ಪ್ರತಿ ಇರುಳಿಗೂ ಬೆಳಗಿನದೇ ಕನಸು

ಕಾವ್ಯ ಸಂಗಾತಿ

ಪ್ರತಿ ಇರುಳಿಗೂ ಬೆಳಗಿನದೇ ಕನಸು

ಡಾ. ಯಾ.ಮ.ಯಾಕೊಳ್ಳಿ

Happy young couple

ಸಂಜೆಗೂ ಇವಳಿಗೆ
ಕವಿತೆಯ ಸಂಗ ಬೇಕಂತೆ
ಹೀಗಾಗಿ ನಾನು ಕವಿತೆಯಾಗುತ್ತೇನೆ
ಇವಳು ಸಂಜೆಯಾಗುತ್ತಾಳೆ
ನಮ್ಮ ಸಂಜೆಗಳಲ್ಲಿ
ನಾವು ನಾವೇ ನಮ್ಮ ಒಳಗಣ ಕತ್ತಲೆಗೆ
ಬೆಳಕು ಅರಸುತ್ತೇವೆ.

ತನ್ನ ಕಾಲ ಕೆಳಗಿನ ಕತ್ತಲೆಯನೇ
ಬೃಹತ್ತೆಂದು ತಿಳಿದ ಈ ಲೋಕ
ಇಲ್ಲಿನ ಕತ್ತಲೆಗೆ ಬೆಳಕ ತರಲೆಂದು
ಹೋದವರ ಮರೆತೇ ಬಿಟ್ಟಿದೆ
ಇನ್ನು ನಾವು ಯಾವ ಲೆಕ್ಕವೆಂಬುದು
ನಮಗರಿವಿದೆ

ದೂರದಲ್ಲಿ ಎಲ್ಲೊ ಅಳುವ
ಕಂದನ ತೊಟ್ಟಿ ಲಲ್ಲಿ ಹಾಕಿ
ಹಾಡನೇ ಹಗ್ಗವಾಗಿಸಿ ತೂಗುವ
ತಾಯಿಯ ಲಾಲಿ ಹಾಡು ನಮಗೆ
ಮತ್ತು ಬರಿಸಿದೆ.ಅವಳ ಹಾಡಲ್ಲಿ
ನಾವು ಬೇಡದಿದ್ದರೂ
ದೂರವಾಗಿರುವ ಅವಳ ಇನಿಯನ
ಕಾಯುವಿಕೆಯಿದೆ
ಪಾಪ !ಕ್ರೂರಿ ಹೊಟ್ಟೆಯ ಹಸಿವಿಗೋ
ರಾಜನ ಆಜ್ಞೆಗೊ ಆತ ದೂರ ಹೋಗಿದ್ದಾನೆ

ಒಂಟಿ‌ ಕತ್ತಲಲಿ.ಅವಳ ದ್ವನಿ ಕೇಳಿದ
ಇವಳು ಇನ್ನಷ್ಟು ಹತ್ತಿರಕೆ ಸರಿದು ತನ್ನ
ಭಯಕೆ ತಾನೆ ಉತ್ತರವಾಗುತ್ತಿರುವಂತಿದೆ

ಎಂದೋ‌ ಒಮ್ಮೆ
ಅರಮನೆಯ ಲಾಯದಲಿ ಇಂಥದೆ
ಸಮಯದಲಿ ಒಂಟಿತನಕೆಂದು ಹಾಡು
ರಾಣಿಯ ನೆಮ್ಮದಿ ಕೆಡಿಸಿರಬಹದು
ರಾಜನ ನಿಸ್ಸಹಾಯಕತೆಗೊ
ತನ್ನ‌ ಪ್ರೇಮವನರಸುವ ರಾಣಿಯ
ಒಂಟಿತನಕೊ ಜೋಡಿ ದೊರಕಿಸಿರಬಹುದು
ಧರ್ಮ ವೆಂಬುದು ತುಂಬ ಸೂಕ್ಷ್ಮ
ಎಳೆಯಲಿ ಹೆಣೆದ ವಸ್ತ್ರ
ಅವರವರ ವ್ಯಾಖ್ಯಾನ ಅವರವರಿಗೆ ಭದ್ರ

ನನ್ನ ಅಸ್ತವ್ಯಸ್ತತೆಯನ್ನು ಮನಗಂಡ
ಇವಳು ನಸುಕೋಪದಿ ಇನ್ನಷ್ಟು
ಇತರ ಒತ್ತಿಕೊಂಡಾಗ ನಾನು
ಇವಳಿಗೆ ಬೆಳಕಾಗುತ್ತೇನೆ.
ಇವಳು ಲಾಲಿ ಹಾಡುತ್ತಾಳೆ
ಮತ್ತದೇ ಜೋಲಿ ಜೀಕುತ್ತ ಇನ್ನೊಂದು
ಬೆಳಗನರಸಿ ಇರುಳ ಕಳೆಯುತ್ತದ


Leave a Reply

Back To Top