ಮಕ್ಕಳ ವಿಭಾಗ
ನನ್ನವ್ವ
ನಾಗರತ್ನ ಹೆಚ್. ಗಂಗಾವತಿ


ನನ್ನವ್ವ ಮಾಡುತ್ತಾಳ
ಬಿಸಿ ಬಿಸಿ ರೊಟ್ಟಿ.
ಅದಕ್ಕ ನಾ ಹಾಕಿನಿ
ವಿಭೂತಿ ಪಟ್ಟಿ.
ನನ್ನಣ್ಣಗೆ ಬೇಕಂತೆ
ತುಪ್ಪ ಸವರಿದ ರೊಟ್ಟಿ.
ತಂಗಿಗೂ ಬೇಕಂತೆ
ರೊಟ್ಟಿ ಜೊತೆ ಹುಣ್ಸೆಣ್ ಚಟ್ನಿ.

ಅದಕ್ಕಾಗಿ ನಾವೆಲ್ಲ
ಹೊಂಟಿವಿ ತೋಟಕ್ಕೆ.
ಎಲ್ಲರೊಟ್ಟಾಗಿ ಖುಷಿಯಿಂದ
ಎತ್ತಿನ ಬಂಡಿ ಕಟ್ಟಿ…

ನಾಗರತ್ನ ಹೆಚ್. ಗಂಗಾವತಿ
Simply Superb madam.Remembered childhood days