ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ಹೀಗೊಂದು ಇಂಗ್ಲಿಷ್ ನ ಕಮಲಾದಾಸ್ ಆವರ “The dance of Eunuchs” ಪದ್ಯದ ಅನುವಾದ

ಹೆಣ್ಣಿಗರ ಕುಣಿತ

The dance of Eunuchs

ಮೂಲ : ಕಮಲಾದಾಸ್ (ಇಂಗ್ಲಿಷ್)
ಕನ್ನಡಕ್ಕೆ ಅನುವಾದ: ವಿಶಾಲ್ ಮ್ಯಾಸರ್

ಅದು ಬಿಸಿಲು ನೆತ್ತಿ ಸುಡೋ ಬಿಸಿಲು
ಈ ಹೆಣ್ಣಿಗರು ಕುಣಿಯುವ ಮೊದಲು
ನೆಲಮುಚ್ಚುವಷ್ಟು ದುಂಡು ದುಂಡು ಲಂಗ
ಕೈಯಲ್ಲಿ ಚೈಯಂ ಚಕ್ಕಂ ತಾಳ
ಕಾಲಲ್ಲಿ ಗಲ್ ಗಲ್ಲು ಗೆಜ್ಜೆ
ಇಷ್ಟೆಲ್ಲಾ ನಡೆದದ್ದು ಸುಡುವ ಗುಲ್ಮೋಹರ್ ಕೆಳಗೆ.
ಉದ್ದುದ್ದ ಹಕ್ಕಿಗಳ ಹಾರಾಟ
ಕರಿಕಂಗಳ ಮಿರಿ ಮಿರಿ ನೋಟ
ಹಾಡಿದರು ಅವರು ಕುಣಿದರು ಮಯ್ಯಮೇಲೆ ಖಬುರು ಇಲ್ಲದೆ
ಕುಣಿದರು ಅವರು ದಣಿದರು
ಸೋರುತ್ತಿರುವ ಹಿಮ್ಮಡಿಯ ರಕ್ತ ನಿಲ್ಲದೆ
ಗಲ್ಲಕ್ಕೆ ಹಸಿರು ಹಚ್ಚೆ ತುರುಬಿಗೆ ಮಲ್ಲಿಗೆ
ಒಂದೊಂದು ಘಾಡ ಉಳಿದೆಲ್ಲವೂ ತಿಳಿ ಮೋಡ
*****
ದನಿಯೊಳಗೊಂದು ಗಡಸು
ಹಾಡು ಖೇದದ ಹುಲುಸು
ಧಾಟಿಯಲ್ಲಿ ಬಂದವು ಅವರವೆ ನೆಗೆದು ಬಿದ್ದು ಪ್ರೇಮ ಕಥೆಗಳು
ಹುಟ್ಟದೇ ಇರುವ ಅವರವೇ ಕಾರುಣ್ಯದ ಶಿಶುಗಳು
ಕೆಲವರು ಡೋಲು ಬಡಿಯುತಿದ್ದರು
ಇನ್ನೂ ಕೆಲವರು ತಮ್ಮ ಬರುಡು ಮೊಲೆಗಳನ್ನು…
ಗೋಳಾಡುದುತಿದ್ದರು ಖಾಲಿ ಖಾಲಿ ಭಾವೊನ್ಮಮಾದದಿಂದ.
ಒಣಮರದ ದಿಮ್ಮಿಯಂತೆ
ಅದೆಷ್ಟು ತೆಳ್ಳಗೆ ಅವರ ಕೈಕಾಲು
ಕೊಳೆತ ಅರ್ಧ ಸುಟ್ಟ ಹೆಣದ ಘಮಟು ಪ್ರತಿಯೊಂದರಲ್ಲೂ..
ಮರದಲ್ಲಿ ಕಾಗುಡದೆ ಕುಂತ ಕಾಗೆಗಳು
ಬೀದಿಯಲ್ಲಿ ಕಣ್ಣರಳಿಸಿ ಕೆಕ್ಕರಿಸುವ ಮಕ್ಕಳು
ಎಲ್ಲರ ಗಮನ ಸೆಳೆದದ್ದು ಈ ಪಾಪದವರ ಕುಣಿತ.
*
ಅಯ್ಯಯ್ಯೋ ಮೋಡದ ಹೊಟ್ಟೆ ಸೀಳಿತು
ಆಕಾಶದ ತುಂಬೆಲ್ಲ ಗುಡುಗು ಮಿಂಚು
ಜಿಟಿ ಜಿಟಿ ಮಳೆ ಹಾಕಿತ್ತು ಆಟ ಕೆಡಿಸುವ ಸಂಚು
ಮಂದಿ ಮುಗರಳಿಸಿತು ಮಣ್ಣ ಘಮಲಿನ ಉಸಿರು
ಹೆಣ್ಣಿಗರ ಎದೆಯಲ್ಲಿ ಹಲ್ಲಿ ಇಲಿಗಳ ಮೂತ್ರ ಬಸಿರು


ಮೂಲ : ಕಮಲಾದಾಸ್ (ಇಂಗ್ಲಿಷ್)
ಕನ್ನಡಕ್ಕೆ ಅನುವಾದ: ವಿಶಾಲ್ ಮ್ಯಾಸರ್

About The Author

3 thoughts on “ಹೀಗೊಂದು ಇಂಗ್ಲಿಷ್ ನ ಕಮಲಾದಾಸ್ ಆವರ “The dance of Eunuchs” ಪದ್ಯದ ಅನುವಾದ”

  1. ನಾಗರಾಜ್ ಹರಪನಹಳ್ಳಿ

    ಚೆನ್ನಾಗಿದೆ ಅನುವಾದ.
    ಅರ್ಥಪೂರ್ಣ, ‌ಧ್ವನಿಪೂರ್ಣ ಕವಿತೆ

Leave a Reply

You cannot copy content of this page

Scroll to Top