ಲಕ್ಷ್ಮೀದೇವಿ ಪತ್ತಾರ ಕವಿತೆ-ಯಾವುದು ಹೌದು ಅದು ಅಲ್ಲ

ಕಾವ್ಯ ಸಂಗಾತಿ

ಲಕ್ಷ್ಮೀದೇವಿ ಪತ್ತಾರ

ಯಾವುದು ಹೌದು ಅದು ಅಲ್ಲ

ನೀತಿಗೆಟ್ಟವರು ನೀತಿ ನಿಯಮಗಳ ಪಾಠ ಮಾಡುವಾಗ ಖೇದವಾಗುವುದು
ದಾರಿ ಬಿಟ್ಟವರು ಸರಿ ದಾರಿ ಇದೆಂದು ಹೇಳುವಾಗ ರೋಷ ಉಕ್ಕಿ ಬರುತ್ತದೆ .

ಕಲಿಮಲಗೊಂಡವರು ಮಡಿ ಮೈಲಿಗೆಯ
ಬಗ್ಗೆ ಬೀಗುವಾಗ ಬೇಸರವೆನಿಸುವುದು

ಕೆಲಸ ಮಾಡದ ಮೈಗಳ್ಳರು ಕರ್ತವ್ಯ ಪ್ರಜ್ಞೆಯ ಬಗ್ಗೆ ಜಾಗೃತಿ ಮೂಡಿಸಲು ಬಂದರೆ
ಮೈ ಉರಿದೇಳುವುದು

ಸದಾ ಸ್ವಾರ್ಥ ಚಿಂತನೆಯಲ್ಲಿ ಮೈ ಮರೆತವರಿಗೆ
ಪ್ರೀತಿ, ಸ್ನೇಹ ,ಸೇವೆ ಕುರಿತು ಭಾಷಣ
ಮಾಡುವಾಗ ಕೇಳುಗರ ಮೇಲೆ ಜಿಗುಪ್ಸೆ ಬರುವುದು

ದೇಶ ಪ್ರೇಮ ಇಲ್ಲದೆ ದೇಶದ ಐಕ್ಯತೆ, ಸಮೃದ್ಧಿ ಗಾಗಿ ಬಡಿದಾಡದೆ, ಸವಲತ್ತುಗಳನ್ನು
ಪಡೆಯಲು ಹಂಬಲಿಸುವವರ ಕಂಡು ಕ್ರೋದಾಗ್ನಿ ಪುಟಿದೇಳುವದು.


ಲಕ್ಷ್ಮೀದೇವಿ ಪತ್ತಾರ

6 thoughts on “ಲಕ್ಷ್ಮೀದೇವಿ ಪತ್ತಾರ ಕವಿತೆ-ಯಾವುದು ಹೌದು ಅದು ಅಲ್ಲ

  1. ತುಂಬಾ ಅರ್ಥಪೂರ್ಣ ಕವಿತೆ. ಚೆನ್ನಾಗಿದೆ

  2. ವಿಷಯ ವಸ್ತು ಚೆನ್ನಾಗಿದೆ. ಗದ್ಯ ಕಾವ್ಯಮಯವಾಗಿದೆ. ಕ್ರಿಯಾ ಪದಗಳು ಆಯ್ಕೆ ಬಗ್ಗೆ ಗಮನ ಹರಿಸಬೇಕಿತ್ತು

  3. ಅರ್ಥ ಗರ್ಭಿತ ಸಾಲುಗಳು. ನೂರಕ್ಕೆ ನೂರು ಸರಿ. ಧನ್ಯವಾದಗಳು.

    1. ಸದಾಭಿಪ್ರಾಯಕ್ಕೆ ಧನ್ಯವಾದಗಳು ಸರ್

Leave a Reply

Back To Top