ಕಾವ್ಯಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಮಾಮರದಿ ಚೆಂದಳಿರು ಚಿಗುರಿದಾಗ ನಿನ್ನ ನೆನಪಾಗುವುದು
ಗುಲ್ಮೊಹರ್ ಬಿರಿದು ಅರಳಿದಾಗ ನಿನ್ನ ನೆನಪಾಗುವುದು
ಮುಸ್ಸಂಜೆಯ ಕೆಂಬಣ್ಣ ಧರೆಯ ಆವರಿಸಿದೆ ಅಲ್ಲವೇ
ನಭದಿ ತಾರೆಗಳು ಮಿನುಗಿದಾಗ ನಿನ್ನ ನೆನಪಾಗುವುದು
ಮುಸುಕು ಹಾಕಿದೆ ಮಂಜು ಗಿರಿಯ ಮೇಲೆ ಬೆಳ್ಳಗೆ
ಫಳಫಳ ಇಬ್ಬನಿ ಹೊಳೆದಾಗ ನಿನ್ನ ನೆನಪಾಗುವುದು
ಹಸಿರೆಲ್ಲ ತಬ್ಬಿದೆ ಗಿಡಮರ ಬಳ್ಳಿ ಎಲ್ಲವನು
ದೂರದ ನವಿಲೊಂದು ಕುಣಿದಾಗ ನಿನ್ನ ನೆನಪಾಗುವುದು
ಅಮಲೇರಿಸಿದೆ ರಾತ್ರಿ ರಾಣಿಯ ಘಮಲು ಬೇಗಂ
ಚಂದ್ರಿಕೆಯ ಹಾಲ್ನೊರೆ ಸುರಿದಾಗ ನಿನ್ನ ನೆನಪಾಗುವುದು
ಗಝಲ್ ಓದುವಾಗ ನಮಗೂ ನಿಮ್ಮ ನೆನಪಾಗುವುದು….