ಅನುವಾದ ಸಂಗಾತಿ
ಒಂದು ಮಾತು ಕೇಳಿದ್ದರೇ
ಮಲಯಾಳಂ ಮೂಲ: ಸುನಿಲ್ ಕುಮಾರ್.
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.
ಆತ್ಮಹತ್ಯೆ ಮಾಡಿಕೊಂಡ
ನತದೃಷ್ಟ ಒರ್ವನ ಬಳಿ ನಾವು
‘ಬದುಕು’ ಕೇಳಬೇಕು…..
ಆತ ಒಣಗಿ ಹೋಗದ
ಗಿಡದ ಹಸಿರು’ ಬೇರು’ಗಳನ್ನು
ನಮಗೆ ನೀಡಬಹುದು….!!
ಕ್ಯಾನ್ಸ್ ರ ಮಹಾ ರೋಗದಿಂದ
ನರಳುತ್ತಿರುವ ಹೆಣ್ಣುಯೊಬ್ಬಳ
ಬಳಿ ಕುಡಿಯಲು ‘ ನೀರು’
ಕೇಳಬೇಕು….
ದೇಹದಿಂದ ಗುರುತು ನಷ್ಟವಾಗಿರುವ
ಸ್ತನಗಳಿಂದ ಹಾಲು
ಉಣಿಸಬಹುದು ಅವಳು… !!
‘ಪ್ರಣಯ’ದ ಸೋಲಿನಿಂದ
ಒಂಟಿಯಾಗಿರುವ ಒರ್ವನ ಬಳಿ
‘ಭರವಸೆ’ಗಳನ್ನು ಕೇಳಬೇಕು….
ಸ್ವಾತಂತ್ರ್ಯಕ್ಕೆ ಆಸೆ ಹೊಂದಿ
ಬಲಿಯಾದ ಮೀನಿನ ನರಳಾಟ
ನಮಗೆ ಮರಳಿ ನೀಡಬಹುದು…!!
‘ಅಮ್ಮ’ ನಷ್ಟವಾಗಿರುವ
ಮಗುವಿನ ಬಳಿ ‘ಕನಸು’ಗಳನ್ನು
ಕೇಳಬೇಕು….
ಆಗ ನಾವು ಕಾಣದ
ಆಕಾಶದಲ್ಲಿರುವ ‘ ನಕ್ಷತ್ರ’ಗಳನ್ನು
ನಮಗೆ ತೋರಿಸಿಕೊಡುತ್ತದೆ…!!
ನೀವು ನನ್ನ ಬಳಿ
ಏನು ಬೇಕಾದ್ದರೂ
ಕೇಳಬಹುದು…..
ಬಿಸಿಲಿಗೆ ಒಣಗಿದ
ಒಂದು ಮರದಿಂದ ಬೀಳುವ
‘ಕವಿತೆ’ಗಳು ಎಂದು ನಾನು
ಕರೆಯುವ ಎರಡು ‘ ಸಾಲು’ಗಳನ್ನು
ನಿಮಗೆ ನೀಡುವೆ….!!!
ಮಲಯಾಳಂ ಮೂಲ: ಸುನಿಲ್ ಕುಮಾರ್.
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.