ಕಾವ್ಯ ಸಂಗಾತಿ
ಮಧುರಾ ಮೂರ್ತಿ
ಯೋಗ-ಯೋಗ್ಯತೆ
.
ತೆರೆಯಬಹುದು ಕೆಲವು ಕಾಲ
ಬಯಸದೆಯೆ ಭಾಗ್ಯದ ಬಾಗಿಲು
ಮಣ್ಣೂ ಹೊನ್ನಾಗಬಹುದು
ಯೋಗವದು ಕೂಡಿ ಬರಲು
ಯೋಗದಲಿ ಪಡೆಯುತ್ತ
ಗರ್ವವನು ತೋರುತ್ತ
ಮೆರೆಯದಿರು ಹೇ ಮನುಜ
ಯೋಗ್ಯತೆಯು ಬೇಕು
ಯೋಗ್ಯತೆಯು ಇರದಿರುವ
ಯೋಗಕ್ಕೆ ಬೆಲೆಯಿಲ್ಲ
ಅರ್ಹತೆಯ ಗಳಿಸುತ್ತ
ಸಮ್ಮಾನ ಹೊಂದು
ಯೋಗ್ಯತೆಯಿಲ್ಲದ ಯೋಗ
ಸದಾ ಇರುವುದು ಕನಸು
ಯೋಗ್ಯತೆಯ ಜೊತೆಯಲ್ಲಿ
ಯೋಗವಿರೆ ಸೊಗಸು