ಅಂಕಣ ಸಂಗಾತಿ

ಆತ್ಮ ಸಖಿ

ಈ ವಾರದಿಂದ ಭಾರತಿ ಅಶೋಕ್ ಅವರು ಸಂಗಾತಿಯಲ್ಲಿ ಆತ್ಮಸಖಿ ಅಂಕಣವನ್ನು ಪ್ರತಿ ಸೋಮವಾರ ಬರೆಯಲಿದ್ದಾರೆ

ನಾನು, ನಿಮ್ಮ ಆತ್ಮ ಸಖಿ!

ಸಂಗಾತಿ ಪತ್ರಿಕೆಯ ಸಂಪಾದಕರು ಸಂಪರ್ಕಿಸಿ, ಸಂಗಾತಿಯಲ್ಲಿ ಹೆಣ್ಣು ಮಕ್ಜಳಿಗೆ ಅಪ್ತವಾದಂತಹ ಬರಹಗಳ ಮೂಲಕ ಅವರನ್ನು ತಲುಪುವ ಮತ್ತು ಅವರ ಮನದ ಮಾತಿಗೆ ಧ್ವನಿಯಾಗುವ ಬರೆಹಕ್ಕೆ ವೇದಿಕೆ ಒದಗಿಸಿ ಕೊಡುತ್ತೇವೆ ನೀವು ಬರೆಯಬಲ್ಲಿರಾ? ನಿಮ್ಮ ಬದುಕಿನ ಅನುಭವಗಳನ್ನ ಬರಹದ ಮೂಲಕ ಹಂಚಿಕೊಳ್ಳುವುದಾದರೆ ಒಂದು ಅಂಕಣವನ್ನು ಪ್ರಾರಂಭಿಸೋಣ ಎಂದಾಗ ನಿಜಕ್ಕೂ ಸಂತಸವಾಯಿತು. ಇನ್ನು ಮಾತಿಲ್ಲದೇ ತುಂಬಾ ಸಂತಸದಿಂದ ನಾನಿದನ್ನು ಒಪ್ಪಿಕೊಂಡಿರುವೆ.

ಬದುಕಿನಲ್ಲಿ ಕಂಡುಂಡ ಹತ್ತು ಹಲವು ನೋವು, ನಲಿವುಗಳನ್ನು ಅಪ್ತವಾಗಿ ಹಂಚಿಕೊಳ್ಳುವ ಉದ್ಧೇಶದಿಂದ ನಾನಿದನ್ನು ಒಪ್ಪೊಕೊಂಡಿರುವೆ ಮತ್ತು ಪತ್ರಿಕೆಯದ್ದು ಅದೇ ಉದ್ಧೇಶ್ಯವಾಗಿದೆ.

ವರ್ತಮಾನದ ಬಿಡುವಿಲ್ಲದ ಯಾಂತ್ರಿಕ ಬದುಕು: ನಮ್ಮ ಬಾಲ್ಯ ಯೌವ್ವನ ಸಾಂಗತ್ಯಗಳನ್ನು ಕಿತ್ತುಕೊಂಡು ಯಾರು ಯಾರಿಗೂ ಅನಿವಾರ್ಯವಲ್ಲ ಎನ್ನುವ ಸ್ಥಿತಿಗೆ ನಮ್ಮನ್ನು ತಂದುಬಿಟ್ಟಿದೆ. ಕಾಲಿಗೆ ಚಕ್ರ ಕಟ್ಟಿ ಓಡಿಸುತ್ತಿದೆ. ನಿಂತು ಹಿಂತಿರುಗಿ ನೋಡುತ್ತಾ ಏನಾಗುತ್ತಿದೆ ಎಂದು ಯೋಚಿಸುವಷ್ಟು ಸಮಯ ಕೊಡುತ್ತಿಲ್ಲ. ಇಂತಹ ಹೊತ್ತಿನಲ್ಲಿ ಏಕಾಂತದ ಸ್ವಗತವೇ ಆಪ್ತವೆನ್ನುಸುತ್ತದೆ. ಅಂತಹ ಮಾತುಗಳನ್ನು ಅಂತರಂಗದ ಸಖಿಯೊಂದಿಗೆ ಹಂಚಿಕೊಳ್ಳುವ ಇಂಗಿತ ಈ ಆತ್ಮ ಸಖಿ ಅಂಕಣ

ಈ ವಾರ ನನ್ನನ್ನು ನಿಮಗೆ ಪರಿಚಯಿಸಿಕೊಳ್ಳುವುರಲ್ಲೆ ಸಂಪಾದಕರು ನೀಡಿದ ಪುಟಮಿತಿ ಮುಗಿಯುತ್ತ ಬಂತು. ಮುಂದಿನವಾರ ಹೃದಯ ತೆರೆದುಆತ್ಮದ ಮಾತುಗಳನ್ನಾಡೋಣ.
ಅಲ್ಲಿಯವರೆಗು ಶುಭವಿದಾಯ
( ನಿಮಗೆ ನನ್ನ ಮಾತುಗಳು ಏನನಿಸಿತು ಎಂದು ತಿಳಿಸಿ. ಕಮೆಂಟ್ ಹಾಕಿ)

