
ಮಕ್ಕಳ ಕವಿತೆ
ಅರುಣಾ ರಾವ್
ಕಾಗೆ

ಕಾಕಾ ಕಾಗೆ
ಕಪ್ಪನೆ ಕಾಗೆ
ಹಾರುವೆ ಏಕೆ
ಅಲ್ಲಿಲ್ಲಿ??
ಅಗುಳನು ಕಂಡು
ಹರುಷದಿ ಬಂದು
ಕರೆಯುವೆ ಬಳಗವ
ನೀನಿಲ್ಲಿ|

ಹಂಚುವ ಬುದ್ಧಿ
ತೋರಿತು ಸಿದ್ಧಿ
ಮಾನವ ಕಲಿ ನೀ
ಪಾಠವನು|
ಕಾಗೆಗಿಂತಲೂ
ಕನಿಷ್ಟ ನೀನು
ತಿಳಿದುಕೊ ನಿನ್ನಯ
ನಿಜವನ್ನು
ಹಂಚಿ ತಿಂದರೆ
ಸಾರ್ಥಕ ಬದುಕು
ನೀತಿ ಪಾಠವನು
ಕಲೀಬೇಕು|
ಕೂಡಿ ಬಾಳುತಾ
ಹಂಚಿ ಬದುಕುತಾ
ಸಂತಸದಿ ದಿನ
ಕಳೀಬೇಕು

ಅರುಣಾ ರಾವ್