ಕಾವ್ಯ ಸಂಗಾತಿ
ಹನಿಬಿಂದು
ಭಾವಗೀತೆ
ಮನದ ಮೂರು ಮಾತಿನಲ್ಲಿ
ನೂರು ಭಾವ ಹರಿದಿದೆ
ಬನದ ಮೇಲಿನಿಂದ ಎಲ್ಲೋ
ಕುಕೂ ದನಿಯು ಕರೆದಿದೆ
ನಿತ್ಯ ಬರುವ ರವಿಯು ಇಂದು
ಬಿಸಿಯ ಹೊತ್ತು ಬಂದಿಹ
ಸತ್ಯ ಜಗದ ಜನರ ಮೇಲೆ
ಕೋಪ ತುತ್ತು ತಿನಿಸಿಹ
ಜಾಣ ಮನುಜ ಏಸಿ ಹಾಕಿ
ಬಿಸಿಲ ಉರಿಯ ಮರೆಯಲು
ಕೋಣದಂತೆ ಉಂಡು ತಿಂದು
ಎದ್ದು ಬಿದ್ದು ನಲಿಯಲು..
ಜನದ ತುಂಬಾ ಮನುಜನಾಟ
ದೇವಗೆಲ್ಲಿ ಭಕ್ತಿಯೂಟ
ನೋವು ನಲಿವು ಏನೇ ಇರಲಿ
ತನ್ನ ಲೋಕದಲ್ಲೆ ಆಟ..
ಶಕ್ತಿ ಭಕ್ತಿ ಯುಕ್ತಿ ಸ್ಪೂರ್ತಿ
ನ್ಯಾಯ ನೀತಿ ಬೇಕಿದೆ
ಮಾನವತೆಯ ವ್ಯಕ್ತಿ ಇಂದು
ಬುವಿಯ ನಡೆಸಬೇಕಿದೆ..