ಕಾವ್ಯ ಸಂಗಾತಿ
ಮತ್ತೆ ವಸಂತ
ಗಾಯಿತ್ರಿ ಮೋ. ಬಡಿಗೇರ
ನಡಗುವ ಚಳಿಗೆ ಸಾಂತ್ವಾನ ಹೇಳಿತ್ತು
ಬೇಸಿಗೆ ದಾಹಕ್ಕೆ ಸ್ವಾಗತ ಕೋರಿತ್ತು
ಬರಿದಾದ ವನಗಳ ಬನವು ಚಿಗುರಲು ಹಾತೋರಿಯಿತ್ತು
ಮಾವು ಬೇವುಗಳ ಸುಗ್ಗಿ ಸುರಿಯಿತ್ತು
ಬರಿದಾದ ವನವು
ಬರಡಾದ ಮರವು
ಬಂಜರವಾದ ನೆಲವು
ವಸಂತನಿಗೆ ನೀಡಿತ್ತು ಕರೆಯೋಲೆಯು
ಲೆಕ್ಕ ಸಿಗದ ಕುಡಿಗಳ ಚಿಗುರು
ಸೌಂದರ್ಯ ಚೆಲ್ಲಿದ ಹೂವುಗಳ ಪೊದರು
ಮೈದುಂಬಿ ಸೇರಗೊಡ್ಡಿ ಚಾಚಿರುವ ಹಸಿರು
ಪ್ರಕೃತಿಯನ್ನು ಕಂಗೊಳಿಸಿದ ಹಚ್ಚ ಹಸಿರಿನ ಉಸಿರು
ಪ್ರಕೃತಿಯ ಸೋಬಗಿಗೆ ಮೈಮನಸ್ಸೊತಾಗ
ಆನಂದಕ್ಕೆ ಹೃದಯದ ತಾಳ ಉಕ್ಕೆರಿದಾಗ
ನವಿಲೊಂದು ಗರಿ ಬಿಚ್ಚಿ ಕುಣಿಯಿತ್ತು
ಕೋಗಿಲೆಯೊಂದು ಸುಮಧುರ ಗಾನ ಹಾಡಿತ್ತು
ಎಲ್ಲಿ ನೋಡಿದರಲ್ಲಿ ಹಸಿರಿನ ತಾಣ
ಚಿಲಿಪಿಲಿ ಹಕ್ಕಿಗಳ ಗುಣಗಾನ
ಸುಗಂಧ ಪರಿಮಳ ಸೂಸಿದ ಮೊಗ್ಗಿ
ಬಾಯಿ ಚಪಲದ ಹುಳಿ ಹಣ್ಣಿನ ಸುಗ್ಗಿ-
–ಗಾಯಿತ್ರಿ ಮೋ. ಬಡಿಗೇರ