ಬಿ.ಟಿ.ನಾಯಕ್ ಕವಿತೆ-ಚಿಂತೆ ಯಾಕ ಬೇಕು

ಕಾವ್ಯ ಸಂಗಾತಿ

ಬಿ.ಟಿ.ನಾಯಕ್

ಚಿಂತೆ ಯಾಕ ಬೇಕು

ಚಿಂತೆ ಯಾಕ ಬೇಕು ಮನಸ್ಸೀನಾಳಕ್ಕ,          
ಸಂತೆ ಮುಗಿಯಾಕ್ಕ ಬೇಕು ನಮ್ಜೀವಕ್ಕ,
ಅಂತೆ ಕಂತೆ ತಿರುಗ್ತಾವ ಮ್ಯಾಲ ಕೆಳಕ್ಕ.
ಭಾಳ ಭಾಳ ಆದ್ರೇ ಬೀಳೋದೇ ನೆಲಕ್ಕ.

ಜಂತಿ ಅಲುಗಾಡ್ಯಾವ ತಲೀ ಮ್ಯಾಲಕ್ಕ,
ಜಂತಿ ಮ್ಯಾಲೋಬ್ಬ ಇದ್ದಾನ ನೋಡ್ಲಕ್ಕ,
ಜೀವಿಗಳ ಯಾತ್ರೆ ತೀರ್ಮಾನ ಮಾಡ್ಲಕ್ಕ.
ಸಾಕು ಬೇಕೆಂಬೋದು ಅತಂದೇ ಲೆಕ್ಖಕ್ಕ.               .

ಉರ್ಳಿ ಹೋದಾವು ಜೀವಾತ್ನ ಬ್ಯಾಸರಕ್ಕ,
ಉಳ್ದಾವು ಎಲ್ಲಾ  ಜೀವ ಆತ್ನ ಕಾರುಣ್ಯಕ್ಕ,  
ನ್ಯಾಯ್ದ ತಕ್ಕಡಿ ತೂಗೋದು ಆತ್ನ ಅಕ್ಪಕ್ಕ,
ಮಹಾದೇವನೇ ದೈವ ಎಂಬುದಿರ್ಲಿ ಲಕ್ಷಕ್ಕ.  


12 thoughts on “ಬಿ.ಟಿ.ನಾಯಕ್ ಕವಿತೆ-ಚಿಂತೆ ಯಾಕ ಬೇಕು

  1. ಗ್ರಾಮೀಣ ಭಾಷೆಯ ಸೊಡಗಿನ ಚಿಂತೆ ಇಲ್ಲದ ಜೀವನ ಸಂದೇಶದ ಅರ್ಥವುಳ್ಳ ಕವಿತೆ ಚೆನ್ನಾಗಿದೆ. ಅಭಿನಂದನೆಗಳು

  2. ಕೇವಲ ಮೂರು ನುಡಿಗಳಲ್ಲಿ ಇಡೀ ಜೀವನದ ಸಾರವನ್ನೇ ಹಿಡಿದಿಟ್ಟಿದ್ದಾರೆ ನಾಯಕರು. ತಕ್ಕಡಿ ತೂಗೋದು ಮಹಾದೇವನೇ ಎಂಬುದನ್ನೂ ನೆನಪಿಸಿದ್ದಾರೆ ಜಾಣಪದಶೈಲಿಯಲ್ಲಿ. ಅಭಿನಂದನೆಗಳು.

    1. ನಿಮ್ಮ ಅನಿಸಿಕೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ಮ.ಮೋ.ರಾವ್ ಸರ್.

      1. ಜೀವನದ ಸಾರವನ್ನೇ ಉಣಬಡಿಸಿದ ನಿಮಗೂ ಓದಿಸಿದ ಸಂಗಾತಿ ಬಳಗಕ್ಕೂ ಶರಣು ಶರಣಾರ್ಥಿ

        1. ನಿಮ್ಮ ಸ್ಪೂರ್ತಿದಾಯಕ ಪ್ರೋತ್ಸಾಹಕ್ಕೆ ಧನ್ಯವಾದಗಳು. ನಿಜ, ಸಂಗಾತಿ ವೇದಿಕೆ ನನಗೆ ಅವಕಾಶ ಕೊಟ್ಟಿದೆ. ಹಾಗಾಗಿ, ಸಂಪಾದಕ ಮಂಡಳಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.

  3. ಮೂರು ದಿನದ ಜಾತ್ರೆಯಲ್ಲಿ ಚಿಂತೆ ಇಲ್ಲದೇ ಇರುವವನು ಯಾರೋ…? ಅರ್ಥಪೂರ್ಣ.

    1. ನಿಮ್ಮ ಪ್ರೋತ್ಸಾಹ ನನಗೆ ಉತ್ಸಾಹ ತಂದಿದೆ. ಧನ್ಯವಾದಗಳು ಸರ್.

  4. ಜೀವನದ ನಿಜ ಚಿತ್ರಣ ಬಿಂಬಿಸುವ ಕಾವ್ಯ ಚೆನ್ನಾಗಿ ಮೂಡಿ ಬಂದಿದೆ.

  5. ಆಧ್ಯಾತ್ಮಿಕ ಲೇಪವುಳ್ಳ ಕವನ ಸೊಗಸಾಗಿದೆ.
    Lifeಪು ಇಷ್ಟೆನೆ….

Leave a Reply

Back To Top