ಕಾವ್ಯ ಸಂಗಾತಿ
ಪ್ರೊ ರಾಜನಂದಾ ಘಾರ್ಗಿ
ಮೊಡಗಳ ಮರೆಯ ಚಂದ್ರ
ರಾತ್ರಿಯ ನಿವರತೆಯಲ್ಲಿ ಗಾಢತೆ
ಕತ್ತಲೆಯಲಿ ಕರಗಿದ ವಿವಶ ಮೌನ
ಕಾಣದ ಗೋಡೆಗಳ ನಡುವೆ ಬಂಧಿ
ರೆಕ್ಕೆ ಮುರಿದ ಹಕ್ಕಿಯ ಮನದ ತಲ್ಲಣ
ಎಕತಾನತೆಯಲ್ಲಿ ಮುದುರಿದ ಭಾವಗಳು
ಚಿಗುರಿನಲ್ಲಿಯೇ ಮುರುಟುವ ಕನಸುಗಳು
ಬೆರಳ ಸಂದಿಯಿಂದ ಸೋರುತ್ತಿರುವ ತಾಳ್ಮೆ
ಪಾತಾಳಕ್ಕಿಳಿಯುತ್ತಿರುವ ಸಂವೇದನೆಗಳು
ಕಾಣದ ಕಿಟಕಿಯಾಚೆ ಕಂಡ ಅವಕಾಶಗಳು
ಮುಚ್ಚಿದ ಬಾಗಿಲ ಹಿಂದೆ ಕಟ್ಟಿದ ಕೈಗಳು
ಬೆಳಕಿನ ಹಿಂದೆ ಕಾಣುವ ಕಪ್ಪು ನೆರಳು
ಮಾನಸೀಕತೆಯತ್ತ ತೋರುತ್ತಿದೆ ಬೆರಳು
ದಟ್ಟ ಮೋಡಗಳು ಆವರಿಸಿದ ಆಗಸ
ಅಡಗಿದ ಮೋಡಗಳ ಮರೆಯ ಚಂದ್ರ
ಧರೆ ಕಾಯುತಿದೆ ಕಣ್ಣರಳಿಸಿ ನೊಡುತಿದೆ
ಭರವಸೆಯ ಕಿರಣಗಳಿಗಾಗಿ ಹುಡುಕುತಿದೆ