ಯುಗಾದಿ ವಿಶೇಷದ ಬರಹಗಳು

ಗಝಲ್

ಶಂಕರಾನಂದ ಹೆಬ್ಬಾಳ

ಹಿಲಾಲು ಆರಿದ ಮೇಲೆ ಬೆಳಕು ಅರಸುವೆ ಏಕೆ
ಮನಸು ಮುರಿದ ಮೇಲೆ ಒಲವ ಹರಿಸುವೆ ಏಕೆ

ಸುರಿವ ಸೋನೆ ಹನಿಗಳು ಕೆಂಡವಾಗಿವೆಯಿಂದು
ಬಯಕೆ ತೀರಿದ ಮೇಲೆ ಆಸೆ ಬರಿಸುವೆ ಏಕೆ

ಕಣ್ಣಲ್ಲಿ ಕೊಲ್ಲುವ ನೋಟಕ್ಕೆ ಬಲಿಯಾದೆ ನಾನು
ಮಸಣ ಏರಿದ ಮೇಲೆ ಕಂಬನಿ ಸುರಿಸುವೆ ಏಕೆ

ಹೃದಯ ಉದ್ವಿಗ್ನಗೊಂಡು ಸಿಡಿಯುತ್ತಿದೆ ನೋಡು
ದುಃಖವ ಕಾರಿದ ಮೇಲೆ ತನುವ ಬೆರೆಸುವೆ ಏಕೆ

ಒಡಲ ಗಾಯಕ್ಕೆ ಮುಲಾಮು ಹಚ್ಚುತಿರುವೆಯಲ್ಲ
ಪಯಣ ಮುಗಿದ ಮೇಲೆ ಅಭಿನವನ ಕರೆಸುವೆ ಏಕೆ

ಶಂಕರಾನಂದ ಹೆಬ್ಬಾಳ

Leave a Reply

Back To Top