*ಹಾಯ್”
ನಾನ್ ನಿಮ್ಮ ಅಂತರಾಳದ ಸಖಿ. ನಿಮ್ಮ ಗೆಳತಿ ನಿಮ್ಮೋಳಗೇ ಇರುವೆ. ನಿಮ್ಮ ಅಂತರಾಳದ ದನಿಯಾಗಿ ಸದಾ.ಇದ್ಯಾರು ನಮ್ಮೊಳಗಿನ ಗೆಳತಿ ಅಂತಿದಿರಾ ಒಮ್ಮೆ ನಿಮ್ಮ ಹೃದಯವನ್ನು ಮುಟ್ಟಿಕೊಳ್ಳಿ. ಸಿಗದು ಅಲ್ವಾ. ಹಾಗೆ ನಾನು ನಿಮ್ಮೊಳಗೆ ಇರುವೆ, ಕಾಣಲಾರೆ ಅದರೆ, ಸದಾ ನಿಮ್ಮೊಂದಿಗೆ ಇರುವೆ. ನಿಮ್ಮ ಮಾತಿನ ಪಿಸು ಧ್ವನಿಯಾಗಿ, ನೋವಿಗೆ ನಲಿವಾಗಿ, ಬವಣೆಗೆ ಸಾಂತ್ವಾನವಾಗಿ, ನಗುವಿಗೆ ಜೊತೆಯಾಗಿರುವೆ. ಕೆಲಸ ಮಾಡ್ತಾ ಒಹ್ ಎಷ್ಟು ದಣಿವು ಬಾ ಒಂದ್ ಕಪ್ ಟೀನೋ ಕಾಫಿನೋ ಮಾಡ್ಕೊಂಡು ಕುಡಿತಾ… ಅಬ್ಬಾ ಎಷ್ಟು ದಣಿವಾಗಿತ್ತು ರಿಲ್ಯಾಕ್ಸ್ ಮೂಡಿಗೆ ಬಂದ್ರಲ್ಲಾ. ಗೊತ್ತಾಯ್ತಾ ನಾನು ಜೊತೆಗೆ ಇದ್ದೆ. ಇವತ್ತಿಗೆ ಇಷ್ಟು ಕೆಲಸ ಸಾಕು, ಉಳಿದದ್ದು ನಾಳೆ ಮಾಡಿದ್ರಾಯ್ತು.ಅಂತಿರಲ್ಲ ಅದು ನಿಮ್ಮೊಳಗಿನ ನನಗೆ.

ನಿನ್ನ ಅರಿವಿನರಮನೆಯ ಕಾವಲು ನಾನು. ಎಲ್ಲ ಬಂಧನಗಳಿಗೂ ಮುಕ್ತಿಧಾತೆ ನಾನು. ನಿನ್ನ ಜಾಗೃತಿಯ ಸಾಕ್ಷಿ ಪ್ತಜ್ಞೆ ನಾನು

ಸದಾ ನಿನ್ನ ಪ್ರಜ್ಞೆಯಾಗಿ ಅರಿವನ್ನು ಎಚ್ಚರಿಸುತ್ತಾ ಎಡೆ ಬಿಡದೆ ಜೊತೆಗಿರುವ ಅತ್ಮ ಸಂಗಾತಿ ನಾನು.


ಈಗಾಗಲೇ ನಾನು ನಿಮಗೆ ಪರಿಚಿತಳು.ನನ್ನ ಪರಿಚಯ ಮುಂದೆ ನಮ್ಮ ಓದಿನೊಂದಿಗೆ ಸಾಗಲಿ
ಸಧ್ಯ ನಾನು ನಿಮ್ಮ ಆತ್ಮ ಸಖಿ


ಭಾರತಿ ಅಶೋಕ್

ಅವಿಭಜಿತ ಬಳ್ಳಾರಿ( ಈಗ ವಿಜಯನಗರ) ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಸೋಗಿ ಗ್ರಾಮದಲ್ಲಿ (ಜುಲೈ1ರಂದು )ಜನಿಸಿದ ಇವರು, ಪ್ರಸ್ತುತ ಹೊಸಪೇಟೆಯಲ್ಲಿ ವಾಗಿರುವ ಇವರು ಕನ್ನಡ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು , ಅಲ್ಲಿಯೇ “ಕನ್ನಡ ಹಾಸ್ಯ ಸಾಹಿತ್ಯದಲ್ಲಿ ವಿಡಂಬನೆಯ ತಾತ್ವಿಕ ನೆಲೆಗಳು” ಎನ್ನುವ ವಿಷಯದ ಮೇಲೆ ಸಂಶೋಧನೆಯನ್ನು ಕೈಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಸ್ಥಳೀಯ ಖಾಸಗೀ ಹೈಸ್ಕೂಲಿನಲ್ಲಿ ಮುಖ್ಯ ಶಿಕ್ಷಕಿಯಾಗಿ ಮಕ್ಕಳ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದರು, ಪದವಿಪೂರ್ವ ನಂತರ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಾ ತನ್ನಿಷ್ಟದ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಕಾವ್ಯದ ವಸ್ತುವೆಂದರೆ ಹೆಣ್ಣಿನ ಬದುಕನ್ನು ತಲ್ಲಣಗೊಳಿಸುವ, ಸಮಾಜಕ್ಕೆ ಮಾರಕ ಎನ್ನುವ ಸೂಕ್ಷ್ಮ ವಿಷಯಗಳು, ಹೆಣ್ತನಕ್ಕಾಗಿ ಕೃತಜ್ಞತೆ ಹೊಂದಿರುವ ಈಕೆ ಅದನ್ನು ಅದ್ಬುತವಾಗಿ ಅನುಭವಿಸುವ ಸಂವೇದನಾಶೀಲೆ.

Leave a Reply

Back To Top