದುಕನ್ನು ಕಾಣುವ ಕವಿಯೇ  ಭೂಮಿಗೀತೆ ವರ್ಧಮಾನದಲ್ಲಿ ಇದ್ದಾನೆ. ಆದರೆ, ಇಲ್ಲಿ ಆತನ ಬೆಳವಣಿಗೆ ಕಾಣುತ್ತೇವೆ ಕವಿ ಮನಸ್ಸು ಹದಗೊಂಡು ಪಾಕವಾಗಿದೆ ಎನ್ನುತ್ತಾರೆ ಲೇಕಕರಾದ ಮಲ್ಲಿಕಾರ್ಜುನ ಹಿರೇಮಠ ಅವರು.

      “ಕಾವ್ಯ”ಅಡಿಗಚಿಚಿರಿಗೆ ಮೇಲು ಮೇಲಿನ ಮಾತಲ್ಲ ಅನುಭವಗಳನ್ನು ಪ್ರಾಮಾಣಿಕವಾಗಿ ಶೋಧಿಸಿ, ಬೆದಕಿ  ಮಾತು ಅಂತರAಗದ ಅನುಭವ ತದ್ರೂಪ ಆಗುವ ಹಾಗೆ ಅಭಿವ್ಯಕ್ತಿ ಕ್ರಮವನ್ನು ರೂಡಿಸಿಕೊಳ್ಳುತ್ತಾರೆ. ಅವರು ಬದುಕಿನ ದ್ವಂದ್ವವನ್ನು, ಸಂಕೀರ್ಣತೆಯನ್ನು ಪಿಭಾವಿಸಿ, ಆ ದ್ವಂದ್ವವನ್ನೇ ಕವ್ಯದಲ್ಲಿ  ಏರ್ಪಡಿಸುವ ಕ್ರಮವನ್ನು  ಶೋಧಿಸಿಕೊಳ್ಳುತ್ತಾರೆ. ಅವರ ಜೀವನ,  ಕಾವ್ಯ ದೃಷ್ಡಿ, ದೋರಣೇಗಳು,  ಬದುಕಿ ಕಾಳಜಿ, ಹೊಸ ಪ್ರಜ್ಞೆ ಸಂವೇದನೆಗಳು ಅವರ ಮನೋಭೂಮಿಕೆಯಲ್ಲಿ ವಿಶೇಷ ಕಾವ್ಯಾಭಿವ್ಯಕ್ತಿಗೆ ಸಿದ್ಧವಾಗುತ್ತದೆ. ಸ್ವೋಪಜ್ಞತೆ,ಸ್ವಕೀಯತೆ, ಅಂತರAಗದ ಅನ್ವೇಷಣೆ, ಬಾಳಿನರ್ಥ ಧೋಧನೆ, ಬದುಕಿ ಪೂರ್ಣತೆಯ ಹಾಗೂಅದರೆಡೆಗೆ ತುಯ್ತನದ ಪರಂಪರೆ ಕಲ್ಪನೆ, ವ್ಯಕ್ತಿ ವಿಶೇಷತೆಯ ಪ್ರಜ್ಞೆ, ಆದರ್ಶ, ವಾಸ್ತವ, ಮಾತು-ಕೃತಿ, ಅನುಭವ-ಅಭಿವ್ಯಕ್ತಿ, ಇವುಗಳ ಅನನ್ಯತೆ ಮೊದಲಾದ ವೈವಿದ್ಯಪೂರ್ಣ ಅನುಭೂತಿಗಳನ್ನು ಕವಿಯ ಮನಸ್ಸು ಪರಿಗ್ರಹಿಸಿ ಜೀರ್ಣಿಸಿಕೊಂಡು, ವಿಶೇಷ ಭಾಷೆ,  ಪ್ರತಿಮೆಗಳ ಮೂಲಕ ಕಾವ್ಯಕ್ಕೆ ಶ್ರೇಷ್ಡತೆಯನ್ನು ಒದಗಿಸುತ್ತದೆ. ತನ್ಮೂಲಕ ಕನ್ನಡ ಕಾವ್ಯವನ್ನು ಶ್ರೇಯಸ್ಸಿನೆಡೆಗೆ ಒಯ್ಯುತ್ತದೆ ಎನ್ನುತ್ತಾರೆ ಲೇಖಕರು.

