ನಾಗರತ್ನ ಎಚ್ ಗಂಗಾವತಿ ಕವಿತೆ-ಮೌನದ ಪಯಣ

ಕಾವ್ಯ ಸಂಗಾತಿ

ಮೌನದ ಪಯಣ

ನಾಗರತ್ನ ಎಚ್ ಗಂಗಾವತಿ

ಮೊಗವ ತೋರದೆ
ಮುನಿಸು ಏತಕೆ.

ನೀ ಮಾತನಾಡಲು
ಮೌನ ಮುರಿಯುವುದು.

ಕಹಿಯನ್ನು ಮರೆತು
ಸಿಹಿಯನ್ನು ಸವಿದು.

ನೀನು ಜೊತೆಗಿರೆ
ಬಾಳು ಬೆಳಗುವುದು.

ಸುಮ್ಮನೆ ಏತಕೆ
ಮನದ ಮಾತನು.

ನುಡಿಯಬಾರದು
ಒಮ್ಮೆ ನನ್ನೆದುರು.

ಸುಳಿ ಗಾಳಿ ಬೀಸಲು
ಮೋಡಸರಿದು.

ಸಿಡಿಲ ಬಡಿತಕ್ಕೆ
ಮಿಂಚು ಹೊಡೆದು.

ಬೆಳಕಿನಲ್ಲಿ ನೀ
ಮೂಡಿ ಬಂದಂತೆ.

ಚಿರಕಾಲ ನೀನು
ಎನ್ನ ಮನದಿ ಹಸಿರಾಗುವಂತೆ.

ಇಬ್ಬರು ಜೊತೆಯಾಗಿ
ಒಟ್ಟಾಗಿ ಸಾಗೋಣ.

ಬಾರದಿರಲಿ ನಮ್ಮಿಬ್ಬರ
ನಡುವೆ ಮುನಿಸು.

ಸದಾ ನಗು ನಗುತಾ
ಎನ್ನ ಹೃದಯ ಮಂದಿರದಲ್ಲಿ.

ನೀ ನೆಲಸಲೂ ಮ
ಮೂಡಿತು ಪ್ರೀತಿಯ ಅನುರಾಗ…

-[———————

Leave a Reply

Back To Top