          ಡಿ ವಿಜಯ ರವರ “ಶಂಬುಕ” ಎಲ್ಲಾ ಕಾಲದಲ್ಲೂ ತುಳಿತಕ್ಕೊಳಗಾದವರ  ಪ್ತತಿನಿಧಿಯಾಗಿದ್ದಾನೆ. ರಾಮನು”ಆಳುವ ವರ್ಗ” ದ   ಪ್ರತೀಕವಾದರೆ, ಅಗಸ್ತ್ಯನನ್ನು ಪಕ್ಷದ ಮುಖಂಡನನ್ನು ಮತ್ತು ಮಂತ್ರಿಗಳನ್ನು ತಮ್ಮ ಹಿಡಿತದಲ್ಲಿಟ್ಟು ದಾಳದ ತರಹ ಆಡಿಸುವ “ಹೈಕಮಾಂಡ್”ನಂತೆ  ಎಲ್ಲಾ ಕಾಲದಲ್ಲೂ ಒಪ್ಪುವ ರಾಜಕೀಯ ಚಿತ್ರಣವನ್ನು  ಕಣ್ಣಿಗೆ ಕಟ್ಟುವಂತೆ  ನಿರೂಪಿಸಿದ್ದಾರೆ.

     ಇಂದು ನೂರಾರು ಶಂಬುಕರು ಅನುಭವಿಸುವ ನೋವು ಹಿಂಸೆಗಳು ಎಂಥವರನ್ನು ನಿದ್ದೆೆಗೆಡಿಸಿ ಉಸಿರು ಕಟ್ಟುವಂತೆ ಮಾಡುತ್ತಿದೆ. ಒಬ್ಬ ಶಂಬುಕನನ್ನು ರಕ್ಷಿಸಲು, ಹಿಂಸಿಸುವವರ, ಮತ್ತು ಅದಕ್ಕೆ ಪ್ರಚೋದಿಸುವವರನ್ನು ತಡೆಯುವೆ ನಿನಗೆ ರಕ್ಷಣೆ ನೀಡುವೆ ಎಂದುಕೊಳ್ಳುತ್ತಿರುವಾಗಲೆಲ್ಲ “ಇದೋ ನಿನ್ನ ತಲೆ ಕಾಯಲು ಬಂದೆ…ಎನ್ನುವಾಗೆಲ್ಲ” ಮತ್ತೊಬ್ಬ ಶಂಬುಕನ ಹೆಣ ನೀನೊಬ್ಬ ಏನು ಮಾಡಲು ಸಾಧ್ಯ ಎಂದು ಅಣಕಿಸುತ್ತದೆ.  ಇಡೀ ಸಮಾಜವೇ ಅಗಸ್ತ್ಯ ಮತ್ತು ರಾಮನಂತವರೇ ತುಂಬಿರುವಾಗ  ಶಂಬುಕನಂತವರ ಬದುಕಿಗೆ ನೆಲೆ ಎಲ್ಲಿ?

    ಇಲ್ಲಿ ಈ ಸಮಾಜದಲ್ಲಿ ಶಂಬುಕನ ಮುಖವಾಡದಲಿ  ಅಮಾಯಕರ ತರಹ ಬದುಕುವವರೇ ಹೆಚ್ಚಾಗಿರುವಾಗ ಭಾರತದಂತಹ ರಾಷ್ಟ್ರದಲ್ಲಿ ಮಾತ್ರವಲ್ಲ ಪ್ರಪಂಚದ ಎಲ್ಲೆಡೆ ರಾಮ ಅಗಸ್ತ್ಯ ಶಂಬುಕರೇ  ತುಂಬಿದ್ದಾರೆ. ಮುಖವಾಡಗಳ ಮದ್ಯ ನಿಜವಾದ ಶಂಬುಕನನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ. ತನ್ನ್ಲದೆಲ್ಲವನ್ನು ಸ್ವಃ ಮಾಡಿ ಬಿಡುವುದನ್ನು ಬಲಹೀನನು ಕಂಡು ಕಾಣದಂತೆ  ಮರೆಯಲ್ಲಿ ನಿಂತು ದುಃಕಿಸುತ್ತಿದ್ದಾನೆ.  ಅಮಾಯಕರ ಮುಖವಾಡದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು   ಅಗಸ್ತ್ಯ ನಂತವರು ನಿಂತರೆ ನೂರಾರು ಶಂಬುಕರ ತಲೆ ಕತ್ತರಿಸಿ ರಕ್ತದ ಹೊಳೆ ಹರಿದು,  ಮೂಗಿಗೆ ಕಮಟು ವಾಸನೆ ಬಡಿದು  ರಾಮನಂತವರಿಗೆ ತಲೆ ಸುತ್ತದೇ ಇರಲು ಸಾಧ್ಯವೇ? ಒಂದುವೇಳೆ ರಾಮನ ಕತ್ತಿ ಶಂಬುಕನ ಕೈಯಲ್ಲಿ ಬಂದರೆ, ಆ ಕತ್ತಿಗೊಂದು ತಲೆ, ಅಗಸ್ತ್ಯರ ಹೃದಯಕ್ಕೆ ಕಣ್ಣು ಬಂದರೆ ನೋವಿಗೆ ಕೊನೆಯಾದೀತು.

        ರಾಮನಂತವರಿಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದ್ದಿದ್ದರೆ ಶಂಬುಕರ ರಕ್ತದ ಕೋಡಿ ಇತಿಹಾಸದುದ್ದಕ್ಕು ಹರಿಯುತ್ತಿರಲಿಲ್ಲ. ಆದರೀಗ ಮುಖವಾಡ ಹಾಕಿರುವ ಶಂಬುಕರು ತಾವು ಮಾಡುವ ಮೋಸ, ವಂಚನೆಯಂತಹ  ನೀಚ ಕೆಲಸಳಿಗೆ ನಿಜವಾದ ಶಂಬುಕರು ತಲೆ ಕೊಡುವುದನ್ನು, ಮತ್ತು ಅವನಿಗೆ (ನಿಜವಾದ ದಲಿತನಿಗೆ) ಸಿಗಬೇಕಾದ ಎಲ್ಲ ಸೌಲಬ್ಯಗಳನ್ನು (ಮುಖವಾಡದ)  ಶಂಬುಕನು ಕಬಳಿಸಿ ನುಂಗಿ ನೀರು ಕುಡಿಯುತ್ತಿದ್ದಾರೆ. “ಸವಲತ್ತುಗಳು ಈ ಹಂದಿಗಳ ಸಲೈವ ಗ್ರಂಥಿಗಳ ಕುಣಿಸುತ್ತಿವೆ” ಬಡವ ಗಂಜಿಗೂ ಗತಿ ಇಲ್ಲದ ಅಸ್ತಿ ಪಂಜರದಂತಿರುವ ದೇಹಕ್ಕೆ ಉಳ್ಳವನ ಚಾಟಿ ಏಟು. ತಿಂದು ತೇಗುವ ಕಮಟು ವಾಸನೆಯ ಬೀರುವ ಮುಖವಾಡದೊಳಗಿನ ಶಂಬುಕರನ್ನು ನೋಡುತ್ತ ಕಾಲ ಕಳೆಯುವ ಪರಿಸ್ಥಿತಿ ನಿಜವಾದ ಶಂಬುಕನದ್ದಾಗಿದೆ.

    ಇದೆಲ್ಲದರ ಮದ್ಯೆ ಕಳೆದು ಹೋಗಿರುವ ಮುಖವಾಡವಿರದ ನಿಜ ಶಂಬುಕನನ್ನು ಹುಡುಕುತ್ತ ಕವಯಿತ್ರಿ ಡಿ ವಿಜಯರವರು ನೀನು ಎಳ್ಲಿರುವೆ ಶಂಬುಕ. ನನ್ನ ಕಾಡಿ ತಿನ್ನುವ ಶಂಬುಕ ಮುಖವಾಡವಿರದ ನಿನ್ನ ಹುಡುಕುತ್ತಿದ್ದೇನೆ” ನಿನಗಾಗುತ್ತಿರುವ ಅನ್ಯಾಯಕ್ಕೆ ನೀನು ಯಾರ ವಿರುದ್ಧ  ಬಡಿಗೆ ಎತ್ತುವಿ? ಹೇಗೆ ಎತ್ತುವಿ? ಎಂದು ಪ್ರಶ್ನಿಸುತ್ತಾರೆ, ಹಾಗೆ ನೀನೆತ್ತಿದ ಬಡಿಗೆ ನಿನ್ನನ್ನೇ ಬಡಿದು ನಿನ್ನ ತಲೆ ನಿನ್ನ ನೆತ್ತರನ್ನೆ ನೆಕ್ಕಿ ನೆಲಕ್ಕೊರಗಿಕೊಂಡರೆ? ಎಂದು ಮುಖವಾಡವಿರದ  ಮೇಲ್ವರ್ಗದ, ಮೇಲ್ಜಾತಿಯ ದರೋಡೆಕೋರರ ದರ್ಪವನ್ನು, ದಲಿತನಿಗೆ ಸಿಗಬೇಕಾದ ಸವಲತ್ತುಗಳನ್ನು ಕಿತ್ತುಕೊಂಡು ದಲಿತರನ್ನು ಇನ್ನು ಆಳವಾದ ಕಂದಕಕ್ಕೆ ತಳ್ಳುತ್ತಿರುವಂತಹ ಮಹಾ ಮೂರ್ಖರ ವಿರುದ್ಧ ದಲಿತನ ಪರವಾಗಿ ಧ್ವನಿ ಎತ್ತಿದ್ದಾರೆ.(ಮುಗಿಯಿತು)

=========================

ಭಾರತಿ ಅಶೋಕ್.

Leave a Reply

Back To Top